ನಾಗೇಶ್ವರ ವಿಜೃಂಭಣೆಯ ಬ್ರಹ್ಮ ರಥೋತ್ಸವ
ನುಗ್ಗೇಹಳ್ಳಿ: ಇಲ್ಲಿಗೆ ಸಮೀಪದ ಇತಿಹಾಸ ಪ್ರಸಿದ್ಧ ನಾಗರ ನವಿಲೆ ನಾಗೇಶ್ವರ ಸ್ವಾಮಿಯ ಬ್ರಹ್ಮ ರಥೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಇತ್ತೀಚೆಗೆ ನಡೆಯಿತು.
ಎನ್.ಎಸ್ ನಾಗಪ್ಪ ಅವರಿಂದ ಗಿರಿಜಾಕಲ್ಯಾಣೋತ್ಸವ, ಜಿಪಂ ಮಾಜಿ ಸದಸ್ಯ ಜಗನ್ನಾಥ್ ಕುಟುಂಬದಿಂದ ಆನೆ ಉತ್ಸವ, ಸಿದ್ದರಾಜು ಗಂಗಮ್ಮ ಅವರಿಂದ ಪಂಚಾಮತ ಅಭಿಷೇಕ, ನಾಗೇಶ್ವರ ಯುವಕ ಸಂಘ ಬೆಂಗಳೂರು ಇವರಿಂದ ರಥಕ್ಕೆ ಹೂವಿನ ಅಲಂಕಾರ, ವಿಶ್ವಕರ್ಮ ಸಮುದಾಯದಿಂದ ರಥಕ್ಕೆ ಪೂಜೆ ಮಹಾಮಂಗಳಾರತಿ ನಂತರ ರಥೋತ್ಸವ ನಡೆಯಿತು.
ಗ್ರಾಮಸ್ಥರಿಂದ ಗಂಧದ ಪ್ರಸಾದ, ಭಕ್ತರಹಳ್ಳಿ ಶಿವಪ್ಪ ಅವರಿಂದ ಅಂಕುರಾರ್ಪಣೆ, ಧ್ವಜಾರೋಹಣ, ರಕ್ಷಾಬಂಧನ, ಪತ್ತಿನ ಸೇವೆ ವೃಷಭ ವಾಹನೋತ್ಸವ, ಸರ್ವ ವಾಹನೋತ್ಸವ, ಕುದುರೆ ಉತ್ಸವ ನಡೆಯಿತು.
ವೃಷಭ ವಾಹನೋತ್ಸವ, ಉಪ್ಪರಿಗೆ ವಾಹನೋತ್ಸವ ಗುರುವಾರ ಕರ್ಪೂರ ಸೇವೆ, ಹುಲಿವಾಹನೋತ್ಸವ, ಪಕ್ಷಿ ವಾಹನೋತ್ಸವ, ಪಲ್ಲಕ್ಕಿ ಉತ್ಸವ, ಕುದುರೆ ಉತ್ಸವ ನಡೆಯಿತು.
ಜಾತ್ರಾ ಮಹೋತ್ಸವದಲ್ಲಿ ಬಾಗೂರು ರಾಜಸ್ವ ನಿರೀಕ್ಷಕ ನಂಜೇಗೌಡ, ಅಖಿಲ ಭಾರತ ವೀರಶೈವ ಮಹಾಸಭಾದ ತಾಲೂಕು ಅಧ್ಯಕ್ಷ ಎನ್.ಪಿ ರಮೇಶ್, ಬಿಜೆಪಿ ರಾಜ್ಯಸಮಿತಿ ಸದಸ್ಯ ನವಿಲೆ ಅಣಪ್ಪ, ಗ್ರಾಪಂ ಅಧ್ಯಕ್ಷ ಲೋಕೇಶ್, ಅರ್ಚಕ ಎನ್. ಕೃಷ್ಣಮೂರ್ತಿ, ಬೆಂಗಳೂರು ವಿಶ್ವನಾಥ್, ಎನ್.ಬಿ ಕುಮಾರ್, ದೀಪು, ಹೊಸೂರು ಕುಮಾರ್, ಚನ್ನರಾಯಪಟ್ಟಣ ವೆಂಕಟೇಶ್ ಬಾಬು ಇದ್ದರು.