ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಬೇಲೂರಿನಲ್ಲಿ ಕಾಂಗ್ರೆಸ್ ಬೈಕ್ ರ್ಯಾಲಿ

Srinivasa Murthy VN
Updated On : 16 Apr 2014, 1:11 am

ಬೇಲೂರು: ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸುವುದರ ಮೂಲಕ ಹಾಸನ ಜಿಲ್ಲೆಯನ್ನು ಉಳಿಸಿ ಜೆಡಿಎಸ್ ಅನ್ನು ಮನೆಗೆ ಕಳಿಸಿ ಎಂದು ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಂತರ್ ಗೌಡ ಕರೆ ನೀಡಿದರು.
ತಾಲೂಕಿನ ಹಗರೆ ಗ್ರಾಮದಲ್ಲಿ ಯುವ ಕಾಂಗ್ರೆಸ್ ಘಟಕದಿಂದ ಆಯೋಜಿಸಿದ್ದ ಬೈಕ್‌ರ್ಯಾಲಿಗೆ ಚಾಲನೆ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಜಿಲ್ಲೆಯಲ್ಲಿ ಮತದಾರ ಈ ಬಾರಿ ಬದಲಾವಣೆಯತ್ತ ಮನಸ್ಸು ಮಾಡಿದ್ದಾನೆ. ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪರವಾಗಿ ಹೆಚ್ಚಿನ ಮತ ಬೀಳಲಿವೆ. ತಾವು ಉವ ಸಂಘಟನೆ ಹೆಚ್ಚು ಒತ್ತು ನೀಡಿದ್ದು ಕಾಂಗ್ರೆಸ್‌ಗೆ ಯುವಶಕ್ತಿಯ ಶ್ರೀರಕ್ಷೆಯಿದೆ.
 ಕಾಂಗ್ರೆಸ್ ಪಕ್ಷ ಜಾತಿ ಆಧಾರಿತ ಪಕ್ಷವಾಗಿರದೆ ಎಲ್ಲಾ ವರ್ಗದವನ್ನು ಒಗ್ಗೂಡಿಸಿಕೊಂಡು ಹೋಗುವ ಪಕ್ಷವಾಗಿದ್ದು ಜಿಲ್ಲೆಯಲ್ಲಿ ಜೆಡಿಎಸ್ ಧೂಳಿಪಟವಾಗುವ ಎಲ್ಲಾ ಲಕ್ಷಣಗಳು ಗೋಚರವಾಗುತ್ತಿವೆ ಎಂದರು.
ಹೆಚ್ಚಿನ ಬಹುಮತ: ಶಾಸಕ ವೈ.ಎನ್. ರುದ್ದೇಶ್ ಗೌಡ ಮಾತನಾಡಿ, ತಮ್ಮ ಅಧಿಕಾರವದಿಯಲ್ಲಿ ತಾಲೂಕಿನಲ್ಲಿ ಕೋಟ್ಯಾಂತರ ರು.ಗಳ ಅಭಿವೃದ್ಧಿ ಕಾರ್ಯಗಳು ನಡೆದಿದ್ದು ಕಾಂಗ್ರೆಸ್‌ಗೆ ಹೆಚ್ಚಿನ ಬಹುಮತ ಲಭ್ಯವಾಗಲಿದೆ ಎಂದರು.
  ಚುನಾವಣಾ ವೀಕ್ಷಕ ಅಶ್ವಿನ್ ರೈ, ತಾಲೂಕು ಯುವ ಕಾಂಗ್ರೆಸ್ ಅಧ್ಯಕ್ಷ ಪುನಿತ್, ಪುರಸಭೆ ಸದಸ್ಯ ಅರುಣಣ್ಕುಮಾರ್, ಜುಬೇರ್, ಮುಖಂಡ ವೈ.ಎನ್. ಕೃಷ್ಣೇಗೌಡ, ಜಮಾಲುದ್ದೀನ್, ಪ್ರಸನ್ನ, ಡಿಶಾಂತ್ ಇತರರು ಇದ್ದರು.   
ಸಾವಿರಾರು ಕಾಂಗ್ರೆಸ್ ಕಾರ್ಯಕರ್ತರು ಬೈಕ್ ರ್ಯಾಲಿಯಲ್ಲಿ ಭಾಗವಹಿಸಿದ್ದು ವಿಶೇಷವಾಗಿದ್ದು ಮೆರವಣಿಗೆ ಸಂದರ್ಭ ಹೆದ್ದಾರಿ ರಸ್ತೆಯಲ್ಲಿ  2 ಕಿ.ಮೀವರೆಗೆ ಬೈಕ್ ನಿಂತಿದ್ದರಿಂದ    ಕೆಲಕಾಲ ವಾಹನ ದಟ್ಟಣೆ ಉಂಟಾಗಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement