ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ನಾಳೆ ಜಡ್ಜ್‌ಮೆಂಟ್ ಡೇ

Srinivasa Murthy VN
Updated On : 16 Apr 2014, 1:09 am

ಕ.ಪ್ರ.ವಾರ್ತೆ ಹಾಸನ ಏ. 15
ಜಿಲ್ಲೆಯಲ್ಲಿ ಏ. 17ರಂದು ನಡೆಯುವ ಲೋಕಸಭಾ ಚುನಾವಣೆ ಮತದಾನ ಸುಗಮವಾಗಿ ನಡೆಯಲು ಬೇಕಾದ ಸಿದ್ಧತೆಗಳನ್ನು ಜಿಲ್ಲಾಡಳಿತ ಸಿದ್ಧತೆ ಮಾಡಿಕೊಂಡಿದೆ ಎಂದು ಜಿಲ್ಲಾಧಿಕಾರಿ ವಿ. ಅನ್ಬುಕುಮಾರ್ ತಿಳಿಸಿದ್ದಾರೆ.
ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಡೂರು ಸೇರಿದಂತೆ ಜಿಲ್ಲೆಯ 8 ವಿಧಾನಸಭಾ ಕ್ಷೇತ್ರಗಳಲ್ಲಿ 2196 ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, 9837 ಸಿಬ್ಬಂದಿಯನ್ನು ನೇಮಕ ಮಾಡಿದೆ. ಅದರಲ್ಲಿ 6657 ಪುರುಷ  ಹಾಗೂ 3180 ಮಹಿಳಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ಶ್ರವಣಬೆಳಗೊಳ ವಿಧಾನಸಭಾ ಕ್ಷೇತ್ರದಲ್ಲಿ 270 ಮತಗಟ್ಟೆಗಳಿಗೆ 1206 ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಅರಸೀಕೆರೆ ಕ್ಷೇತ್ರದಲ್ಲಿ 275 ಮತಗಟ್ಟೆಗಳಿಗೆ 1231 ಸಿಬ್ಬಂದಿ, ಬೇಲೂರು ಕ್ಷೇತ್ರದಲ್ಲಿ 268 ಮತಗಟ್ಟೆಗಳಿಗೆ 1162 ಸಿಬ್ಬಂದಿ, ಹಾಸನ ಕ್ಷೇತ್ರದಲ್ಲಿ 265 ಮತಗಟ್ಟೆಗಳಿಗೆ 1163 ಸಿಬ್ಬಂದಿ, ಹೊಳೆನರಸೀಪುರ ಕ್ಷೇತ್ರದಲ್ಲಿ 316 ಮತಗಟ್ಟೆಗಳಿಗೆ 1408 ಸಿಬ್ಬಂದಿ, ಅರಕಲಗೂಡು ಕ್ಷೇತ್ರದಲ್ಲಿ 285 ಮತಗಟ್ಟೆಗಳಿಗೆ 1275 ಸಿಬ್ಬಂದಿ ಹಾಗೂ  ಸಕಲೇಶಪುರ ವಿಧಾನಸಭಾ ಕ್ಷೇತ್ರದಲ್ಲಿ 281 ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು,  1245 ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. ಕಡೂರು ಕ್ಷೇತ್ರದಲ್ಲಿ 236 ಮತಗಟ್ಟೆ ಸ್ಥಾಪಿಸಿದ್ದು, 1147 ಸಿಬ್ಬಂದಿಯನ್ನು ನೇಮಕ ಮಾಡಲಾಗಿದೆ.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಪಂಚಾಯ್ತಿ ಸಿಇಒ ಉಪೇಂದ್ರ ಸಿಂಗ್, ಹೆಚ್ಚುವರಿ ಜಿಲ್ಲಾಧಿಕಾರಿ ಗೋಪಾಲಕೃಷ್ಣ, ಚುನಾವಣಾ ತಹಸೀಲ್ದಾರ್ ಬಾಬುರಾವ್ ಮತ್ತು ವಾರ್ತಾ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ವಿನೋದ ಚಂದ್ರ ಇದ್ದರು.

ಶಾಂತಿಯುತ ಮತದಾನಕ್ಕೆ ಸಜ್ಜು
2196 ಮತಗಟ್ಟೆಗಳು

ಪೊಲೀಸ್ ಬಂದೋಬಸ್ತ್
ಎಸ್ಪಿ ರವಿ ದ್ಯಾಮಪ್ಪ ಚನ್ನಣ್ಣನವರ ಮಾತನಾಡಿ, ಮುಕ್ತ, ನಿರ್ಭಿತ ಮತದಾನಕ್ಕಾಗಿ ಮತಗಟ್ಟೆಗಳ ಬಳಿ ಸೂಕ್ತ ಬಂದೋಬಸ್ ಮಾಡಲಾಗುತ್ತಿದ್ದು, 39 ಸಂಚಾರಿ ದಳ, 21 ವಿಚಕ್ಷಣಾ ತಂಡಗಳನ್ನು ಬಳಸಿಕೊಳ್ಳಲಾಗುತ್ತಿದೆ ಎಂದರು. ಜಿಲ್ಲೆಯ ಪ್ರಮುಖ ನಗರ, ತಾಲೂಕು ಮತ್ತು ಹೋಬಳಿ ಕೇಂದ್ರಗಳಲ್ಲಿ ಕೇಂದ್ರೀಯ ಅರೆ ಸೇನಾ ಪಡೆ ಮತ್ತು ಪೊಲೀಸ್ ಸಿಬ್ಬಂದಿಯಿಂದ ಪಥ ಸಂಚಲನ ನಡೆಸಿ, ಮತದಾರರು ಮುಕ್ತವಾಗಿ ಮತ ಚಲಾಯಿಸಲು ಆತ್ಮವಿಶ್ವಾಸವನ್ನು ವೃದ್ಧಿಸುವ ಪ್ರಯತ್ನ ಮಾಡಲಾಗಿದೆ ಎಂದು ತಿಳಿಸಿದರು.
ರೌಡಿ ಶೀಟರ್‌ಗಳ ವಿರುದ್ಧ ಕ್ರಮ: ಈಗಾಗಲೇ ರೌಡಿ ಶೀಟರ್‌ಗಳು ಮತ್ತು ಕೋಮು ಗಲಭೆ ಗೂಂಡಾಗಳ ವಿರುದ್ಧ ಮುಂಜಾಗ್ರತಾ ಕ್ರಮ ಜರುಗಿಸಲಾಗಿದೆ ಎಂದು ಅವರು ತಿಳಿಸಿದರು.

ಎಚ್ಚರಿಕೆ... ಎಚ್ಚರಿಕೆ... ಎಚ್ಚರಿಕೆ...
ಚುನಾವಣೆ ಸಂದರ್ಭದಲ್ಲಿ ಯಾವುದೇ ರೀತಿಯ ಆಮಿಷ ಒಡ್ಡುವುದು, ಆಮಿಷಕ್ಕೆ ಒಳಗಾಗುವುದು ಎರಡೂ ಅಪರಾಧವಾಗಿದ್ದು, ಇದಕ್ಕೆ ಒಂದು ವರ್ಷ ಶಿಕ್ಷೆ ಇರುತ್ತದೆ.   ಎರಡು ಕಡೆಗಳಲ್ಲಿ ಮತ ಚಲಾಯಿಸಿದರೆ, ಬೇರೆಯವರ ಹೆಸರಿನಲ್ಲಿ ಮತ ಚಲಾಯಿಸಿದರೆ ಅವರೂ ಸಹ ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ.

ಹೆಚ್ಚುವರಿ ಅಧಿಕಾರಿ ನೇಮಕ
1200 ಮೀರಿದ ಮತದಾರರನ್ನು ಹೊಂದಿರುವ ಮತಗಟ್ಟೆಗಳಿಗೆ  ಒಬ್ಬರು ಹೆಚ್ಚುವರಿ ಮತದಾನಾಧಿಕಾರಿಯವರನ್ನು ನೇಮಿಸಲಾಗಿದೆ. ಆಯೋಗದ ನಿರ್ದೇಶನದಂತೆ ಮಹಿಳಾ ನೌಕರರನ್ನು ಅವರು ಕೆಲಸ ನಿರ್ವಹಿಸುವ ವಿಧಾನಸಭಾ ಕ್ಷೇತ್ರದಲ್ಲಿಯೇ  ಅವರು ಮತದಾರಾಗಿರುವ ಮತಗಟ್ಟೆಯನ್ನು ಹೊರತುಪಡಿಸಿ ನಿಯೋಜಿಸಲಾಗಿದೆ.

ಬುರ್ಕಾಧಾರಿಗಳಿಗೆ
ಪರ್ದಾನಶೀನ ಪದ್ಧತಿ ಪ್ರದೇಶಗಳು ಇರುವ (ಬುರ್ಕಾ ಹಾಕಿಕೊಂಡು ಮತ ಹಾಕಲು ಬರುವ ಮಹಿಳೆಯರು ಇರುವ ಪ್ರದೇಶ) ಮತಗಟ್ಟೆಗಳಲ್ಲಿ ಮಹಿಳಾ ಮತದಾನಾಧಿಕಾರಿಗಳನ್ನು ನೇಮಿಸಲಾಗಿದೆ. ಎಲ್ಲ ಮತಗಟ್ಟೆಗಳಿಗೂ ಹಾಗೂ ಮತಗಟ್ಟೆ ಸಿಬ್ಬಂದಿ  ತಂಡಕ್ಕೂ  20-25 ಲೀಟರ್ ನೀರಿನ ಕ್ಯಾನ್ ಒದಗಿಸಲಾಗುವುದು. ಮತದಾನ  ಸಿಬ್ಬಂದಿಗಳ ಸಂದರ್ಭಾನುಸಾರ ಅವಶ್ಯಕ ಉಪಯೋಗಕ್ಕಾಗಿ ಪ್ರಥಮ ಚಿಕಿತ್ಸಾ ಕಿಟ್‌ಗಳನ್ನು  ಒದಗಿಸಲಾಗಿದೆ.

ವೆಬ್ ಕ್ಯಾಸ್ಟಿಂಗ್, ವೆಬ್ ಕ್ಯಾಮೆರಾ
ಜಿಲ್ಲೆಯಲ್ಲಿ ಒಟ್ಟು  383 ವೆಬ್ ಕ್ಯಾಸ್ಟಿಂಗ್ ಅಳವಡಿಸಲಾಗಿದ್ದು, 605 ಮೇಕ್ರೋ ಅಬ್ಸರ್ವರ್‌ಗಳನ್ನು ನೇಮಕ ಮಾಡಲಾಗಿದೆ.  240 ವಿಡಿಯೋ ಕ್ಯಾಮೆರಾ, 214 ಡಿಜಿಟಲ್ ಕ್ಯಾಮೆರಾ ಅಳವಡಿಸಲಾಗುವುದು. ವೆಬ್ ಕ್ಯಾಸ್ಟಿಂಗ್‌ಗಾಗಿ ಹಾಸನದ ಸರ್ಕಾರಿ ಎಂಜಿನಿಯರಿಂಗ್ ಕಾಲೇಜು ಹಾಗೂ ಇನ್ನಿತರ ಕಾಲೇಜುಗಳ ವಿದ್ಯಾರ್ಥಿಗಳನ್ನು ನಿಯೋಜಿಸಲಾಗಿದೆ.

277 ಸಾರಿಗೆ ಸಂಸ್ಥೆ ಬಸ್ ಬಳಕೆ
ಚುನಾವಣೆ ಮತದಾನ ಕಾರ್ಯಕ್ಕೆ ಜಿಲ್ಲೆಗೆ 595 ವಾಹನಗಳನ್ನು ಬಳಸಿಕೊಳ್ಳಲಾಗುತ್ತಿದೆ. 277 ಕೆಎಸ್‌ಆರ್‌ಟಿಸಿ ಬಸ್‌ಗಳು, 159 ಸರ್ಕಾರಿ ಜೀಪು,  102 ಖಾಸಗಿ ಜೀಪು ಅಥವಾ ಕಾರುಗಳು, 11 ಮ್ಯಾಕ್ಸಿಕ್ಯಾಬ್ ಹಾಗೂ 46  ಮಿನಿ ಬಸ್‌ಗಳನ್ನು  ಬಳಸಿಕೊಳ್ಳಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಹಾಗಾದರೆ, ಈ ವೆಬ್‌ಸೈಟ್ ನೋಡಿ...
ಹಾಸನ: ಸಾರ್ವಜನಿಕರು ಮತದಾರರ ಪಟ್ಟಿಯಲ್ಲಿ  ತಮ್ಮ ಹೆಸರು ಇದೆಯೇ ಎಂದು  ಪರಿಶೀಲಿಸಲು  ಢಿಢಿಢಿ.್ಛಜ್ಟ.್ಞಛ್ಠಟಿಛಡಿಛ್ಞಛ.್ಞಛ್ಠ.ಟ್ಝ್ಛಿ.್ಝಟಿ ವೆಬ್‌ಸೈಟ್ ಮೂಲಕ ಪರಿಶೀಲಿಸಬಹುದು. ಇದರಲ್ಲಿ ಮತಗಟ್ಟೆ ವಿವರ ಪಡೆಯಬಹುದು. ಅಲ್ಲದೆ ಎಸ್‌ಎಂಎಸ್ ಮೂಲಕ ಪರಿಶೀಲಿಸಬಹುದು.
ಇದಕ್ಕಾಗಿ ಓಆಊಕಿಐಈ (ಡಠಛ್ಛಜ)  ಎಪಿಕ್ ಸಂಖ್ಯೆಯನ್ನು ಉದಾಹರಣೆಗೆ ಓಆಊಕಿಐಈ  ್ಗಘಘಿ1509201 ತಮ್ಮ ವಿವರಗಳನ್ನು 92433 55223 ನಂಬರಿಗೆ ಎಸ್‌ಎಂಎಸ್ ಕಳುಹಿಸುವ ಮೂಲಕ ಪಡೆದುಕೊಳ್ಳಬಹುದಾಗಿದೆ.
ಸಂ. 6ರವರೆಗೆ ಮತದಾನ: ಮತದಾನದ ಅಭ್ಯರ್ಥಿಗಳು  ಮತದಾನ ಕೇಂದ್ರಕ್ಕಿಂತ  200 ಮೀಟರ್ ್ದೂರದಲ್ಲಿ ಬೂತ್ ವ್ಯವಸ್ಥೆ ಮಾಡಿಕೊಳ್ಳಬಹುದಾಗಿದೆ. ಆ ಸ್ಥಳದಲ್ಲಿ ಅವರು 2 ಕುರ್ಚಿ, 1 ಟೇಬಲ್ ಹಾಗೂ 4.6 ಅಡಿ ಉದ್ದ ಮತ್ತು 3 ಅಡಿ ಅಗಲದ ಬ್ಯಾನರನ್ನು ಮಾತ್ರ ಕಟ್ಟಿಕೊಳ್ಳಲು ಅವಕಾಶವಿದೆ. ಇಲ್ಲಿ ಮತದಾರರ ಅನುಕೂಲಕ್ಕೆ  ಬಿಳಿ ಚೀಟಿಯಲ್ಲಿ  ಮತದಾರರ ಕ್ರಮ ಸಂಖ್ಯೆ ಮತ್ತು ಹೆಸರು ಮಾತ್ರ ಇರುವ  ವೋಟರ್ ಸ್ಲಿಪ್‌ಗಳನ್ನು ನೀಡಬಹುದು. ಈ ಚೀಟಿಯ ಮೇಲೆ ಪಕ್ಷದ ಚಿಹ್ನೆ ಇರಬಾರದು ಮತ್ತು ಯಾವುದೇ ಪ್ರಚಾರ ನಡೆಸುವಂತಿಲ್ಲ.

17ರಂದು ರಜೆ ಘೋಷಣೆ
ಹಾಸನ: ಎಲ್ಲಾ ಕೇಂದ್ರ ಹಾಗೂ ರಾಜ್ಯ ಸರ್ಕಾರಿ ಕಚೇರಿಗಳಿಗೆ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸ್ವಾಮ್ಯಕ್ಕೆ ಒಳಪಟ್ಟ ಸಂಸ್ಥೆಗಳಿಗೆ, ಸರ್ಕಾರಿ ಹಾಗೂ ಖಾಸಗಿ(ಅನುದಾನಿತ ಮತ್ತು ಅನುದಾನ ರಹಿತ) ಶಿಕ್ಷಣ ಸಂಸ್ಥೆಗಳಿಗೆ, ಔದ್ಯಮಿಕ ಸಂಸ್ಥೆಗಳ ಮತ್ತು ಇನ್ನಿತರೆ ಸಂಸ್ಥೆಗಳಿಗೆ ಮತದಾನ ನಡೆಯುವ ಏ. 17ರಂದು ಸಾರ್ವತ್ರಿಕ ರಜೆಯನ್ನು ರಾಜ್ಯ ಸರ್ಕಾರ ಘೋಷಿಸಿದೆ.
ಎಲ್ಲಾ ವ್ಯವಹಾರಿಕ ಸಂಸ್ಥೆಗಳು, ಔದ್ಯಮಿಕ ಸಂಸ್ಥೆಗಳು ಮತ್ತು ಇನ್ನಿತರ ಸಂಸ್ಥೆಗಳಲ್ಲಿ ಖಾಯಂ ಆಗಿ ಅಥವಾ ದಿನಗೂಲಿ ಮೇಲೆ ಕೆಲಸ ನಿರ್ವಹಿಸುತ್ತಿರುವ ಎಲ್ಲಾ ನೌಕರರಿಗೆ ಮತದಾನ ಮಾಡಲು ಅನುಕೂಲವಾಗುವಂತೆ ವೇತನ ಸಹಿತ ರಜೆಯನ್ನು ನೀಡಲು ರಾಜ್ಯ ಸರ್ಕಾರ ಆದೇಶಿಸಿದೆ ಎಂದು ಜಿಲ್ಲಾಧಿಕಾರಿ ಕಚೇರಿ ಪ್ರಕಟಣೆ ತಿಳಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement