ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ನವೋದಯ ಶಾಲಾ ಆವರಣದಲ್ಲಿ ಮತದಾನಕ್ಕೆ ಸಿದ್ಧತೆ

Srinivasa Murthy VN
Updated On : 17 Apr 2014, 12:58 pm

ಚನ್ನರಾಯಪಟ್ಟಣ: ಪಟ್ಟಣದ ನವೋದಯ ವಿದ್ಯಾಶಾಲಾ ಆವರಣದಲ್ಲಿ ಲೋಕಸಭಾ ಚುನಾವಣೆಗಾಗಿ ಮತಗಟ್ಟೆ ಅಧಿಕಾರಿಗಳ ನಿಯೋಜನೆ ಕಾರ್ಯಬುಧವಾರ ನಡೆಯಿತು.
ತಾಲೂಕಿನಿಂದ 18 ರಾಜ್ಯ ರಸ್ತೆ ಸಾರಿಗೆ ಬಸ್‌ಗಳನ್ನು ಹೊರ ತಾಲೂಕುಗಳಿಗೆ ನಿಯೋಜನೆ ಮಾಡಲಾದ ಬಗ್ಗೆ ತಹಸೀಲ್ದಾರ್ ಕೃಷ್ಣ ತಿಳಿಸಿದ್ದಾರೆ.
ಹೊರ ತಾಲೂಕುಗಳಿಂದ ನಿಯೋಜನೆಗೊಡ ಅಧಿಕಾರಿಗಳು, ಸಿಬ್ಬಂದಿ ಪಟ್ಟಣದ ನವೋದಯ ಶಾಲಾ ಆವರಣದಲ್ಲಿ ಮತಪೆಟ್ಟಿಗೆ, ಪರಿಕರಗಳನ್ನು ತಮ್ಮ ಸಿಬ್ಬಂದಿಗಳೊಂದಿಗೆ ಪಡೆದರು. ಖಾಸಗಿ ವಾಹನ, ಪೊಲೀಸ್ ನಿಯೋಜನೆ, ಸ್ಥಳದ ಮಾಹಿತಿಗಳನ್ನು ಧ್ವನಿವರ್ಧಕದ ಮೂಲಕ ಪ್ರಚಾರ ಮಾಡಲಾಯಿತು.
ಮತದಾನಕ್ಕೆ ಚುನಾವಣಾ ಆಯೋಗ ನೀಡಿರುವ ಗುರುತಿನ ಪತ್ರ, ಪಾಸ್ ಪೋರ್ಟ್, ಡಿಎಲ್, ಬ್ಯಾಂಕ್ ಪಾಸ್ ಬುಕ್, ಪಾನ್ ಕಾರ್ಡ್, ಆಧಾರ್ ಕಾರ್ಡ್ ಸೇರಿದಂತೆ 11 ದಾಖಲೆ ನೀಡಿ ಓಟ್ ಮಾಡಬಹುದು. ಗೂಗಲ್‌ನಲ್ಲಿ ಮತಗಟ್ಟೆ ಮಾಹಿತಿ ಪಡೆಯಬಹುದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement