ಮತದಾನ ಮಾಡದಿರುವುದು ಸಂವಿಧಾನಕ್ಕೆ ಅಗೌರವ
ಆಲೂರು: ಮತದಾನ ಮಾಡುವುದು ನಮಗೆ ಸಂವಿಧಾನ ನೀಡಿರುವ ಹಕ್ಕು. ಮತದಾನ ಮಾಡದಿದ್ದರೆ ಸಂವಿಧಾನಕ್ಕೆ ಅಗೌರವ ತೋರಿಸಿದಂತಾಗುತ್ತದೆ. ಆದ್ದರಿಂದ ನಾವೆಲ್ಲರೂ ಮತದಾನ ಮಾಡಿ ಸಂವಿಧಾನಕ್ಕೆ ಗೌರವ ಸಲ್ಲಿಸಬೇಕು ಎಂದು ತಹಸೀಲ್ದಾರ್ ಮಹದೇವಯ್ಯ ತಿಳಿಸಿದರು. ಅವರು ಮತದಾರರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಪಟ್ಟಣದಲ್ಲಿ ಸ್ವೀಪ್ ಸಮಿತಿವತಿಯಿಂದ ಇತ್ತೀಚೆಗೆ ಏರ್ಪಡಿಸಿದ್ದ ಜಾಥಾವನು ಉದ್ಘಾಟಿಸಿ ಮಾತನಾಡಿ ಎಲ್ಲರೂ ಕಡ್ಡಾಯವಾಗಿ ಮತದಾನ ಮಾಡಬೇಕು ನಮ್ಮ ಹಕ್ಕನು ಚಲಾಯಿಸದಿದ್ದರೆ ನಾವು ಆತ್ಮವಂಚನೆ ಮಾಡಿಕೊಂಡಂತಾಗುತ್ತದೆ ಎಂದರು. ಪಟ್ಟಣದ ಸರ್ಕಾರಿ ಕಾಲೇಜಿನಿಂದ ಹೊರಟ ಜಾಥಾದಲ್ಲಿ ಎಲ್ಲಾ ಸರ್ಕಾರಿ ಇಲಾಖೆಯ ಅಧಿಕಾರಿಗಳು ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು, ಅಂಗನವಾಡಿ ಶಿಕ್ಷಕಿಯರು, ಕಲಾ ತಂಡ ಸೇರಿದಂತೆ ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಿದ್ದರು.
ವೈಭವದ ಕೋಡಮ್ಮದೇವಿ ರಥೋತ್ಸವ
ಹಾರನಹಳ್ಳಿ: ಹಾರನಹಳ್ಳಿಯ ಗ್ರಾಮದೇವತೆ ಶ್ರೀ ಕೋಡಮ್ಮದೇವಿಯವರ ರಥೋತ್ಸವ ಇತ್ತೀಚೆಗೆ ವೈಭವದಿಂದ ನಡೆಯಿತು. ಕೋಡಮ್ಮದೇವಿ ಮೂಲ ಸನಿಧಾನದಲ್ಲಿ ಶ್ರೀ ದೇವಿಯವರಿಗೆ ಜಾತ್ರಾ ಪ್ರಯುಕ್ತ ವಿಶೇಷ ಪೂಜೆ ಅಲಂಕಾರವನು ಏರ್ಪಡಿಸಲಾಗಿತ್ತು. ಯಳವಾರೆ ಹುಚ್ಚಮ್ಮದೇವಿ, ಕೋಡಮ್ಮದೇವಿ, ಧೂತರಾಯಸ್ವಾಮಿ, ವೀರಭದ್ರಸ್ವಾಮಿ ಉತ್ಸವವು ಕೋಡಿಮಠಕ್ಕೆ ತೆರಳಿ ಪೂಜೆ ಸಲ್ಲಿಸಿದ ನಂತರ ಜಾತ್ರಾ ಆವರಣದಲ್ಲಿ ಸಿಡಿಸೇವೆ ಉಯ್ಯಾಲೆ ಸೇವೆ ಧೂತರಾಯಸ್ವಾಮಿಯವರ ಕತ್ತಿಸೇವೆ ನೆರವೇರಿತು. ಕೋಡಮ್ಮದೇವಿ ಹಾಗೂ ಹುಚ್ಚಮ್ಮದೇವಿಯವರನು ರಥದಲ್ಲಿ ಕುಳ್ಳರಿಸಿ ಬಲಿಪ್ರಧಾನ ಪುಣ್ಯಾಹ-ದ ನಂತರ ಧೂತರಾಯಸ್ವಾಮಿ ರಥಕ್ಕೆ ಕಾಯಿ ಹೊಡೆದ ನಂತರ ಹಾರನಹಳ್ಳಿ ಸುತ್ತಮುತ್ತಲ ಗ್ರಾಮಸ್ಥರು ರಥಕ್ಕೆ ಕಾಯಿ ಹೊಡೆದು ರಥ ಎಳೆದರು.ರಥಕ್ಕೆ ಬಾಳೆಹಣ್ಣು ಎಸೆಯುವುದರ ಮೂಲಕ ಭಕ್ತಿಭಾವ ಸಮರ್ಪಿಸಿದರು.
ಆದಿ ಚುಂಚನಗಿರಿ ಮಠದಲ್ಲಿ ಹುಣ್ಣಿಮೆ ಉಪನ್ಯಾಸ
ಹಾಸನ: ನಗರದ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದವತಿಯಿಂದ ಏಪ್ರಿಲ್ 15ರಂದು ಸಂಜೆ 6.30 ಕ್ಕೆ ಶ್ರೀ ಮಠದ ಆವರಣದಲ್ಲಿರುವ ನವನಾಥಯಾಗ ಮಂಟಪದಲ್ಲಿ ಗುರು ತೋರಿದ ದಾರಿ ತಿಂಗಳ ಮಾಮನ ತೇರು ಹುಣ್ಣಿಮೆ ಕಾರ್ಯಕ್ರಮವನು ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮದಲ್ಲಿ ಚಿಕ್ಕಮಗಳೂರು ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಸಾಹಿತಿ ಚಟಳ್ಳಿ ಮಹೇಶ್ ಅವರಿಂದ ವಿಶೇಷ ಉಪನ್ಯಾಸ ಆಯೋಜಿಸಲಾಗಿದೆ. ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಶ್ರೀ ಶಂಭುನಾಥ ಸ್ವಾಮೀಜಿ ಸಾನಿಧ್ಯದಲ್ಲಿ ಸಾಹಿತಿ ಚಟಳ್ಳಿ ಮಹೇಶ್ ಸಾರ್ಥಕ ಬದುಕು ವಿಷಯ ಕುರಿತು ಉಪನ್ಯಾಸ ನೀಡುವರು. ಹಾಸನದ ಶ್ರೀ ಕಾಲಭೈರವೇಶ್ವರ ಭಜನಾ ಮಂಡಳಿ, ಶ್ರೀ ಶೈಲವಲ್ಲಭ ಭಜನಾ ಮಂಡಳಿ, ಶ್ರೀ ಶುಕ್ತಿ ಯೋಗ ಕೇಂದ್ರ, ಶ್ರೀ ಆದಿಚುಂಚನಗಿರಿ ಮಹಿಳಾ ಸಮಾಜ ಮತ್ತು ಒಕ್ಕಲಿಗರ ಮಹಿಳಾ ಸಂಘದ ಸದಸ್ಯರು ಭಜನೆ ಕಾರ್ಯಕ್ರಮ ನಡೆಸಿಕೊಡುವರು.
ಸಿಇಟಿ ತರಬೇತಿ ಉದ್ಘಾಟನೆ
ಹಾಸನದ ಶ್ರೀ ಆದಿಚುಂಚನಗಿರಿ ಆಂಗ್ಲ ಮಾಧ್ಯಮ ಶಾಲೆಯ ಬಿಜಿಎಸ್ ಸ್ಟಡಿ ಸೆಂಟರ್ ಸಭಾಂಗಣದಲ್ಲಿ ನಡೆದ ದ್ವಿತೀಯ ಪಿ.ಯು.ಸಿ. ಸಿಇಟಿ ತರಬೇತಿ ಶಿಬಿರದ ಉದ್ಘಾಟನಾ ಸಮಾರಂಭದಲ್ಲಿ ಆದಿಚುಂಚನಗಿರಿ ಹಾಸನ ಶಾಖಾ ಮಠದ ಶಂಭುನಾಥ ಸ್ವಾಮೀಜಿ ಮಾತನಾಡಿದರು.
ಆಟೋಗಳಿಂದ ಮತದಾನದ ಜಾಗೃತಿ
ಹೊಳೆನರಸೀಪುರ: ಮತದಾರರು ಕಡ್ಡಾಯವಾಗಿ ಮತದಾನ ಮಾಡುವ ಕುರಿತು ಅರಿವು ಮೂಡಿಸಲು ಪಟ್ಟಣದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಮುಂಭಾಗದಿಂದ ಆಟೋ ರಿಕ್ಷಾ ರ್ಯಾಲಿಯನು ಹಮ್ಮಿಕೊಳ್ಳಲಾಗಿತ್ತು. ಸಹಾಯಕ ಚುನಾವಣಾಧಿಕಾರಿ ಸುಜ್ಞಾನಮೂರ್ತಿ, ನೀತಿ ಸಂಹಿತೆ ಅಧಿಕಾರಿ ವೇಣುಗೋಪಾಲ, ಸ್ವೀಪೋಡೆಲ್ ಅಧಿಕಾರಿ ಆರ್. ನರಸಿಂಹಯ್ಯ, ಸದಸ್ಯ ಶಿವಮಾದಪ್ಪ. ಪುರಸಭೆ ಅಧಿಕಾರಿ ಹರೀಶ್ ಹಾಜರಿದ್ದು ಮತದಾನ ಮಾಡುವಂತೆ ಮಾಹಿತಿ ನೀಡುವ, ಆಟೋ ರಿಕ್ಷಾಗಳಿಗೆ ಸ್ಟಿಕರ್ ವಿತರಿಸುವ ಮುಖಾಂತರ ಉದ್ಘಾಟಿಸಿದರು. ರ್ಯಾಲಿ ಬಸ್ ನಿಲ್ದಾಣದಿಂದ ಹೊರಟು, ಅಂಬೇಡ್ಕರ್ ವೃತ್ತ, ಗಾಂಧಿ ವೃತ್ತದ ಮುಖಾಂತರ ಸಾಗಿ ಜನರ ಗಮನ ಸೆಳೆಯಿತು. ಹಾಗೂ ಗಾಂಧಿ ವೃತ್ತದಲ್ಲಿ ಆಟೋ ರಿಕ್ಷಾ ಸರಪಳಿ ನಿರ್ಮಿಸಿ ಬ್ಯಾನರ್ ಕಿತ್ತು ಪ್ಲೇಕಾರ್ಡ್ ಪ್ರದರ್ಶಿಸಿ ಮತದಾನ ಮಾಡುವಂತೆ ಘೋಷಣೆ ಕೂಗಿ ಕಾರ್ಯಕ್ರಮವನು ಯಶಸ್ವಿಗೊಳಿಸಿದರು.
ನೀತಿಗೆಟ್ಟ ನಾಯಕರಿಗೆ ಮಣೆ ಹಾಕಬೇಡಿ: ಬಿಎಸ್ಪಿ
ಹೊಳೆನರಸೀಪುರ: ದಲಿತರ ಮತಗಳನು ಪಡೆದು ದಲಿತರನೇ ಕಡೆಗಣಿಸುತ್ತಿರುವ ಜೆಡಿಎಸ್, ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳೊಂದಿಗೆ ಷಾಮೀಲಾಗಿ ರಾಜ್ಯ ಹಾಗೂ ಜಿಲ್ಲಾ ದಲಿತ ನಾಯಕರು ಹೇಳಿಕೆಗಳನು ನೀಡುತ್ತಿದ್ದು, ಅಂಥಹ ನೀತಿಗೆಟ್ಟ ನಾಯಕರ ಮಾತಿಗೆ ಕಿವಿಗೊಡದೆ, ದಲಿತರ ಉದ್ಧಾರಕ್ಕಾಗಿಯೇ ಇರುವ ಬಹುಜನ ಸಮಾಜ ಪಕ್ಷವನು ಬೆಂಬಲಿಸುವಂತೆ ಬಿಎಸ್ಪಿ ತಾಲೂಕು ಘಟಕದ ಅಧ್ಯಕ್ಷ ಕೋಡಿಹಳ್ಳಿ ಜಗದೀಶ್ ಕೋರಿದ್ದಾರೆ. ಕೇವಲ ಪ್ರಣಾಳಿಕೆಯಲ್ಲಷ್ಟೇ ದಲಿತರ ಉದ್ಧಾರದ ಮಾತುಗಳನಾಡುವ ವಿವಿಧ ಪಕ್ಷಗಳು, ನಂತರದಲ್ಲಿ ದಲಿತರನು ಮೂಲೆಗುಂಪು ಮಾಡಿವೆ, ಕೇವಲ ವೋಟ್ ಬ್ಯಾಂಕ್ ಕಾಜಕಾರಣಕ್ಕಷ್ಟೇ ದಲಿತರು ಈ ಪಕ್ಷಗಳಿಗೆ ಬೇಕಾಗಿದ್ದು, ಖಾಸಗೀಕರಣಕ್ಕೆ ಹೆಚ್ಚಿನ ಒತ್ತು ನೀಡುತ್ತಾ, ಬ್ಯಾಕ್ ಲಾಗ್ ಹುದ್ದೆಗಳನು ತುಂಬುವಲ್ಲಿನ ನಿರ್ಲಕ್ಷವನು ದಲಿತರು ಮನಗಾಣಬೇಕಿದೆ ಎಂದರು.
ಭವಿಷ್ಯಕ್ಕಾಗಿ ಮೋದಿ ಪ್ರಧಾನಿ ಆಗಬೇಕು: ಹಿರಿಯಣ್ಣ
ಅರಸೀಕೆರೆ: ಮುಂದಿನ ದಿನಗಳಲ್ಲಿ ದೇಶ ಉಜ್ವಲವಾಗಬೇಕಾದರೆ ನರೇಂದ್ರ ಮೋದಿ ಅಂತವರು ಪ್ರಧಾನಿಯಾಗುವುದು ಅವಶ್ಯಕವಾಗಿದ್ದಾರೆ.ಆ ನಿಟ್ಟಿನಲ್ಲಿ ಮತದಾರರು ಬಿಜೆಪಿ ಅಭ್ಯರ್ಥಿಗೆ ಮತ ಹಾಕಬೇಕೆಂದು ನಗರ ಬಿಜೆಪಿ ಘಟಕದ ಅಧ್ಯಕ್ಷ ಕಲ್ಗುಂಡಿ ಹಿರಿಯಣ್ಣ ಕರೆ ನೀಡಿದರು.ಪ್ರಜ್ಞಾವಂತ ಮತದಾರರು ರಾಷ್ಟ್ರ ಚಿಂತನೆಯಲ್ಲಿ ತೊಡಗಿರುವ ಬಿಜೆಪಿ ಪಕ್ಷದ ಅಭ್ಯರ್ಥಿ ವಿಜಯಶಂಕರ್ಗೆ ಮತದಾನ ಮಾಡುವಂತೆ ಮನವಿ ಮಾಡಿದರು. ಬಿಜೆಪಿ ಜಿಲ್ಲಾ ವಕ್ತಾರ ಎನ್.ಡಿ ಪ್ರಸಾದ್ ಮಾತನಾಡಿ, ಜೆಡಿಎಸ್ ಮತ್ತು ಕಾಂಗ್ರೇಸ್ ಪಕ್ಷಗಳ ಅಭ್ಯರ್ಥಿಗಳು ಎಷ್ಟೇ ಹೋರಾಟ ಮತ್ತು ಆಮೀಷಗಳನು ಒಡ್ಡಿದರೂ ಮತದಾರರು ಬಿಜೆಪಿ ಅಭ್ಯರ್ಥಿಗೆ ಮತ ಹಾಕುವ ಭರವಸೆ ನೀಡಿದ್ದಾರೆ. ಭಾರತದ ಪುನರ್ ನಿರ್ಮಾಣದ ಕನಸನು ಹೊತ್ತಿರುವ ನರೇಂದ್ರ ಮೋದಿ ನೇತೃತ್ವದ ಬಿಜೆಪಿಯನು ಬೆಂಬಲಿಸುವಂತೆ ಮತದಾರರನು ಕೋರಿದರು.
ಹರೆಯದಲ್ಲಿ ಆರೋಗ್ಯಮುಖ್ಯ: ಡಾ.ಮಧು
ಕಣಕಟ್ಟೆ (ಅರಸೀಕೆರೆ ತಾ.): ಹದಿಹರೆಯದಲ್ಲಿ ಆರೋಗ್ಯಕರ ಜೀವನದ ಪಾತ್ರ ಮುಖ್ಯವಾಗಿರುತ್ತದೆ ಎಂದು ಕಣಕಟ್ಟೆಯ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಎನ್. ಮಧು ತಿಳಿಸಿದರು. ಅವರು ಇತ್ತೀಚೆಗೆ ವಿದ್ಯಾರಣ್ಯ ಕೈಗಾರಿಕ ತರಬೇತಿ ಸಂಸ್ಥೆಯ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವತಿಯಿಂದ ಏರ್ಪಡಿಸಿದ್ದ ವಿಶ್ವ ಆರೋಗ್ಯ ದಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಿದ್ದರು. ವಿಶ್ವ ಆರೋಗ್ಯ ಸಂಸ್ಥೆಯು (ಡಬ್ಲೂ.ಹೆಚ್.ಓ) 1948ರ ಏಪ್ರಿಲ್ 7 ರಂದು ಸ್ಥಾಪನೆಯಾದ ಹಿನೆಲೆಯಲ್ಲಿ ಆ ದಿನವನು ವಿಶ್ವ ಆರೋಗ್ಯ ದಿನವೆಂದು ಪ್ರತಿ ವರ್ಷ ಆಚರಿಸಲಾಗುತ್ತದೆ. ಆರೋಗ್ಯದ ವಿಷಯದಲ್ಲಿ ಜನರ ಜವಾಬ್ದಾರಿ ಏನು ಸಮುದಾಯದವರು ಆರೋಗ್ಯವನು ಹೇಗೆ ಕಾಪಾಡಿಕೊಳ್ಳಬೇಕು ಸೊಳ್ಳೆಯಿಂದ ಹರಡುವ ಕಾಯಿಲೆಗಳಾದ ಮಲೇರಿಯಾ ಚಿಕ್ಕನ್ ಗುನ್ಯಾ , ಡೆಂಗ್ಯೂ ಹಾಗೂ ಇತರೆ ಕಾಯಿಲೆಗಳ ಬಗ್ಗೆ ಸಂಕ್ಷಿಪ್ತವಾಗಿ ವಿವರಿಸಿದರು.
ಭೈರಾಂಬುದಿ: ಹೊಂಗ್ಯಮ್ಮ,ಮಲ್ಲಿಗೆಮ್ಮ ರಥೋತ್ಸವ
ಅರಸೀಕೆರೆ: ತಾಲೂಕಿನ ಬಾಣಾವರ ಹೋಬಳಿ ಭೈರಾಂಬುದಿ ಗ್ರಾಮದ ಗ್ರಾಮದೇವತೆಗಳಾದ ಹೊಂಗ್ಯಮ್ಮ, ಮಲ್ಲಿಗೆಮ್ಮನವರ ದಿವ್ಯ ಮಹಾರಥೋತ್ಸವ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಸಡಗರ ಸಂಭ್ರಮ ನಡುವೆ ನೆರವೇರಿತು. ರಥೋತ್ಸವದ ಅಂಗವಾಗಿ ರಾಜ್ಯದ ನಾನಾ ಭಾಗಗಳಿಂದ ಆಗಮಿಸಿದ್ದ ಭಕ್ತರು ದೇವಿಗೆ ಧಾರ್ಮಿಕ ವಿಶೇಷ ಪೂಜಾ ಕಾರ್ಯಗಳನು ನೆರವೇರಿಸಿದರು. ಕಳೆದ ಭಾನುವಾರದಿಂದ ಆರಂಭಗೊಂಡಿದ್ದ ಜಾತ್ರಾ ಮಹೋತ್ಸವ ಶುಕ್ರವಾರ ಸಂಜೆ ವಿದ್ಯುಕ್ತವಾಗಿ ಮುಕ್ತಾಯಗೊಂಡಿತು. ಗುರುವಾರ ರಾತ್ರಿ ಮಲ್ಲಿಗೆಮ್ಮ, ಹೊಂಗ್ಯಮ್ಮನವರ ಕೆಂಡ ಮಹೋತ್ಸವ, ಚಲುವರಾಯಣಸ್ವಾಮಿಯ ಮುತ್ತಿನ ಪಲ್ಲಕ್ಕಿ ಉತ್ಸವ, ನಂದಿ ವಾಹನೋತ್ಸವ ರಾತ್ರಿಯಿಡಿ ಜರುಗಿದವು. ನಂತರ ಬೆಳಗ್ಗೆ ರಥಕ್ಕೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಚಲುವರಾಯಣಸ್ವಾಮಿ ಹಾಗೂ ಧೂತರಾಯಸ್ವಾಮಿ ಚಾಲನೆ ನೀಡಲಾಯಿತು.
ಬೀದಿ ನಾಟಕದ ಮೂಲಕ ಮತದಾನದ ಜಾಗೃತಿ
ಆಲೂರು: ಪಟ್ಟಣದಲ್ಲಿ ತಾಲೂಕು ಸ್ವೀಪ್ ಸಮಿತಿವತಿಯಿಂದ ಬೀದಿನಾಟಕ ತಂಡದೊಂದಿಗೆ ಮತದಾನದ ಜಾಗೃತಿ ಜಾಥಾ ಹಮ್ಮಿಕೊಳ್ಳಲಾಗಿತ್ತು. ತಹಸೀಲ್ದಾರ್ ಮಹದೇವಯ್ಯ ಹಾಗೂ ತಾಲೂಕು ನೋಡಲ್ ಅಧಿಕಾರಿ ಸುಮಲತ ನೇತ್ವತದಲ್ಲಿ ತಾಲೂಕಿನ ಎಲ್ಲಾ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ, ಗ್ರಾಮ ಪಂಚಾಯತಿ ನೌಕರರು, ಅಂಗನವಾಡಿ ಕಾರ್ಯಕರ್ತೆಯರು ಆಶಾ ಕಾರ್ಯಕರ್ತೆಯರು ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ 200 ವಿದ್ಯಾರ್ಥಿಗಳು ಹಾಗೂ ಅಧ್ಯಾಪಕ ವೃಂದದವರು ಪಾಲ್ಗೊಂಡಿದ್ದರು. ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಿಂದ ಕೊನೆಪೇಟೆವರಿಗೆ ಬೀದಿ ನಾಟಕ ತಂಡದೊಂದಿಗೆ ಮತದಾನ ಜಾಗೃತಿಯ ಹಾಡು, ನಾಟಕಗಳ ಮೂಲಕ ಮತದಾನ ಜಾಗೃತಿ ಕಾರ್ಯಕ್ರಮದ ಜಾಥವನು ಹಮ್ಮಿಕೊಳ್ಳಲಾಯಿತು.
ತರಬೇತಿಯಲ್ಲಿ ವಿದ್ಯಾರ್ಥಿಗಳು
ಹಾಸನದ ಆದಿಚುಂಚನಗಿರಿ ಆಂಗ್ಲ ಮಾಧ್ಯಮ ಶಾಲೆಯ ಬಿಜಿಎಸ್. ಸ್ಟಡಿ ಸೆಂಟರ್ ಸಭಾಂಗಣದಲ್ಲಿ ನಡೆಯುತ್ತಿರುವ ದ್ವಿತೀಯ ಪಿಯುಸಿ ಸಿಇಟಿ ತರಬೇತಿ ಶಿಬಿರದಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳು.
'ಅಂಬೇಡ್ಕರ್ ಮಹಿಳೆಯರಮೀಸಲಿಗೆ ಧ್ವನಿ ಎತ್ತಿದ್ದರು'
ಹಾಸನ: ಭಾರತದಲ್ಲಿ 1951ರಲ್ಲೇ ಸಾರ್ವತ್ರಿಕ ಮತದಾನ ಜಾರಿಗೆ ಬಂದಿತು. ಡಾ. ಬಿ.ಆರ್. ಅಂಬೇಡ್ಕರ್ ಅವರು ಕಾನೂನು ಮಂತ್ರಿಯಾಗಿದ್ದಾಗ ದೇಶದ ಅರ್ಧದಷ್ಟಿರುವ ಮಹಿಳೆಯರಿಗೆ ಶೇ.50 ರಷ್ಟು ಮೀಸಲಾತಿ ಕೊಡಬೇಕೆಂದು ಅಂದೇ ಧ್ವನಿ ಎತ್ತಿದ್ದರೆಂದು ಸಾಹಿತಿ ಶಾಂತಾ ಅತಿ ತಿಳಿಸಿದರು. ಅನನ್ಯ ಟ್ರಸ್ಟ್ವತಿಯಿಂದ ಮತದಾನ ಜಾಗೃತಿ ಅಭಿಮಾನ ಕುರಿತು ನಗರದ ಬೀರನಹಳ್ಳಿ ಕೆರೆ ರಾಘವೇಂದ್ರ ಕಾಲೋನಿಯ ಮಹಿಳೆಯರಿಗೆ ಅಂಗನವಾಡಿ ಕೇಂದ್ರದಲ್ಲಿ ಮತದಾನದ ಮಹತ್ವ ಕುರಿತು ಇತ್ತೀಚೆಗೆ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಏಪ್ರಿಲ್ 17ರಂದು ಪ್ರತಿಯೊಬ್ಬರು ತಪ್ಪದೆ ಮತದಾನ ಮಾಡಿ. ಮತ ಚಲಾಯಿಸುವುದು ನಮ್ಮ ಹಕ್ಕು. ಪ್ರತಿಯೊಬ್ಬ ವ್ಯಕ್ತಿಯ ಜವಾಬ್ದಾರಿ ಆಗಿದೆ. ಮಹಿಳೆಯರು ಮತದಾನ ಪ್ರಕ್ರಿಯೆಯಲ್ಲಿ ಹೆಚ್ಚಾಗಿ ತೊಡಗಿಸಿಕೊಳ್ಳಬೇಕು ಇತರರಿಗೂ ಅರಿವು ಮೂಡಿಸಬೇಕೆಂದು ತಿಳಿಸಿದರು.
ಕಾಂಗ್ರೆಸಿಗರ ಅಹಂಗೆ ಜನತೆ ತಕ್ಕ ಉತ್ತರ ಕೊಡಲಿದ್ದಾರೆ
ಸಕಲೇಶಪುರ: ಜಿಲ್ಲೆಯಲ್ಲಿ ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ಅಭ್ಯರ್ಥಿ ಹೆಚ್.ಡಿ.ದೇವೇಗೌಡರ ಪರ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಚುನಾವಣಾ ಪ್ರಚಾರ ನಡೆಸಿದರು. ಇತ್ತೀಚೆಗೆ ಪಟ್ಟಣದ ಸಕಲೇಶ್ವರಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ, ಹೇಮಾವತಿ ಸೇತುವೆ ಬಳಿಯಿಂದ ಹಳೆ ಬಸ್ ನಿಲ್ದಾಣದವರೆಗೆ ರೋಡ್ ಶೋ ನಡೆಸಿ ನಂತರ ಮಾತನಾಡಿ, ದೇವೇಗೌಡರಿಗೆ ದೊಡ್ಡ ರಾಜಕೀಯ ಶಕ್ತಿ ನೀಡಿರುವ ಜಿಲ್ಲೆಯ ಜನತೆ ಈ ಬಾರಿಯೂ ಯಾವುದೇ ದೇವೇಗೌಡರನು ಬೆಂಬಲಿಸುವಂತೆ ಮನವಿ ಮಾಡಿದರು. ಜಿಲ್ಲೆಯಲ್ಲಿ ದೇವೇಗೌಡರು ಏನು ಮಾಡಿದ್ದಾರೆ ಎಂದು ಪ್ರಶೆ ಮಾಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ನಾಯಕರು, ಸಾರ್ವಜನಿಕ ಚರ್ಚೆಗೆ ಬರಲಿ ಎಂದು ಸವಾಲು ಹಾಕಿದರು. ಸಿದ್ದರಾಮಯ್ಯ ತಮ್ಮ ಸ್ವಕ್ಷೇತ್ರಕ್ಕೆ ಏನೆಲ್ಲಾ ಅಭಿವೃದ್ಧಿ ಕೆಲಸ ಮಾಡಿದ್ದಾರೆ ಅನೋದನು ಬಹಿರಂಗಪಡಿಸಲಿ ಎಂದರು.
ಸಿಎಂ ಕೈ ಬಲಪಡಿಸಿ: ಸಿದ್ದರಾಮಯ್ಯ ಅಭಿಮಾನಿಗಳ ಸಂಘ
ಹಾಸನ: ಕಾಂಗ್ರೆಸ್ ಅಭ್ಯರ್ಥಿಗೆ ಹೆಚ್ಚಿನ ಮತಗಳನು ನೀಡುವ ಮೂಲಕ ಜಯಶೀಲರನಾಗಿ ಮಾಡಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕೈ ಬಲಪಡಿಸುವಂತೆ ಕರ್ನಾಟಕ ರಾಜ್ಯ ಸಿದ್ದರಾಮಯ್ಯನವರ ಅಭಿಮಾನಿಗಳ ಬಳಗದ ರಾಜ್ಯಾಧ್ಯಕ್ಷ ಹಿನಕಲ್ ಪ್ರಕಾಶ್ ಹೇಳಿದ್ದಾರೆ. ರಾಜ್ಯದಲ್ಲಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಅರ್ಧ ತಾಸಿನಲ್ಲೇ ಸಿದ್ದರಾಮಯ್ಯನವರು ಬಡವರ, ರೈತರ, ಹಿಂದುಳಿದ ವರ್ಗಗಳ, ದಲಿತರ ಹಾಗೂ ಅಲ್ಪಸಂಖ್ಯಾತರ ಜನಪರ ಯೋಜನೆಗಳನು ಜಾರಿಗೆ ತಂದರು. ಆದ್ದರಿಂದ ಕಾಂಗ್ರೆಸ್ನು ಜಿಲ್ಲೆಯ ಜನತೆ ಬೆಂಬಲಿಸಬೇಕು ಎಂದರು. ಅನಭಾಗ್ಯ, ಕ್ಷೀರ ಭಾಗ್ಯ ಯೋಜನೆ, ಭಾಗ್ಯಜ್ಯೋತಿ ಮತ್ತು ಕುಟೀರ ಜ್ಯೋತಿ, ಸಾಲ ಮನಾ, ಗಂಗಕಲ್ಯಾಣ, ವಿದ್ಯಾಸಿರಿ, ಶಾದಿ ಭಾಗ್ಯ ಸೇರಿದಂತೆ ಹತ್ತು ಹಲವು ಯೋಜನೆಗಳನು ಜಾರಿಗೆ ತರುವ ಮೂಲಕ ಜನಪರ ಯೋಜನೆಗಳನು ಕೈಗೊಂಡಿದ್ದಾರೆ ಎಂದರು.
ಭಗವಾನ್ ಮಹಾವೀರ ಮಹೋತ್ಸವ ಇಂದು
ಹಾಸನ: ಶ್ರೀ ಮಹಾವೀರ ಎಜುಕೇಷನಲ್ ಆ್ಯಂಡ್ ಚಾರಿಟಬಲ್ ಟ್ರಸ್ಟ್ ಮತ್ತು ಹಾಸನ ಜೈನ ಸಮಾಜದವತಿಯಿಂದ ನಗರದಲ್ಲಿ ಏ.13 ರಂದು ಭಗವಾನ್ ಶ್ರೀ1008 ಶ್ರೀ ಮಹಾವೀರ ಮಹೋತ್ಸವ ಹಾಗೂ ಶ್ರೀ ಮಹಾವೀರ ಜಿನಮಂದಿರ ಮೂರ್ತಿ ಪ್ರತಿಷ್ಠಾಪನೆಯ 11ನೇ ವಾರ್ಷಿಕೋತ್ಸವದ ಕಾರ್ಯಕ್ರಮಗಳು ನಡೆಯಲಿವೆ. ಬೆಳಗ್ಗೆ 5.30 ಕ್ಕೆ ಅಂಗವಾಗಿ ನಗರದ 3 ಜಿನ ಮಂದಿರಗಳಲ್ಲಿ ನವಕಲಶ ಸಹಿತ ಪಂಚಾಮೃತ ಅಭಿಷೇಕ, ಬೆಳಗ್ಗೆ 8 ರಿಂದ ದೊಡ್ಡಬಸೀದಿಯಿಂದ ಪುಷ್ಪಾಲಂಕೃತ, ದಿವ್ಯ ಮನಮೋಹಕ ಪಲ್ಲಕ್ಕಿ ಉತ್ಸವ ನಡೆಯಲಿದ್ದು, ಉತ್ಸವವು ದೊಡ್ಡಬಸದಿಯಿಂದ ಕಸ್ತೂರಿ ಬಾ ರಸ್ತೆ, ಮಹಾವೀರ ಮೃತ್ತದ ಮೂಲಕ ಶಂಕರಮಠ ರಸ್ತೆ, ಎಂ.ಜಿ. ರಸ್ತೆ ಮೂಲಕ ಮಹಾವೀರ ಭವನ ತಲುಪಲಿದೆ. ಬೆಳಗ್ಗೆ 9.30ಕ್ಕೆ ಪೂರ್ಣ ಕುಂಭ ಅಗ್ರೋದಕ ಮೆರವಣಿಗೆ ನಡೆಯಲಿದೆ.
ಸ್ವಯಂಸೇವಾ ಸಂಸ್ಥೆಗಳಿಂದ ಮತದಾನ ಜಾಥಾ
ಅರಸೀಕೆರೆ: ಮತದಾನದ ಬಗ್ಗೆ ಪಟ್ಟಣದ ನಾನಾ ಭಾಗಗಳಲ್ಲಿ ಸ್ವೀಪ್ ಸಮಿತಿಯಿಂದ ಜಾಥ ನಡೆಸುವುದರ ಮೂಲಕ ಸಾರ್ವಜನಿಕರಿಗೆ ಅರಿವು ಮೂಡಿಸಲಾಯಿತು.ಸ್ವೀಪ್ಸಮಿತಿ ಅಧ್ಯಕ್ಷ ಹಾಗೂ ತಾ.ಪಂ ಇಓಟಿ.ಎನ್.ಮೂರ್ತಿ ಇವರ ನೇತೃತ್ವದಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಸ್ವಯಂ ಸೇವಾ ಸಂಸ್ಥೆಗಳ ಕಾರ್ಯಕರ್ತರು ನಾಮ ಫಲಕಗಳನ್ನು ಪ್ರದರ್ಶಿಸಿ ಜಾಥಾದಲ್ಲಿ ಭಾಗವಹಿಸಿದ್ದರು. ಜಾಥಾ ತಾಲೂಕು ಕಚೇರಿಯಿಂದ ಪ್ರಾರಂಭವಾಗಿ ಹಾಸನ ರಸ್ತೆ ವೃತ್ತದಲ್ಲಿ ಜಮಾಯಿಸಿ ಮಾನವ ಸರಪಳಿ ನಿರ್ಮಿಸಿ ಮತದಾನದ ಬಗ್ಗೆ ಜಾಗೃತಿ ಮೂಡಿಸಿದರು. ಈ ಸಂದರ್ಭದಲ್ಲಿ ವಾರ್ತಾ ಇಲಾಖೆಯಿಂದ ಆಯೋಜಿಸಲಾಗಿದ್ದ ಬೀದಿ ನಾಟಕಕಾರರಿಂದ ಮತದಾನದ ಬಗ್ಗೆ ಹಾಡಿನ ಮೂಲಕ ಜಾಗೃತಿ ಮೂಡಿಸಲಾಯಿತು. ಈ ಸಂದರ್ಭದಲ್ಲಿ ಇಓ ಮೂರ್ತಿ ಮಾತನಾಡಿದರು.
ವಿದ್ಯುತ್ ಶಾಕ್ನಿಂದ ಪತಿಕೊಲೆ: ಮಹಿಳೆ ಆರೋಪ
ಹಾಸನ: ಹೊಸ ಬಸ್ ನಿಲ್ದಾಣದಲ್ಲಿ ಎಲೆಕ್ಟ್ರಿಕಲ್ ಕೆಲಸಕ್ಕೆ ನನ್ನ ಪತಿಯನ್ನು ಕರೆದುಕೊಂಡು ಹೋಗಿ ವಿದ್ಯುತ್ ಶಾಕ್ನಿಂದ ಕೊಲೆ ಮಾಡಲಾಗಿದ್ದು, ಈ ಬಗ್ಗೆ ನ್ಯಾಯ ದೊರಕಿಸಿಕೊಡುವಂತೆ ತಾಲೂಕಿನ ಬೊಮ್ಮನಾಯಕನಹಳ್ಳಿ ರೂಪಾ ಅಲವತ್ತುಕೊಂಡಿದ್ದಾರೆ.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಫೆ.28ರಂದು ನನ್ನ ಪತಿ ನಟರಾಜ್ನನ್ನು ಹೊಸ ಬಸ್ ನಿಲ್ದಾಣಕ್ಕೆ ಕೆಲಸಕ್ಕೆಂದು ಸಾರಿಗೆ ನಿಗಮದ ನೌಕರ ಎಲೆಕ್ಟ್ರಿಷಿಯನ್ ಚೆಂದ್ರೇಗೌಡ ಮತ್ತು ಡಿಎಂಇ ನಾಗರಾಜು ಎಂಬವರು ಕರೆದುಕೊಂಡು ಹೋಗಿದ್ದಾರೆ. ಬಸ್ ನಿಲ್ದಾಣದ ಕೊಳವೆ ಬಾವಿ ಮೋಟರ್ ಸುಟ್ಟು ಹೋಗಿದೆ ಎಂದು ಹೇಳಿ ಅದರ ರಿಪೇರಿಗೆ ಕರೆದುಕೊಂಡ ಹೋಗಲಾಗಿದೆ. ಕೊಳವೆ ಬಾವಿ ಮೋಟರ್ ಎರಡು ಲೆಂತ್ ಪೈಪ್ ಮೇಲೆ ಎತ್ತಿದ ನಂತರ ಕೇಬಲ್ ಕಟ್ ಆಗಿದೆ ಜಾಯಿಂಟ್ ಮಾಡು ಎಂದು ಚಂದ್ರೇಗೌಡ ಹೇಳಿದ್ದಾರೆ.
ಗೌಡರ ಸೋಲಿಸಲು ಸಿದ್ದು ತಂತ್ರ
ಹೊಳೆನರಸೀಪುರದಲ್ಲಿ ಹಮ್ಮಿಕೊಳ್ಳಲಾಗಿದ್ದ ಚುನಾವಣಾ ಪ್ರಚಾರ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾಂಗ್ರೆಸ್ ಅಭ್ಯರ್ಥಿ ಎ.ಮಂಜು ಅವರಿಗೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರನ್ನು ಎದುರಿಸುವ ಕುರಿತು ಕೆಲವು ತಂತ್ರಗಳನ್ನು ಹೇಳುತ್ತಿರುವಂತಿದೆ.
ಬೇಲೂರು ಶೆಟ್ಟಿಗೆರೆಯಲ್ಲಿ ಕಾಂಗ್ರೆಸ್ ಪ್ರಚಾರ
ಬೇಲೂರು: ಕೇಂದ್ರ ಸರ್ಕಾರ ಬಡವರು, ಮಾಧ್ಯಮ ವರ್ಗದವರನ್ನು ಹಾಗೂ ಬೀದಿ ವ್ಯಾಪಾರಿಗಳನ್ನು ಗಮನದಲ್ಲಿ ಇಟ್ಟುಕೊಂಡು ಬೀದಿ ವ್ಯಾಪಾರಿಗಳ ಹಕ್ಕು ರಕ್ಷಣ ಕಾಯ್ದೆ ತರುವ ಮೂಲಕ ಬಡವರ ಪಾಲಿಗೆ ಕಾಂಗ್ರೆಸ್ ಪಕ್ಷ ಆಶಾ ಕಿರಣವಾಗಿದೆ ಜಿಲ್ಲಾ ಕಾಂಗ್ರೆಸ್ ಮುಂಖಡರಾದ ಬಿ.ಕೆ.ಚಂದ್ರಕಲಾ ತಿಳಿಸಿದರು. ಕಾಂಗ್ರೆಸ್ ಅಭ್ಯರ್ಥಿ ಎ.ಮಂಜು ಪರ ಮತ ಯಾಚನೆ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಯುಪಿಎ ಸರ್ಕಾರ ಬಡವರಿಗೆ ಅನುಕೂಲ ಮಾಡುವ ಹಾಗೂ ಬೀದಿ ವ್ಯಾಪಾರಿಗಳಿಗೆ ಶಾಶನ್ಮಾಕ ಶಕ್ತಿ ತುಂಬಿ ಮಹತ್ವದ ಯೋಜನೆ ರೂಪಿಸಿದೆ ಎಂದು ಹೇಳಿದರು. ಕಾಂಗ್ರೆಸ್ ಚುನಾವಣೆ ಪ್ರಣಾಳಿಕೆಯಲ್ಲಿ ಬಡತನ ಹಾಗೂ ಮಧ್ಯಮ ವರ್ಗದ ನಡುವೆ ಬರುವ ಸರಿ ಸುಮಾರು 70 ಕೋಟಿ ಜನಸಂಖ್ಯೆಗೆ ವಿಶೇಷ ಯೋಜನೆಯನ್ನು ರೂಪಿಸಿ ಅವರ ಕಲ್ಯಾಣಕ್ಕಾಗಿ ಶ್ರಮಿಸುತ್ತಿದ್ದಾರೆ ಎಂದರು.