ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಅಂದು ನಿರ್ಲಕ್ಷ್ಯ ಇಂದು ಓಲೈಕೆ

Srinivasa Murthy VN
Updated On : 15 Apr 2014, 12:40 pm

ಬಾಗೂರು (ಚನ್ನರಾಯಪಟ್ಟಣ ತಾ.): ಕಾಂಗ್ರೆಸ್ ಜಿಲ್ಲೆಯಲ್ಲಿ ವೀರಶೈವ ಸಮಾಜದ  ಮುಖಂಡರಿಗೆ ಯಾವುದೇ ಸ್ಥಾನ ನೀಡದೆ ಕಡೆಗಣಿಸಿ ಮತ ಪಡೆಯಲು ವೀರಶೈವರನ್ನು ಓಲೈಸುತ್ತಿದ್ದಾರೆ ಎಂದು ಶಾಸಕ ಸಿ.ಎನ್. ಬಾಲಕೃಷ್ಣ ಟೀಕಿಸಿದರು.
ಬಾಗೂರಿನಲ್ಲಿ ದೇವೇಗೌಡರ ಪರ ಮತ ಯಾಚನೆಮಾಡಿ ಮಾತನಾಡಿದ ಅವರು,  ಜಿಲ್ಲೆಯ ವೀರಶೈವ ಮುಖಂಡ ಸಕಲೇಶಪುರದ ಬಿ.ಆರ್. ಗುರುದೇವ್ ಅವರನ್ನು ವಿಧಾನಪರಿಷತ್ ಸದಸ್ಯರನ್ನಾಗಿ ಮಾಡಿದ್ದರು. ಅಲ್ಲದೇ, ಬೇಲೂರು ವಿಧಾನ ಸಭಾ ಕ್ಷೇತ್ರದಲ್ಲಿ ಲಿಂಗೇಶ್ ಅವರಿಗೆ ಜೆಡಿಎಸ್‌ನಿಂದ ಟಿಕೆಟ್ ನೀಡಿ ವೀರಶೈವ ಸಮಾಜಕ್ಕೆ ಅಧಿಕಾರ ನೀಡಿದ್ದರು ಎಂದರು. ಈಗ ಜಿಲ್ಲಾ ಜೆಡಿಎಸ್ ಅಧ್ಯಕ್ಷ ಜಾವಗಲ್ ರಾಜಶೇಖರ್ ವೀರಶೈವ ಸಮಾಜಕ್ಕೆ ಸೇರಿದವರು. ಜಿಲ್ಲಾ ಡಿಸಿಸಿ ಬ್ಯಾಂಕ್‌ನಿಂದ 40 ಸಾವಿರ ರೈತರಿಗೆ ಸಾಲ ನೀಡಿ ರು. 700 ಕೋಟಿ ವ್ಯವಹಾರ ನಡೆಸಿದೆ. ಬಾಗೂರು ಕೃಷಿ ಪತ್ತಿನ ಸಹಾಕಾರ ಸಂಘದಿಂದ ರು. 4 ಕೋಟಿ ಸಾಲ ನೀಡಿದೆ ಬಾಗೂರು ವಕ್ಕಲಿಗರ ಸಮುದಾಯ ಭವನಕ್ಕೆ ರು. 4 ಲಕ್ಷ, ಬ್ರಾಹ್ಮಣರ ಸಮುದಾಯಭವನಕ್ಕೆ ರು. 4 ಲಕ್ಷ, ಅಂಬೇಡ್ಕರ್ ಸಮುದಾಯಭವನಕ್ಕೆ ರು. 4 ಲಕ್ಷ ಅನುದಾನ ನೀಡಿದೆ ಎಂದು ಹೇಳಿದರು.
ಜತೆಯಲ್ಲಿ ಎಪಿಎಂಸಿ ನಿರ್ದೇಶಕ ಬಿ.ಎಚ್. ಶಿವಣ್ಣ, ಜಿಪಂ  ಸದಸ್ಯ ಶಿವಶಂಕರ್ ಕಂಟೆ, ಹೇಮಾವತಿ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಮಂಜುನಾಥ್, ಕುಂಬಾರಳ್ಳಿ ರಮೇಶ್, ತಾಪಂ ಸದಸ್ಯ ಎನ್. ಬಸವರಾಜ್, ತಾಪಂ  ಸದಸ್ಯೆ ವಿಜಯ ಶಿವಲಿಂಗಪ್ಪ, ಚಂದ್ರಣ್ಣ, ರಾಮಚಂದ್ರು, ಕೃಷಿ ಪತ್ತಿನ ಅಧ್ಯಕ್ಷ ಬಸವರಾಜು, ತಾಪಂ ಸದಸ್ಯ ಮಲ್ಲೇಶ್, ಗ್ರಾಪಂ  ಅಧ್ಯಕ್ಷ ಪುರುಷೋತ್ತಮ, ಮನು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement