'ಬಿಜೆಪಿಗೆ ನಿಚ್ಚಳ ಬಹುಮತ, ಮೋದಿಗೆ ಪ್ರಧಾನಿ ಪಟ್ಟ'
ಬೇಲೂರು: ಬಿಜೆಪಿ ನಿಚ್ಚಳ ಬಹುಮತದೊಂದಿಗೆ ಕೇಂದ್ರದಲ್ಲಿ ಅಧಿಕಾರ ನಡೆಸುವುದಲ್ಲದೆ ನರೇಂದ್ರಮೋದಿ ಪ್ರಧಾನ ಮಂತ್ರಿಯಾಗಲಿದ್ದಾರೆ ಎಂದು ಬಿಜೆಪಿ ಮುಖಂಡ ಕೊರಟಿಕೆರೆ ಪ್ರಕಾಶ್ ತಿಳಿಸಿದ್ದಾರೆ.
ತಾಲೂಕಿನ ಕಸಬಾ ಹೋಬಳಿ ಹನಿಕೆ ಗ್ರಾಮದ ದಲಿತ ಕಾಲೋನಿಯಲ್ಲಿ ಭಾನುವಾರ ಮತಯಾಚಿಸಿದ ನಂತರ ಸುದಿಗ್ದಾರರೊಂದಿಗೆ ಮಾತನಾಡಿದರು.
ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ದಲಿತರ ಏಳಿಗೆಗೆ ಶ್ರಮಿಸಿದ್ದಾರೆ. ಅಲ್ಲದೇ, ಬಡವರ ಉದ್ಧಾರಕ್ಕಾಗಿ ಹಲವರು ಯೊಜನೆ ರೂಪಿಸಿದ್ದು ಅದರಲ್ಲಿ ಬಹುಮುಖ್ಯವಾಗಿ ಭಾಗ್ಯಲಕ್ಮಿ ಯೋಜನೆ ಬಡ ಜನತೆಗೆ ಪೂರಕವಾದ ಯೊಜನೆಯಾಗಿದೆ ಎಂದರು.
ಮನವಿ: ಕಳೆದ 10 ವರ್ಷಗಳ ಕಾಲ ಆಡಳಿತ ನಡೆಸಿದ ಯುಪಿಎ ಸರ್ಕಾರ, ಲಕ್ಷಾಂತರ ಕೋಟಿ ಭ್ರಷ್ಟಾಚಾರ ನಡೆಸುವ ಮೂಲಕ ದೇಶದ ಸಂಪತ್ತನ್ನು ಕೊಳ್ಳೆ ಹೊಡೆದಿದೆ. ದೇಶದ ಸಮಗ್ರ ಅಭಿವೃದ್ಧಿಗೆ ಪಣ ತೊಟ್ಟರುವ ನರೇಂದ್ರ ಮೋದಿ ಅವರನ್ನು ಪ್ರಧಾನಿಯನ್ನಾಗಿ ಮಾಡಲು ಎಲ್ಲಾ ವರ್ಗದ ಜನ ಅವರಿಗೆ ಮತ ಹಾಕಬೇಕೆಂದು ಮನವಿ ಮಾಡಿದರು. ಕರೆ: ಯುಪಿಎ ಸರ್ಕಾರದ ಆಡಳಿತದಲ್ಲಿ ಆರ್ಥಿಕ ಕುಸಿತ, ಮಹಿಳೆಯಮೇಲೆ ದೌರ್ಜನ್ಯ, ನಕ್ಸಲ್ ಮತ್ತು ಉಗ್ರಗಾಮಿಗಳ ಚಟುವಟಿಕೆಗಳನ್ನು ತಡೆಯುವಲ್ಲಿ ವಿಫಲವಾಗಿದೆ. ಇವೆಲ್ಲವನ್ನು ತಿಳಿದಿರುವ ದೇಶದ ಜನರು ಕಾಂಗ್ರೆಸ್ ಪಕ್ಷವನ್ನು ತಿರಸ್ಕರಿಸಬೇಕು ಎಂದು ಕರೆನೀಡಿದರು. ಗೆಲವು ನಿಶ್ಚಿತ: ಜಿಲ್ಲೆಯಲ್ಲಿ ಬಿಜೆಪಿ ಕಳೆದ ಲೋಕಸಭಾ ಚುನಾವಣೆಯಲ್ಲಿ ಎರಡನೇ ಸ್ಥಾನದಲ್ಲಿತ್ತು. ಆದರೆ ಈ ಚುನಾವಣೆಯಲ್ಲಿ ಅಭ್ಯರ್ಥಿ ವಿಜಯಶಂಕರ್ ಸಜ್ಜನರಾಗಿದ್ದು, ಎಲ್ಲ ವರ್ಗಗಳ ಜನ ಅವರನ್ನು ಪ್ರೀತಿಸುತ್ತಿದ್ದಾರೆ. ಹಾಗಾಗಿ, ಅವರ ಗೆಲುವು ನಿಶ್ಚಿತ ಎಂದರು. ಈ ಸಂದರ್ಭದಲ್ಲಿ ತಾಲೂಕು ಪಂಚಾಯ್ತಿ ಮಾಜಿ ಉಪಾಧ್ಯಕ್ಷ ಹಾಗೂ ಹಾಲಿ ಸದಸ್ಯ ಬಲ್ಲೇನಹಳ್ಳಿ ರವಿಕುಮಾರ್, ಬಿಜೆಪಿ ಮುಖಂಡ ಕನಾಯ್ಕನಹಳ್ಳಿ ಮಹದೇವ್, ಕೊರಟಿಕೆರೆ ರಾಜಣ್ಣ, ಕೋಗಿಲಮನೆ ಅರುಣಕುಮರ್, ಶಾಂತವೀರಯ್ಯ, ರಾಜು, ಗೀರೀಶ್, ಉಮೇಶ್ ಹಾಗೂ ಇತರರು ಇದ್ದರು.