ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಲಕ್ಷ್ಮೀ ಜನಾರ್ದನಸ್ವಾಮಿ ರಥೋತ್ಸವ

Srinivasa Murthy VN
Updated On : 17 Apr 2014, 10:35 am

ಆಲೂರು: ಇತಿಹಾಸ ಪುರಾಣ ಪ್ರಸಿದ್ಧ ತಾಲೂಕಿನ ಪಾಳ್ಯ ಗ್ರಾಮದ ಶ್ರೀ ಲಕ್ಷ್ಮೀಜನಾರ್ಧನಸ್ವಾಮಿ ದಿವ್ಯ ಬಹ್ಮ ಮಹಾರಥೋತ್ಸವ ಮಂಗಳವಾರ ವಿಜೃಂಭಣೆಯಿಂದ ನೆರವೇರಿತು. ರಥೋತ್ಸವದ ಪ್ರಯುಕ್ತ ದೇವಾಲಯದಲ್ಲಿ ಶ್ರೀಸ್ವಾಮಿಗೆ ವಿಶೇಷ ಪೂಜೆ ಅಲಂಕಾರಗಳನ್ನು ಮಾಡಲಗಿತ್ತು. ದೇವಸ್ಥಾನದ ಸುತ್ತ ಮೂರುಬಾರಿ ಪ್ರದಕ್ಷಿಣೆ ಆದ ನಂತರ ಗ್ರಾಮದ ಬೀದಿಗಳಲ್ಲಿ ರಥೋತ್ಸವ ನಡೆಸಲಾಯಿತು. ನೂರಾರು ಭಕ್ತರು ರಥೋತ್ಸವದಲ್ಲಿ ಭಾಗವಹಿಸಿ, ತಮ್ಮ ಭಕ್ತಿ ನಮನ ಸಮರ್ಪಿಸಿದರು. ಇದಕ್ಕೂ ಮುನ್ನ ತಹಸೀಲ್ದಾರ್ ಮಹದೇವಯ್ಯ ವಿಶೇಷ ಪೂಜೆ ಸಲ್ಲಿಸಿ ರಥೋತ್ಸವಕ್ಕೆ ಚಾಲನೆ ನೀಡಿದರು.ಈ ಸಂದರ್ಭದಲ್ಲಿ ಗ್ರೇಡ್ 2 ತಹಸೀಲ್ದಾರ್ ಕೆ. ಹೊಂಬೇಗೌಡ, ಉಪತಹಸೀಲ್ದಾರ್ ಸುಬ್ಬಶೆಟ್ಟಿ, ರಾಜಸ್ವ ನಿರೀಕ್ಷಕ ಕೋಮಾರೆಗೌಡ, ಗ್ರಾಮಲೆಕ್ಕಿಗ ಮಂಜೇಗೌಡ ಮತ್ತು ಮುಜರಾಯಿ ಇಲಾಖೆಯ ಇತರ ಅಧಿಕಾರಿಗಳು ಇದ್ದರು. ವಿವಿಧ ಸೇವಾ ಕೈಂಕರ್ಯ: ಇದಕ್ಕೂ ಮುನ್ನ ದೇವಾಲಯದಲ್ಲಿ ಸುಪ್ರಭಾತ್ ಸೇವೆ ಸಲ್ಲಿಸಿದರು. ನಂತರ, ದಿವ್ಯಪ್ರಬಂಧ ಸೇವೆ, ವೇದಘೋಷ, ನಾದಸ್ವರಗಳ ನಡುವೆ ಹೂವಿನಲಂಕಾರ, ಸೂರ್ಯಮಂಡಲೋತ್ಸವ, ಕೃಷ್ಣಗಂಧೋತ್ಸವ, ನವಗ್ರಹ ಪೂಜೆ ನೇರವೆರಿಸಲಾಯಿತು. ಗ್ರಾಮದ ಬೀದಿಗಳಲ್ಲಿ ರಥೋತ್ಸವ ನಡೆಯಿತು. ದಾರಿಯುದ್ದಕ್ಕೂ ಭಜನೆ ವೇದ ಘೋಷಣೆಗಳೊಂದಿಗೆ ಶ್ರೀಸ್ವಾಮಿಯವರ ಉತ್ಸವ ಸಾಗಿದ್ದು ಗಮನ ಸೆಳೆಯಿತು. ಎಚ್.ಎಸ್. ವಿಕಸನಾಚಾರ್ಯ, ಅರ್ಚಕ ಎಚ್.ಎ. ಹರ್ಷ ಪೂಜಾ ವಿಧಿ-ವಿಧಾನಗಳನ್ನು ನಡೆಸಿಕೊಟ್ಟರು.

ಉಡಿಗನಾಳು ಕರಿಯಮ್ಮ ದೇವಿ ಜಾತ್ರೆ
ಅರಸೀಕೆರೆ:  ತಾಲೂಕಿನ ಜಾವಗಲಲ್ಹೋಬಳಿ ಉಂಡಿಗನಾಳು ಗ್ರಾಮದ ಗ್ರಾಮದೇವತೆ ಕರಿಯಮ್ಮ ದೇವಿಯವರ ದಿವ್ಯ ಮಹಾರಥೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ಸಡಗರ ಸಂಭ್ರಮ ನಡುವೆ ವಿಜೃಂಭಣೆಯಿಂದ ನಡೆಯಿತು. ರಥೋತ್ಸವದ ಅಂಗವಾಗಿ ಗ್ರಾಮದ ಸುತ್ತಮುತ್ತಲ ಆಗಮಿಸಿದ್ದ ಭಕ್ತಾಧಿಗಳು ದೇವಿಗೆ ಧಾರ್ಮಿಕ ವಿಶೇಷ ಪೂಜಾ ಕಾರ್ಯಗಳನ್ನು ನೆರವೇರಿಸಿದರು. ದೇವಾಲಯದಲ್ಲಿ ಬೆಳಗ್ಗೆ ದೇವಿಗೆ ವಿಶೇಷ ಪೂಜಾ ಕೈಂಕರ್ಯ ನೆರವೇರಿಸಿದ ನಂತರ ರಥಕ್ಕೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಿದವು. ನೆರೆದಿದ್ದ ಅಪಾರ ಭಕ್ತರು ರಥಕ್ಕೆ ಬಾಳೇಹಣ್ಣು, ದವನ ಎಸೆದು ಭಕ್ತರು ಭಕ್ತಿ ಸಮರ್ಪಿಸಿದರು. ಕರಗುಂದ, ಹೊಸಹಳ್ಳಿ, ದೇಶಾಣಿ, ಬಂದೂರು, ಹೊಸೂರು ಸೇರಿದಂತೆ ಹತ್ತಾರು ಹಳ್ಳಿಯ ಭಕ್ತರು ರಥೋತ್ಸವದ ವೇಳೆ ಪಾಲ್ಗೊಂಡಿದ್ದರು. ನೆರೆದಿದ್ದ ಭಕ್ತರಿಗೆ ಪ್ರಸಾದ ವಿನಿಯೋಗ ಮಾಡಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement