ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

'ಬದುಕಿಗೆ ನಾಟಕ ಮಾರ್ಗದರ್ಶಿ ಆಗಲಿ'

Srinivasa Murthy VN
Updated On : 17 Apr 2014, 12:58 pm

ಚನ್ನರಾಯಪಟ್ಟಣ: ನಾಟಕಗಳು ಸಮಾಜಕ್ಕೆ ಸಂದೇಶ ಸಾರುವ ಜೊತೆಗೆ ಬದುಕಿಗೆ ಮಾರ್ಗದರ್ಶನ ನೀಡಬೇಕು. ಸಾಹಿತಿಗಳು,ಕೃತಿಕಾರರು, ಸಮಾಜದ ಮೇಲೆ ಆಗುವ ಪರಿಣಾಮ ಚಿಂತನೆಯ ಬಗ್ಗೆ ನಾಟಕ ರಚನೆ ಮಾಡಬೇಕಾದ ಅಗತ್ಯವಿದೆ ಎಂದು ಕಲಾವಿದ ಹಾಗೂ ನಾಟಕಕಾರ ನಂಜುಂಡಮೈಮ್ ಅಭಿಪ್ರಾಯಪಟ್ಟರು.ಅವರು ಪಟ್ಟಣದ ಸರ್ಕಾರಿ ಮಾಧ್ಯಮಿಕ ಶಾಲೆಯ ಆವರಣದಲ್ಲಿ ನಿರಂತರ ಕಲಾತಂಡ ಆಯೋಜಿಸಿದ ರಂಗಹಬ್ಬ ನಾಟಕೋತ್ಸವದ ಕಾರ್ಯಕ್ರಮದಲ್ಲಿ ಮಾತನಾಡಿ, ವ್ಯಕ್ತಿ ಸ್ವಾತಂತ್ರ್ಯದ ಸದ್ಬಳಕೆ ಮಾಡಿಕೊಳ್ಳಬೇಕೆಂದು ನಾಟಕ ರಚನಾಕಾರರಿಗೆ ನಿರ್ದೇಶಕರಿಗೆ ಸಲಹೆ ನೀಡಿದರು. ಕಾರ್ಯಕ್ರಮದಲ್ಲಿ ಉಪನ್ಯಾಸಕ ಶಿವರಾಂಬರಾಳು, ಸಾಹಿತಿ ಹೊನ್ನಶೆಟ್ಟಿಹಳ್ಳಿ ಗಿರಿರಾಜ್, ಎ.ಪಿ.ಎಸ್. ಆನಂದ್, ಕಲಾವಿದ ಉಮೇಶ್ ತೆಂಕನಹಳ್ಳಿ, ಧರ್ಮರಾಜ್ ಕಡಗ ಇತರರು ಇದ್ದರು.

ಮತದಾನದ ಹಕ್ಕಿದೆ: ಆದರೆ ಅವಕಾಶ ಇಲ್ಲ !
ಅರಕಲಗೂಡು: ಹೌದು, ಮತದಾನದ ಹಕ್ಕಿದೆ. ಆದರೆ ನಮಗೆ ಮತದಾನ ಮಾಡಲು ಅವಕಾಶವೇ ಇಲ್ಲ - ಈ ಕೊರಗು ಚುನಾವಣಾ ಕಾರ್ಯದಲ್ಲಿ ಪಾಲ್ಗೊಂಡಿರುವ ಕೆಲ ಸಿಬ್ಬಂದಿಗಳದ್ದು.
ಚುನಾವಣಾ ಪ್ರಕ್ರಿಯೆಗಾಗಿ ಖಾಸಗಿ ವಾಹನಗಳನ್ನು ನಿಯೋಜಿಸಿಕೊಳ್ಳಲಾಗಿದೆ. ಟೆಂಪೋ ಟ್ರಾಕ್ಸ್, ಇಂಡಿಕಾ ಕಾರುಗಳು ಮತ್ತು ಟೆಂಪೋಗಳನ್ನು ಚುನಾವಣಾ ಕರ್ತವ್ಯಕ್ಕೆಂದು ತೆಗೆದುಕೊಳ್ಳಲಾಗಿದ್ದು, ಇದರ ಸಂಖ್ಯೆ ಅರಕಲಗೂಡು ವಿಧಾನಸಭಾ ಕ್ಷೇತ್ರವೊಂದರಲ್ಲೇ 60ಕ್ಕೂ ಹೆಚ್ಚು. ಏತನ್ಮಧ್ಯೆ, ಕುಶಾಲನಗರ ಇನ್ನಿತರೆ ಕಡೆಗಳಿಂದಲೂ ಹೋಂ ಗಾರ್ಡ್‌ಗಳನ್ನು ನಿಯೋಜಿಸಿಕೊಳ್ಳಲಾಗಿದೆ. ಇವರಿಗೆ ಮತದಾನಕ್ಕೆ ಬೇಕಾದ ಯಾವ ಕ್ರಮವನ್ನೂ ಕೈಗೊಂಡಿಲ್ಲವಾದ್ದರಿಂದ ಮತದಾನ ಮಾಡಲು ಸಾಧ್ಯವಿಲ್ಲವಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement