ವಿಎಚ್‌ಪಿ, ಬಜರಂಗದಳ ಕಾರ್ಯಕರ್ತರ ಪ್ರಚಾರ
ಸಕಲೇಶಪುರ: ವಿಶ್ವ ಹಿಂದೂ ಪರಿಷತ್ ಬಜರಂಗದಳದ ಕಾರ್ಯಕರ್ತರು ಪಟ್ಟಣದ ಪ್ರಮುಖ ವಾರ್ಡ್‌ಗಳಲ್ಲಿ ಭಾನುವಾರ ಚುನಾವಣಾ ಪ್ರಚಾರ ನಡೆಸಿದರು.
ಈ ಸಂದರ್ಭದಲ್ಲಿ ಬಜರಂಗದಳದ ಮುಖಂಡ ರಘು ಮಾತನಾಡಿ, ಹಾಸನ ಲೋಕಸಭಾ ಕ್ಷೇತ್ರದಲ್ಲೂ ಸಹ ಈ ದೇಶದ ಮುಂದಿನ ಪ್ರಧಾನಿ ಅಭ್ಯರ್ಥಿ ಎಂದು ಬಿಂಬಿತರಾಗಿರುವ ನರೇಂದ್ರ ಮೋದಿ ಅಲೆ ಎಲ್ಲೆಡೆ ಕಾಣುತ್ತಿದೆ. ಇದರಿಂದ ಬಹುತೇಕ ಯುವ ಮತದಾರರು ಬಿಜೆಪಿಯತ್ತ ವಾಲುತ್ತಿದ್ದಾರೆ. ದೇಶದಲ್ಲಿ ಭಯೋತ್ಪಾದನೆ ಒಂದು ಪಿಡುಗಾಗಿದ್ದು, ಇದನ್ನು ಬಗೆಹರಿಸಲು ನರೇಂದ್ರ ಮೋದಿರವರಿಂದ ಮಾತ್ರ ಸಾಧ್ಯ ಎಂದು ಹೇಳಿದರು. ಕಾಶ್ಮೀರ, ಬಾಂಗ್ಲಾ ದೇಶದ ಜನರ ಒಳನುಸುಳು ಸಮಸ್ಯೆ ಸೇರಿದಂತೆ ಚೈನಾ ದೇಶದವರ ಪಿತೂರಿಗಳಿಗೆ ಉತ್ತರ ಕೊಡಲು ಮೋದಿರವರು ಶಕ್ತರಾಗಿದ್ದಾರೆ. ಆದ್ದರಿಂದ ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ವಿಜಯ ಶಂಕರ್ ಅವರಿಗೆ ಪ್ರತಿಯೊಬ್ಬರೂ ಮತ ನೀಡಬೇಕೆಂದು ಮನವಿ ಮಾಡಿದರು. ಇದೇ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷತ್, ಬಜರಂಗದಳದ ಕಾರ್ಯಕರ್ತರು ಪಟ್ಟಣದ ಪ್ರಮುಖ ವಾರ್ಡ್‌ಗಳಲ್ಲಿ ಚುನಾವಣೆ ಪ್ರಚಾರ ನಡೆಸಿದರು.
ಈ ಸಂದರ್ಭದಲ್ಲಿ ವಿಎಚ್‌ಪಿ-ಬಜರಂಗದಳ ತಾಲೂಕು ಮುಖಂಡ ಧರ್ಮೇಶ್, ದುಷ್ಯಂತ್, ಕಬ್ಬಿನಗದ್ದೆ ಶೇಖರ್, ವಿಜಯ್ ಕುಮಾರ್, ಭೂಷಣ್, ನಮೋ ಬ್ರಿಗೇಡ್ ಮುಖಂಡ ಸಂದೇಶ್ ಶೆಟ್ಟಿ ಇದ್ದರು.