ಒಗ್ಗಟ್ಟಿದ್ದರೆ ಗೆಲವು ಸುಲಭ: ಎಸ್.ಎಂ. ಕೃಷ್ಣ ಕಿವಿಮಾತು
ಅರಕಲಗೂಡು: ರಾಜ್ಯದಲ್ಲಿ ಒಗ್ಗಟ್ಟಿನಿಂದ ಕಾಂಗ್ರೆಸ್ ಪಕ್ಷದ ಎಲ್ಲಾ ಮುಖಂಡರು ಚುನಾವಣೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವುದರಿಂದ ಈ ಬಾರಿ ಹೆಚ್ಚು ಕ್ಷೇತ್ರಗಳನ್ನು ಜಯಿಸುವ ಮುಖೇನಾ ರಾಜಕೀಯ ಅಚ್ಚರಿ ಕಾಣಬಹುದಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ವಿಶ್ವಾಸ ವ್ಯಕ್ತಪಡಿಸಿದರು. ಸೋಮವಾರ ಪಟ್ಟಣದಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶ ಹಾಗೂ ಮತ ಪ್ರಚಾರ ಸಭೆಯಲ್ಲಿ ಪಾಲ್ಗೊಳ್ಳುವ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಮತ್ತೊಮ್ಮೆ ಯುಪಿಎ ಸರಕಾರದ ಮುನ್ಸೂಚನೆಯಾಗಿದೆ ಎಂದು ಹೇಳಿದರು. ಸಮೀಕ್ಷೆಗಳಿಗೆ ಉತ್ತರಿಸಲ್ಲ: ಯುಪಿಎ ಸರಕಾರ ಕೂಡ ತನ್ನ ಅಧಿಕಾರಾವಧಿಯಲ್ಲಿ ಕೈಗೊಂಡಿರುವ ಹಲವು ಮಹತ್ತರ ಯೋಜನೆಗಳು ಇಡೀ ಮತದಾರರ ಅಜಂಡಾ ಆಗಿವೆ. ಹೀಗಿರುವಾಗ ರಾಜ್ಯದಲ್ಲಿ ಇತರೆ ಪಕ್ಷಗಳಿಗಿಂತ ಅಧಿಕ ಸ್ಥಾನಗಳನ್ನು ಗಳಿಸುತ್ತೇವೆ ಎಂಬ ವಿಶ್ವಾಸ ಪಡಿಸಿದ ಕೃಷ್ಣ, ಮಾಧ್ಯಮಗಳಲ್ಲಿನ ಸಮೀಕ್ಷೆ ವರದಿ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದರು.
ಅಂಬಿ ಗುಣಮುಖ ಕಾವಲುಪಡೆ ಸಂಭ್ರಮ
ಹಾಸನ: ರೆಬಲ್ ಸ್ಟಾರ್ ಅಂಬರೀಷ್ ಸಿಂಗಾಪುರದಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿ ಬೆಂಗಳೂರಿಗೆ ವಾಪಸ್ ಬಂದ ಹಿನ್ನೆಲೆಯಲ್ಲಿ ಕರ್ನಾಟಕ ಕಾವಲು ಪಡೆ ಕಾರ್ಯಕರ್ತರು ಇತ್ತೀಚೆಗೆ ನಗರದಲ್ಲಿ ಸಿಹಿ ಹಂಚಿ ಸಂಭ್ರಮಿಸಿದರು. ನಗರದ ಹೇಮಾವತಿ ಪ್ರತಿಮೆ ಬಳಿ ಜಮಾಯಿಸಿದ ಕಾವಲು ಪಡೆ ಕಾರ್ಯಕರ್ತರು ಅಂಬರೀಷ್ಗೆ ಜೈಕಾರ ಹಾಕಿದರು. ನಂತರ ಮಾತನಾಡಿದ ಕಾವಲು ಪಡೆ ಜಿಲ್ಲಾಧ್ಯಕ್ಷ ನವೀನ್ ಕುಮಾರ್, ದೇವರ ಆಶೀರ್ವಾದದಿಂದ ನಾಡಿಗೆ ಮರಳಿದ ಅಂಬರೀಷ್, ನೂರು ವರ್ಷ ಬಾಳಲಿ ಎಂದು ಪ್ರಾರ್ಥಿಸಿದರು. ಕಾವಲು ಪಡೆ ತಾಲೂಕು ಅಧ್ಯಕ್ಷ ಭಾನುಪ್ರಕಾಶ್, ಸಹ ಕಾರ್ಯದರ್ಶಿ ಸಯ್ಯಾದ್ ಎಜಾಜ್, ವಿದ್ಯಾರ್ಥಿ ಘಟಕ ಅಧ್ಯಕ್ಷ ಪ್ರಸಾದ್ ಇತರರು ಇದ್ದರು.