ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಮೋದಿ ಅಲೆಯಿಂದ ಗೆಲ್ಲುವ ಭರವಸೆ: ವಿಜಯಶಂಕರ್

Srinivasa Murthy VN
Updated On : 15 Apr 2014, 12:41 pm

ಚನ್ನರಾಯಪಟ್ಟಣ: ದೇಶದಲ್ಲಿ ಮೋದಿ ಅಲೆ ಹೆಚ್ಚಾಗಿರುವ ಕಾರಣ ಅದೇ ಹುರುಪಿನಲ್ಲಿ ಹಾಸನ ಜಿಲ್ಲೆಯ ಜನತೆ ನನ್ನನ್ನೂ ಗೆಲ್ಲಿಸಲಿದ್ದಾರೆ ಎಂದು ಹಾಸನ ಲೋಕಸಭಾ ಕ್ಷೇತ್ರದ  ಬಿಜೆಪಿ ಅಭ್ಯರ್ಥಿ ವಿಜಯಶಂಕರ್ ವಿಶ್ವಾಸ ವ್ಯಕ್ತಪಡಿಸಿದರು. ಅವರು ಪಟ್ಟಣದಲ್ಲಿ ಇತ್ತೀಚೆಗೆ ಪ್ರಮುಖ ಬೀದಿಗಳಲ್ಲಿ ಪಾಧಯಾತ್ರೆ ಮೂಲಕ  ಮತಯಾಚಿಸಿ ಮಾತನಾಡಿ,  ಗುಜರಾತ್‌ನಲ್ಲಿ ನರೇಂದ್ರ ಮೋದಿ ಹೇಗೆ ಅಭಿವೃದ್ಧಿ ಕೆಲಸ ಮಾಡಿದ್ದಾರೋ ಅದೇ ಮಾದರಲ್ಲಿ ಹಾಸನ ಜಿಲ್ಲೆಗೆ ಅಭಿವೃದ್ಧಿ ಮಾಡಲು ನಾನು ಸಿದ್ಧನಾಗಿದ್ದೇನೆ. ರಾಜ್ಯದಲ್ಲಿ ಬಿಜೆಪಿ 20 ಕ್ಷೇತ್ರಗಳಲ್ಲಿ ಜಯಗಳಿಸಿ ಮೋದಿ ಅವರು ಪ್ರಧಾನಿಯಾಗಲು ಸಹಕಾರಿಯಾಗಲಿದ್ದೇವೆ ಎಂದು  ಹೇಳಿದರು. ಜಿಲ್ಲೆಯಲ್ಲಿ ದೇವೇಗೌಡರು ಪ್ರಧಾನಿ, ಮುಖ್ಯಮಂತ್ರಿ, ಮಂತ್ರಿಗಳಂತಹ ಉನ್ನ  ಸ್ಥಾನಗಳನ್ನು ಅಲಂಕರಿಸಿದ್ದರೂ ಜಿಲ್ಲೆಗೆ ಯಾವುದೇ ಅಭಿವೃದ್ಧಿ ಕೆಲಸ ಮಾಡದೆ ಕನಿಷ್ಠ ಪಕ್ಷ ರೈತರಿಗೆ ನೀರು ಕೊಡಿಸುವಲ್ಲಿ ವಿಫಲರಾಗಿದ್ದಾರೆ, ಶಿವಮೊಗ್ಗ ಜಿಲ್ಲೆಯನ್ನು ನೋಡಿ ಕಲಿಯಿರಿ ಎಂದರು. ನಗರಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ನವಿಲೆ ಅಣ್ಣಪ್ಪ, ತಾಲೂಕು ಅಧ್ಯಕ್ಷ ಓಬಳಾಪುರ ರಂಗೇಗೌಡ, ಕಾರ್ಯದರ್ಶಿ ಪರಮಗಂಗಾಧರ್, ಸಿ.ಟಿ. ಗಣೇಶ್, ಎ. ಆರ್. ನಾಗರಾಜ್, ಮಾಸ್ತಿಗೌಡ, ಡಿ. ಎಂ. ರವಿ, ಪಟೇಲ್ ಮಂಜುನಾಥ್, ಎ.ಜೆ. ಕುಮಾರ್, ಕನ್ನಡವಾಸು, ರಾಜ್ ಕುಮಾರ್, ನೂರ್ ಜಾನ್‌ಪಾಲ್ಗೊಂಡಿದ್ದರು.

ವಿದ್ಯಾರ್ಥಿಗಳಿಂದ ಮತದಾನ ಜಾಗೃತಿ ಜಾಥಾ
ಹಾಸನ: ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆ, ಜಿಲ್ಲಾ ಸ್ವೀಪ್ ಸಮಿತಿ ಸಹಯೋಗದಲ್ಲಿ ಶನಿವಾರ ಮತದಾರರ ಜಾಗೃತಿಗಾಗಿ ಕಾಲೇಜು ವಿದ್ಯಾರ್ಥಿಗಳ ಬೃಹತ್ ಮೆರವಣಿಗೆ ಮತ್ತು ಕಲಾ ಜಾಥಾ ನಡೆಯಿತು. ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷ ಹಾಗೂ ಜಿ.ಪಂ. ಸಿಇಓ ಉಪೇಂದ್ರ ಪ್ರತಾಪ್ ಸಿಂಗ್ ಅವರು ಜಾಥಾ ಉದ್ಘಾಟಸಿ ಮಾತನಾಡಿ ಮತದಾನ ಕೇವಲ ಹಕ್ಕಲ್ಲ ಕರ್ತವ್ಯ ಕೂಡ ಎಲ್ಲರೂ ತಪ್ಪದೇ ಮತ ಚಲಾಯಿಸಬೇಕು ಎಂದರು. ಹಾಸನ ತಾಲೂಕು ಸಹಾಯಕ ಚುನಾವಣಾಧಿಕಾರಿ, ಎಸಿ ಶರತ್ ಮಾತನಾಡಿ ದೇಶ ಸ್ವಾತಂತ್ರ್ಯವಾದ ತಕ್ಷಣ ಮೊದಲಿಗೆ ಪ್ರಜೆಗಳಿಗೆ ಮತದಾನದ ಹಕ್ಕು ನೀಡಲಾಯಿತು. ಪ್ರಜಾಪ್ರಭುತ್ವ ವ್ಯವಸ್ಥೆ ಬಲಗೊಳ್ಳಬೇಕಾದರೆ ಎಲ್ಲಾ ಅರ್ಹರೂ ಕಡ್ಡಾಯವಾಗಿ ಮತದಾನದಲ್ಲಿ ಪಾಲ್ಗೊಳ್ಳಬೇಕು ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement