ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಚನ್ನರಾಯಪಟ್ಟಣದಲ್ಲಿ ಶಾಂತಿಯುತ ಮತಹಕ್ಕು

Srinivasa Murthy VN
Updated On : 17 Apr 2014, 10:34 am

ಚನ್ನರಾಯಪಟ್ಟಣ: ತಾಲೂಕಿನಲ್ಲಿ ಗುರುವಾರ ನಡೆದ ಲೋಕಸಭಾ ಚುನಾವಣೆಯ ಸಂಧರ್ಭದಲ್ಲಿ ಎರಡು ಮತಕೇಂದ್ರಗಳಲ್ಲಿ ಪ್ರಾರಂಭದಲ್ಲಿ ಮತಯಂತ್ರಗಳು ಕೈ ಕೊಟ್ಟ ಘಟನೆ ನಡೆದಿದೆ. ಉಳಿದಂತೆ ಶಾಂತಿಯುತ ಮತದಾನ ನಡೆದಿದೆ.
ಪಟ್ಟಣದ ನವೋದಯ ವಿದ್ಯಾ ಸಂಸ್ಥೆಯಲ್ಲಿನ ಮತಯಂತ್ರ ಬೆಳಗ್ಗೆ ಹೊತ್ತಿನಲ್ಲಿ ಕೈ ಕೊಟ್ಟಿತು. ಈ ಹಿನ್ನಲೆಯಲ್ಲಿ 7 ಗಂಟೆ ಸಮಯದಲ್ಲಿ 20ನಿಮಿಷ ತಡವಾಗಿ ಮತದಾನ ಪ್ರಾರಂಭವಾದರೆ, ತಾಲೂಕಿನ ಗುಲಸಿಂದ ಮತಕೇಂದ್ರದಲ್ಲಿ ಮತಯಂತ್ರ ಕೈ ಕೊಟ್ಟ ಹಿನ್ನಲೆಯಲ್ಲಿ 15 ನಿಮಿಷ ತಡವಾಗಿ ಪ್ರಾರಂಭವಾಯಿತು.  ಮುಂಜಾನೆ ಮಂದಗತಿಯಲ್ಲಿ ಮತದಾನ ಪ್ರಾರಂಭವಾಯಿತಾದರೂ 11ರ ನಂತರ ಮತದಾನ ಚುರುಕುಗೊಂಡು, ಬಾಗೂರು ಹೋಬಳಿ ಕಾಳಮಾರನಹಳ್ಳಿ ಮತಕೇಂದ್ರದಲ್ಲಿ ಮದ್ಯಾಹ್ನ 3ರ ಸಮಯಕ್ಕೆ ಶೇ. 92ರಷ್ಟು ಮತದಾನವಾಗಿದ್ದರೆ, ಶ್ರವಣೇರಿ ಶೇ.82, ಯಾಚೇನಹಳ್ಳಿಯಲ್ಲಿ ಶೇ. 77ರಷ್ಟು ಮತದಾನವಾದರೆ, ಹಿರೀಸಾವೆ ಹೋಬಳಿ ಡಿ.ತುಮಕೂರು ಮತ ಕೇಂದ್ರದಲ್ಲಿ ಮದ್ಯಾಹ್ನ 3ಕ್ಕೆ ಶೇ. 28ರಷ್ಟು ಕಡಿಮೆ ಮತದಾನವಾಗಿರುವ ವರದಿಯಾಗಿದೆ.  ಶಾಸಕ ಸಿ.ಎನ್. ಬಾಲಕೃಷ್ಣ ಅವರು ಕಸಬಾ ಹೋಬಳಿ ಚೋಳೇನಹಳ್ಳಿಯಲ್ಲಿ ಮತದಾನ ಮಾಡಿದರೆ, ಮಾಜಿ ಶಾಸಕ ಸಿ.ಎಸ್. ಪುಟ್ಟೇಗೌಡ ಚಾಮಡಿಹಳ್ಳಿಯಲ್ಲಿ ಮತದಾನ ಮಾಡಿದರು.  ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ಎ. ಮಂಜು ತಾಲೂಕಿನ ವಿವಿಧ ಮತಗಟ್ಟೆಗಳಿಗೆ ಭೇಟಿ ನೀಡಿದರು.

'ಸಮಸ್ಯೆ ಬಗೆಹರಿಸಲು ಶಿಕ್ಷಣವೇ ರಾಮಬಾಣ'
ಚನ್ನರಾಯಪಟ್ಟಣ: ಮನುಷ್ಯನಿಗೆ ಕಲಿಕೆ ನಿರಂತರವಾಗಿರಬೇಕು ಈ ಸಮಾಜದ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಲು ಶಿಕ್ಷಣವೇ ರಾಮಬಾಣ ಎಂದು ಗಾಂಧಿ ಸ್ಮಾರಕ ಭವನದ ಪ್ರಾಧ್ಯಾಪಕ ಶಿವರಾಜ್ ಮಾತನಾಡಿದರು.
ಅವರು ಪಟ್ಟಣದ ಆದಿಚುಂಚನಗಿರಿ ಕಾಲೇಜಿನಲ್ಲಿ ಸೋಮವಾರ ನಡೆದ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ಘಟಕದ ವತಿಯಿಂದ ಆಯೋಜಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮಾತನಾಡಿ, ಶಿಕ್ಷಣವನ್ನು ಹೊಟ್ಟೆಪಾಡಿಗಾಗಿ ಕಲಿಯಬಾರದು. ಮೌಲ್ಯವಂತನಾಗಲು ಶಿಕ್ಷಣ ಕಾರಣವಾಗಬೇಕು. ಜೀವನ ಪರಿವರ್ತನೆಯಾಗುವ ಶಿಕ್ಷಣ ಕಲಿಯಬೇಕು. ಆಗ ಮನುಷ್ಯನ ಜೀವನ ಸಾರ್ಥಕವಾಗುತ್ತದೆ. ಸರಿಯಾಗಿ ನಡೆದುಕೊಳ್ಳುವುದೇ ಶಿಕ್ಷಣ. ದೇಶದ ಪ್ರಗತಿ ಚಿನ್ನದಿಂದ ಅಲ್ಲ ಚಿನ್ನದಂತ ವ್ಯಕ್ತಿಗಳಿಂದ ಮಾತ್ರ ಸಾಧ್ಯ ಎಂದರು.
ಕಾರ್ಯಕ್ರಮದಲ್ಲಿ ನಿವೃತ್ತ ಪ್ರಾಂಶುಪಾಲ ಸೋಮಸುಂದರ್, ಮೇಲಗಿರಿಗೌಡ, ಕುಮಾರಸ್ವಾಮಿ, ಪಾಪೇಗೌಡ, ಪುಟ್ಟರಾಜು, ಶಿವಪ್ಪ, ಮಂಜೇಗೌಡ, ಸಂಜಯ್, ಪದ್ಮರಾಜ್ ಇನ್ನು ಮುಂತಾದವರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement