ರಿಲ್ಯಾಕ್ಸ್ ಮೂಡ್‌ನಲ್ಲಿ ಅಭ್ಯರ್ಥಿಗಳು
-ಪಿ. ರವಿಕುಮಾರ್
ಹಾಸನ: ಲೋಕಸಭಾ ಚುನಾವಣೆಗೆ ಕೊನೆಗೂ ತೆರೆಬಿದ್ದಿದ್ದು, ಕಣದಲ್ಲಿ ಇದ್ದ ಜಿಲ್ಲೆಯ ನಾನಾ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ರಿಲ್ಯಾಕ್ಸ್ ಮೂಡ್‌ಗೆ ಹೋಗಿದ್ದಾರೆ.
ಕಡೂರು ಸೇರಿದಂತೆ 8 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ಜಿಲ್ಲೆಯಲ್ಲಿ 14 ಅಭ್ಯರ್ಥಿಗಳು ಅಂತಿಮವಾಗಿ ಚುನಾವಣಾ ಕಣದಲ್ಲಿದ್ದರು. ಏ. 17ರಂದು ಮತದಾನವಾಗಿದ್ದು, ಅಭ್ಯರ್ಥಿಗಳು ಕೊಂಚ ನಿಟ್ಟುಸಿರುಬಿಟ್ಟಿದ್ದು, ಎಲ್ಲಾ ಅಭ್ಯರ್ಥಿಗಳ ಭವಿಷ್ಯ ಮತಪೆಟ್ಟಿಗೆಯಲ್ಲಿ ಅಡಕವಾಗಿದೆ.
ಕಳೆದ 40 ದಿನಗಳ ಕಾಲ ಚುನಾವಣಾ ಅಖಾಡದಲ್ಲಿ ಗೆಲುವಿಗಾಗಿ ನಾನಾ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ಹಾಗೂ ಪಕ್ಷೇತರು ನಿದ್ದೆಗೆಟ್ಟು ಬಿರುಸಿನ ಪ್ರಚಾರ ಹಾಗೂ ಪ್ರಯತ್ನವನ್ನು ನಡೆಸಿದ್ದರು. ಹಾಸನ ಲೋಕಸಭಾ ಕ್ಷೇತ್ರದ ಅಭ್ಯರ್ಥಿಗಳು ಅಗಲು ರಾತ್ರಿ ಎನ್ನದೇ ಕಡೂರು ಸೇರಿದಂತೆ ಎಲ್ಲಾ 8 ವಿಧಾನಸಭಾ ಕ್ಷೇತ್ರಗಳಲ್ಲಿ ತಮ್ಮ ಪಕ್ಷ ರಾಜ್ಯ ನಾಯಕರನ್ನು ಕರೆಸಿ ಚುನಾವಣಾ ಪ್ರಚಾರ ನಡೆಸಿ ಮತಯಾಚಿಸಿದ್ದರು. ಈಗ ದೆ.
ನಾಟ್ ರೀಚಬಲ್: ಜಿಲ್ಲೆಯಲ್ಲಿ ಗುರುವಾರ ಶೇ. 72ರಷ್ಟು ಮತದಾನವಾಗಿದ್ದು, ಇನ್ನೂ ಪಲಿತಾಂಶ ಹೊರಬೀಳಲು ಎರಡು ದಿನಗಳು ಬಾಕಿ ಉಳಿದೆ. ಇದರಿಂದ ಅಭ್ಯರ್ಥಿಗಳು ಸ್ವಲ್ಪ ನಿರಾಳರಾಗಿದ್ದು, ಕೆಲವು ಅಭ್ಯರ್ಥಿಗಳು ಬೆಂಗಳೂರಿನಲ್ಲಿ ಬೀಡು ಬಿಟ್ಟಿದ್ದರೆ, ಮತ್ತೆ ಕೆಲವರು ಕುಟುಂಬದ ಸದಸ್ಯರೊಂದಿಗೆ ನವೋಲ್ಲಾಸದಲ್ಲಿ ತೊಡಗಿದ್ದಾರೆ. ಇನ್ನೂ ಕೆಲವು
ಅಭ್ಯರ್ಥಿಗಳು ತಮ್ಮ ಮೊಬೈಲ್‌ಗಳನ್ನು 'ನಾಟ್ ರೀಚಬಲ್' ಮಾಡಿಕೊಂಡು ಆರಾಮಾಗಿದ್ದಾರೆ. ಮತ್ತೆ ಕೆಲವರು ಗೆಲುವಿನ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ.
ಬೆಟ್ಟಿಂಗ್ ಶುರು: ಅಷ್ಟೇ ಅಲ್ಲದೆ, ಕೆಲವರು ದೇವಾಲಯಗಳಿಗೆ ತೆರಳಿ ದರ್ಶನ ಪಡೆದು ವಿಜಯದ ಮಾಲೆ ತಮ್ಮ ಕೊರಳಿಗೆ ಬೀಳಲಿ ಎಂದು ಜಪಿಸುತ್ತಿರುವುದು ಅಭ್ಯರ್ಥಿಗಳದಾಗಿದ್ದರೆ, ನಾನಾ ರಾಜಕೀಯ ಪಕ್ಷಗಳ ಕಾರ್ಯಕರ್ತರು ತಮ್ಮ ಅಭ್ಯರ್ಥಿಗಳು ಅತ್ಯಂತ ಹೆಚ್ಚಿನ ಮತಗಳಲ್ಲಿ ಜಯಗಳಿಸುತ್ತಾರೆ ಎಂದು ಬೆಟ್ಟಿಂಗ್‌ನಲ್ಲಿ ತೊಡಗಿದ್ದಾರೆ.
ನಾನಾ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ಜಿಲ್ಲೆಯಲ್ಲ ಎಲ್ಲಾ ಕ್ಷೇತ್ರಗಳಲ್ಲಿ ಎಷ್ಟು ಸಾಧ್ಯವೋ ಅಷ್ಟು ಬಾರಿ ಚುನಾವಣಾ ಪ್ರಚಾರವನ್ನು ನಡೆಸಿದ್ದರು. ಆದರೆ, ಫಲಿತಾಂಶಕ್ಕೆ ಇನ್ನೂ 1 ತಿಂಗಳು ಕಾಯಬೇಕಾಗಿರುವುದರಿಂದ ಅಭ್ಯರ್ಥಿಗಳು ಸದ್ಯಕ್ಕೆ ಆ ಚಿಂತೆ ಬಿಟ್ಟು ಕೊಂಚ ನೆಮ್ಮದಿಯಿಂದಿದ್ದಾರೆ.
ಗೌಡರಿಗೊಂದು ಸ್ಮಲ್ ಬ್ರೇಕ್: ಮಾಜಿ ಪ್ರಧಾನಿ ಹಾಗೂ ಹಾಸನ ಲೋಕಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಎಚ್.ಡಿ. ದೇವೇಗೌಡರು ಚುನಾವಣ ಮುಗಿದ ನಂತರ, ತಮ್ಮ ರಾಜಕೀಯ ಚಟುವಟಿಕೆಗಳಿಗೆ ಕೆಲ ದಿನಗಳ ಮಟ್ಟಿಗೆ ಬ್ರೇಕ್ ಹಾಕಿದ್ದಾರೆ. ಗುರುವಾರ ಮತದಾನ ಮುಗಿದ ನಂತರ ಬೆಂಗಳೂರಿಗೆ ತೆರಳಿ ವಿಶ್ರಾಂತಿ ಪಡೆಯುವ ಮೂಲಕ ಇತರೆ ಕೆಲಸ ಕಾರ್ಯಗಳಲ್ಲಿ ತೊಡಗಿಕೊಂಡಿದ್ದಾರೆ.
ಶನಿವಾರದ ನಂತರ ದೇವೇಗೌಡರು ದಕ್ಷಿಣ ಕನ್ನಡ ಜಿಲ್ಲೆಯ ಉಜಿರೆಯ
ಶ್ರೀಧರ್ಮಸ್ಥಳ ಆಯುರ್ವೇದ ಕಾಲೇಜಿನಲ್ಲಿ ಬಾಡಿ ಮಸಾಜ್ ಮಾಡಿಸಿಕೊಳ್ಳಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಒಟ್ಟಾರೆಯಾಗಿ ಗೌಡರುಇಷ್ಟು ದಿನಗಳ ಕಾಲ ರಾಜ್ಯಾದ್ಯಂತ ಚುನಾವಣೆಯ ಪ್ರಚಾರದ ಭರಾಟೆಯಲ್ಲಿ ತೊಡಗಿಕೊಂಡಿದ್ದರು. ಈಗ ಚುನಾವಣೆ ಮುಗಿದಿರುವುದರಿಂದ ಸ್ವಲ್ಪ ವಿಶ್ರಾಂತಿ ಮಾಡುತ್ತಿದ್ದಾರೆ.
ಮಂಜುಗೂ ಕೊಂಚ ರಿಲ್ಯಾಕ್ಸ್: ಹಾಸನ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎ. ಮಂಜು ಇಷ್ಟು ದಿನ ಚುನಾವಣಾ ಪ್ರಚಾರ ಕೈಗೊಂಡದ್ದರು. ಚುನಾವಣೆ ಮುಗಿದಿರುವುದರಿಂದ ಮಂಜು ವಿಶ್ರಾಂತಿಗಾಗಿ ಬೆಂಗಳೂರಿನಲ್ಲಿ ತಮ್ಮ ನಿವಾಸಕ್ಕೆ ಕುಟುಂಬ ಸಮೇತ ತೆರಳಿದ್ದಾರೆ. ಒಟ್ಟಿನಲ್ಲಿ ಮಂಜು ಅವರು, ಹಾಸನದಿಂದ ತೆರಳಿ ವಿಶ್ರಾಂತಿಯ ಮೊರೆ ಹೋಗಿದ್ದಾರೆ.
ಮೈಸೂರಿನಲ್ಲಿ ವಿಜಯ ಶಂಕರ್: ಹಾಸನ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮೈಸೂರಿಗ ಸಿ.ಎಚ್. ವಿಜಯ ಶಂಕರ್ ಅವರು ಚುನಾವಣೆ ಮುಗಿದ ನಂತರ ಮೈಸೂರಿಗೆ ತೆರಳಿದ್ದಾರೆ.
ನಂತರ ಅವರು ಮಡಿಕೇರಿಗೆ ತೆರಳಿ ಅಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಇಷ್ಟು ದಿನ ಚುನಾವಣೆ ಪ್ರಚಾರದಲ್ಲಿ ನಿರತರಾಗಿದ್ದ ಇವರು ಆರಾಮವಾಗಿ ಕಾಲ ಕಳೆಯುತ್ತಿದ್ದಾರೆ.
ಒಟ್ಟಾರೆಯಾಗಿ ಕಡೂರು ಸೇರಿದಂತೆ ಜಿಲ್ಲೆಯ 8 ವಿಧಾನಸಭಾ ಕ್ಷೇತ್ರಗಳಿಂದ 14 ಅಭ್ಯರ್ಥಿಗಳು ಕಣದಲ್ಲಿದ್ದು, ಜಿಲ್ಲಾದ್ಯಂತ ಗುರುವಾರ ಶಾಂತಿಯುತವಾಗಿ ಮತದಾನವಾಗಿದೆ. ಯಾವ ಅಭ್ಯರ್ಥಿಗಳ ಭವಿಷ್ಯ ಉಜ್ವಲವಾಗುತ್ತದೆ ಎಂಬ ವಿಚಾರ ಮೇ. 16ರಂದು ಹೊರಬೀಳಲಿದೆ.