ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

'ಕಲಿಕಾ ನ್ಯೂನತೆಗೆ ಸೂಕ್ತ ಪರಿಹಾರ ಅಗತ್ಯ'

Srinivasa Murthy VN
Updated On : 17 Apr 2014, 10:37 am

ಹಾಸನ: ನಗರದ ಉತ್ತರ ಬಡಾವಣೆಯ ಸ್ಕಾಲರ್ಸ್ ವರ್ಲ್ಡ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 2ನೇ ಘಟಿಕೋತ್ಸವ ಸಮಾರಂಭ ನಡೆಯಿತು.
ಹಾಸನ ವೈದ್ಯಕೀಯ ಮಹಾವಿದ್ಯಾಲಯದ ಮನೋಶಾಸ್ತ್ರಜ್ಞ ಡಾ. ಭಾರತಿ ಅವರು  ಮಕ್ಕಳಲ್ಲಿ ಕಂಡುಬರುವ ಕಲಿಕಾ ನ್ಯೂನತೆಗಳು ಮತ್ತು ಅದಕ್ಕೆ ಸೂಕ್ತ ಪರಿಹಾರೋಪಾಯಗಳನ್ನು ತಿಳಿಸಿದರು. ಸಂವರ್ಧನ ವ್ಯಕ್ತಿತ್ವ ವಿಕಸನ ಕೇಂದ್ರದ ನಿರ್ದೇಶಕ ಕೆ. ಮಂಜುನಾಥ್ ತಮ್ಮ ಮಕ್ಕಳಿಗೆ ಹೊರೆಯಾಗದಂತೆ ಮಕ್ಕಳ ಆಸಕ್ತಿ, ಅಭಿರುಚಿಯನ್ನು ಗಮನದಲ್ಲಿಟ್ಟುಕೊಂಡು ಮಾಂಟೆಸ್ಸರಿ ವಿಧಾನವನ್ನು ಅನುಸರಿಸಿ ಬೋಧನೆ ಮಾಡುತ್ತಿರುವ ಸ್ಕಾಲರ್ ಶಾಲೆಯ ಶಿಕ್ಷಣ ಪದ್ಧತಿಯನ್ನು ಶ್ಲಾಘಿಸಿದರು. ಯಶಸ್ವಿಯಾಗಿ ಮಾಂಟೆಸ್ಸರಿ ವಿಧಾನದಲ್ಲಿ ಅತ್ಯನ್ನತ ದರ್ಜೆಯಲ್ಲಿ ತೇರ್ಗಡೆಯಾದ ಮಕ್ಕಳನ್ನು ಮುಖ್ಯ ಅತಿಥಿಗಳು ಸನ್ಮಾನಿಸಿದರು. ಸಹ ಶಿಕ್ಷಕಿ ರುಕಿಯ ಸ್ವಾಗತಿಸಿದರು. ಪ್ರೊ. ಶಶಿಕಲಾ ರವಿಕುಮಾರ್ ನಿರೂಪಿಸಿದರು. ಸಹ ಶಿಕ್ಷಕರಾದ ದರ್ಶಿನಿ ಮತ್ತು ಶೋಭಾ ವಂದಿಸಿದರು. ಮಮತಾ ಚಂದ್ರಶೇಖರ್ ಇದ್ದರು.

ಈ ಗುಂಡಿಯಲ್ಲಿ ಅಡಗಿದೆ ಪ್ರಯಾಣಿಗರ ಭವಿಷ್ಯ!
ಸಕಲೇಶಪುರ: ಪಟ್ಟಣದ ಮಧ್ಯಭಾಗದಲ್ಲಿ ಹಾದುಹೋಗಿರುವ ರಾಷ್ಟ್ರೀಯ ಹೆದ್ದಾರಿ 48 ರಲ್ಲಿ ಕುಡಿಯುವ ನೀರಿನ ಪೈಪ್ ತುಂಡಾಗಿ ದೊಡ್ಡ ಗುಂಡಿ ಬಿದ್ದಿದ್ದರೂ, ಪುರಸಭೆ ಸಿಬ್ಬಂದಿ ಇತ್ತ ಗಮನಹರಿಸಿಲ್ಲ. ಇದರ ಪರಿಣಾಮ ವಾಹನ ಸವಾರರು ಅಪಾಯ ಎದುರಿಸುವಂತಾಗಿದೆ. ಕಳೆದ ಮೂರು ದಿನಗಳಿಂದ ಮೂವರು ಬೈಕ್ ಸವಾರರು ಗುಂಡಿಯಿಂದಾಗಿ ಬಿದ್ದು ಗಾಯಗೊಂಡಿದ್ದಾರೆ. ಇದರಿಂದಾಗಿ ಸಾರ್ವಜನಿಕರು ಗುಂಡಿಬಿದ್ದಿರುವೆಡೆ ರಸ್ತೆಗೆ ಕೆಂಪು ಬಾವುಟ ನೆಟ್ಟು ವಾರ ಕಳೆದಿದೆ. ಆದರೂ, ಪೈಪ್ ದುರಸ್ತಿ ಮಾಡಿ ಗುಂಡಿ ಮುಚ್ಚಿಸುವ ಕೆಲಸ ಆಗಿಲ್ಲ. ಯಾರಾದರೂ, ಬಿದ್ದು ಅಪಾಯವಾಗಲಿ, ಆಗ ನೋಡೋಣ ಎಂದು ಸಂಬಂಧಪಟ್ಟ ಅಧಿಕಾರಿಗಳು ಕಾದು ನೋಡುತ್ತಿದ್ದಾರೇನೋ ಗೊತ್ತಿಲ್ಲ.
 
ಎಸ್‌ಬಿಐ ಹುದ್ದೆಗಳಿಗೆ ಅರ್ಜಿ ಆಹ್ವಾನ
ಹಾಸನ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ 1837 ಪ್ರೊಬೆಷನರಿ ಆಫೀಸರ್‌ಗಳ  ನೇಮಕಾತಿಗಾಗಿ ಆನ್‌ಲೈನ್ ಮೂಲಕ ಅರ್ಜಿ ಕರೆದಿದ್ದು, ಅರ್ಜಿ ಸಲ್ಲಿಸಿಲು ಏ. 25 ಕೊನೆ ದಿನ. ಜಾಲತಾಣ www.sbi.co.in ಹಾಗೂ www.statebankofindia.comದ ಮುಖೇನ ಅರ್ಜಿ ಸಲ್ಲಿಸಬಹುದು.
ಪದವೀಧರರು ಅಥವಾ ಅಂತಿಮ ವರ್ಷದ ಪದವಿಯಲ್ಲಿ ಓದುತ್ತಿರುವವರು ಏ. 1ರಂತೆ ಕನಿಷ್ಠ 21ರಿಂದ 30 ವರ್ಷದೊಳಗಿರಬೇಕು. ನಿಯಮಾನುಸಾರ ವಯೋವುತಿಯಲ್ಲಿ ಸಡಿಲಿಕೆ ಇದೆ. ರು. 500 ಶುಲ್ಕ, ಪರಿಶಿಷ್ಟ ಜಾತಿ, ಪಂಗಡ, ವಿಕಲಚೇತನ ಅಭ್ಯರ್ಥಿಗಳು ರು. 100 ಶುಲ್ಕ ಪಾವತಿಸಬೇಕು.ಆಯ್ಕೆಯು 2 ಹಂತದ ಪರೀಕ್ಷೆಯ ಮೂಲಕ ನಡೆಯಲಿದೆ. ಒಂದನೇ ಹಂತದಲ್ಲಿ  ವಸ್ತುನಿಷ್ಠ ಮಾದರಿಯ ಒಂದು ಪತ್ರಿಕೆ, ಇದರಲ್ಲಿ - 1. ಇಂಗ್ಲಿಷ್ ಭಾಷೆ (ಗ್ರಾಮರ್, ವೆಕಾಬಲರಿ, ಕಾಂಪ್ರಹೆನ್ಷನ್ ಇತ್ಯಾದಿ) 2. ಸಾಮಾನ್ಯ  ಜ್ಞಾನ, ಮಾರ್ಕೆಂಟಿಂಗ್,  ಕಂಪ್ಯೂಟರ್, 3. ದತ್ತಾಂಶ ವಿಶ್ಲೇಷಣೆ ಹಾಗೂ ವ್ಯಾಖ್ಯಾನ, 4. ರೀಸೆನಿಂಗ್ ಲೆವೆಲ್ ವಿಭಾಗಕ್ಕೂ 50 ಅಂಕಗಳನ್ನು ನಿಗದಿ ಮಾಡಲಾಗಿದೆ. ಸಮಯ: ಎರಡು ಗಂಟೆಯ ಪರೀಕ್ಷೆ.ಒಟ್ಟು 2 ಗಂಟೆಯ ಪರೀಕ್ಷೆಯಾಗಿದ್ದು, 2ನೇ ಪತ್ರಿಕೆ ವಿವರಣಾತ್ಮಕ ಪರೀಕ್ಷೆಗೆ 50 ಅಂಕ ನಿಗದಿ ಮಾಡಲಾಗಿದೆ. 1 ಗಂಟೆ ಅವಧಿಯಾಗಿದ್ದು, ಆಂಗ್ಲಭಾಷೆಯಲ್ಲಿ ಲೆಟರ್ ್ರೈಟಿಂಗ್, ಪ್ರಬಂಧ, ಶಾರ್ಟ್ ಪ್ರೈಸೈಸ್ ಇರಲಿದೆ.2ನೇ ಹಂತದಲ್ಲಿ ಲಿಖಿತ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಸಂದರ್ಶನ ನಡೆಯಲಿದೆ. ಇದರಲ್ಲಿ ಗುಂಪು ಚರ್ಚೆಗೆ 20 ಅಂಕಗಳು, ಸಂದರ್ಶನಕ್ಕೆ 30 ಅಂಕಗಳು ಇವೆ.  ಎಲ್ಲಾ ಪರೀಕ್ಷೆಗಳಲ್ಲೂ ಬ್ಯಾಂಕ್ ನಿಗದಿಪಡಿಸಿದಷ್ಟು ಅಂಕಗಳನ್ನು ಪಡೆಯಲೇಬೇಕು.  ಅಂತಿಮವಾಗಿ ಮೆರಿಟ್ ಪ್ರಕಾರ ಆಯ್ಕೆ ಮಾಡಲಾಗುವುದು. ಕರ್ನಾಟಕದಲ್ಲಿ ಬೆಂಗಳೂರು, ಮೈಸೂರು, ಶಿವಮೊಗ್ಗ, ಮಂಗಳೂರು, ಉಡುಪಿ, ಹುಬ್ಬಳ್ಳಿ, ಬೆಳಗಾವಿ, ಬೀದರ್ ಮತ್ತು ಗುಲ್ಬರ್ಗಾ ಪರೀಕ್ಷಾ ಕೇಂದ್ರಗಳು. ಲಿಖಿತ ಪರೀಕ್ಷೆಯು ಜೂನ್‌ನಲ್ಲಿ ನಡೆಯಲಿದೆ.ಹೆಚ್ಚಿನ ಮಾಹಿತಿಗೆ, 9845493336 ಸಂಖ್ಯೆಗೆ ಸಂಪರ್ಕಿಸಬಹುದು.

ಉಚಿತ ಬ್ಯೂಟಿಷಿಯನ್ ತರಬೇತಿ
ಹಾಸನ: ನಗರದ ಕುವೆಂಪು ನಗರದಲ್ಲಿರುವ ಜೀವನ ಕೌಶಲ ತರಬೇತಿ ಕೇಂದ್ರದಲ್ಲಿ ಮಹಿಳೆಯರಿಗೆ ಉಚಿತ ಬೇಸಿಗೆ ಅಲ್ಪಾವಧಿ ಬ್ಯೂಟಿಷಿಯನ್ ತರಬೇತಿಯನ್ನು ಏ. 21 ರಿಂದ ಪ್ರಾರಂಭಿಸಲಾಗುತ್ತಿದೆ. ಏ. 16ರಿಂದ ಹೆಸರು ನೊಂದಾಯಿಸಲಾಗುವುದು. ಆಸಕ್ತ ಮಹಿಳೆಯರು 4 ಭಾವಚಿತ್ರ, ಪಡಿತರ ಚೀಟಿ ಅಥವಾ ಮತದಾರರ ಗುರುತಿನ ಚೀಟಿಯ ಜೆರಾಕ್ಸ್ ಮತ್ತು ಎಸ್‌ಎಸ್‌ಎಲ್‌ಸಿ ಅಂಕಪಟ್ಟಿ ಅಥವಾ ಟಿಸಿ ಜೆರಾಕ್ಸ್ ಪ್ರತಿಯೊಂದಿಗೆ ಹಾಜರಾಗಿ ಅರ್ಜಿಯನ್ನು ಪಡೆದು ಏ. 19ರೊಳಗೆ ಸಲ್ಲಿಸುವಂತೆ ಕೋರಲಾಗಿದೆ. ಹೆಚ್ಚಿನ ಮಾಹಿತಿಗೆ ಮೊ.9449428824 ಸಂಪರ್ಕಿಸಬಹುದು.

ಬೇಸಿಗೆ ಕ್ರೀಡಾ ತರಬೇತಿ ಶಿಬಿರ
ಹಾಸನ: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ನಾನಾ ಕ್ರೀಡೆಗಳಲ್ಲಿ ನುರಿತ ತರಬೇತುದಾರರಿಂದ ಬೇಸಿಗೆ ಕ್ರೀಡಾ ತರಬೇತಿ ಶಿಬಿರವು ಈಗಾಗಲೇ ಜಿಲ್ಲಾ ಕ್ರೀಡಾಂಗಣದಲ್ಲಿ ಪ್ರಾರಂಭವಾಗಿದ್ದು, ಮೇ 30ರವರೆಗೆ ನಡೆಯಲಿದೆ.  ಶಿಬಿರದಲ್ಲಿ ಶಾಲಾ ಕಾಲೇಜು ವಿದ್ಯಾರ್ಥಿಗಳು ಪಾಲ್ಗೊಂಡಿದ್ದಾರೆ. ಶಿಬಿರದಲ್ಲಿ ವಾಲಿಬಾಲ್, ಬ್ಯಾಸ್ಕೆಟ್ ಬಾಲ್, ಜಿಮ್ನಾಸ್ಟಿಕ್, ಹಾಕಿ, ನೆಟ್ ಬಾಲ್, ಹ್ಯಾಂಡ್ ಬಾಲ್,  ಅಥ್ಲೆಟಿಕ್ಸ್, ಫುಟ್‌ಬಾಲ್, ಸ್ಕೇಟಿಂಗ್, ಷಟ್ಲ್ ಬ್ಯಾಡ್ಮಿಂಟನ್, ಈಜು ಕ್ರೀಡೆಗಳಿಗೆ ತರಬೇತಿ ನೀಡಲಾಗುತ್ತಿದೆ. ಶಿಬಿರ ಬೆಳಗ್ಗೆ  6.30 ರಿಂದ 9, ಸಂಜೆ 4.30ರಿಂದ  7 ರವರೆಗೆ  ನಡೆಯುತ್ತಿದೆ. ಹೆಚ್ಚಿನ ಮಾಹಿತಿಗಾಗಿ ಮೊ. 9591350187ಗೆ ಸಂಪರ್ಕಿಸಬಹುದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement