ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಸಕಲೇಶಪುರದಲ್ಲಿ ಶೇ. 71 ಹಕ್ಕು ಚಲಾವಣೆ

Srinivasa Murthy VN
Updated On : 17 Apr 2014, 10:34 am

ಸಕಲೇಶಪುರ: ತಾಲೂಕಿನಲ್ಲಿ ಲೋಕಸಭಾ ಚುನಾವಣೆಯ ಮತದಾನ ಬಹುತೇಕ ಶಾಂತಿಯುತವಾಗಿ ಮುಕ್ತಾಯಗೊಂಡಿದ್ದು, ನಿರಾಸವಾಗಿ ಆರಂಭವಾದ ಮತದಾನ ಸೂರ್ಯ ನತ್ತಿಗೆರುವ ವೇಳೆಗೆ ಬಿರುಸು ಪಡೆದುಕೊಂಡಿದ್ದು, ಶೇ.71ರಷ್ಟು ಮತದಾನವಾಗಿದೆ.  
ತಾಲೂಕಿನ ಕಾಡುಮನೆ ಟೀ. ಎಸ್ಟೇಟ್ ಮತಗಟ್ಟೆಯ 106 ರಲ್ಲಿ ಹೇಮಂತ ಎಂಬ ಅನಾರೋಗ್ಯ ಪೀಡಿತ ವ್ಯಕ್ತಿಯೊಬ್ಬರು ಮತಯಂತ್ರದ ಮೇಲೆ ವಾಂತಿ ಮಾಡಿದ್ದರಿಂದ ಸುಮಾರು ಒಂದು ಗಂಟೆಗಳ ಕಾಲ ಮತದಾನ ಸ್ಥಗಿತವಾಗಿತ್ತು.ನಂತರ ಸ್ಥಳಕ್ಕಾಮಿಸಿದ ಚುನಾವಣಾಧಿಕಾರಿಗಳು ಬದಲಿ ಮತಯಂತ್ರವನ್ನು ಜೋಡಿಸುವ ಮೂಲಕ ಮತಚಲಾವಣೆಯನ್ನು ಮರುಆರಂಭಿಸಲಾಯಿತು. ಮತದಾನಕ್ಕೂ  ಮುನ್ನ ಮತಯಂತ್ರದಲ್ಲಿ ದೊಷಕಂಡು ಬಂದ ಹಿನ್ನೆಲೆಯಲ್ಲಿ ಮತಗಟ್ಟೆ ಸಂಖ್ಯೆ 127 ಬಾಳ್ಳುಪೇಟೆ, ಮತಗಟ್ಟೆ ಸಂಖ್ಯೆ 217 ರ ಕರಡಿಗಾಲ ಮತಕೇಂದ್ರದಲ್ಲಿ ಬದಲಿ ಮತಯಂತ್ರಗಳನ್ನು ಬಳಸಲಾಯಿತು. ಗಣೇಶ್ ನಗರ ನಿವಾಸಿಗಳು ಕುಡಿಯುವ ನೀರು ಕಲ್ಪಿಸಲಾಗಿಲ್ಲ ಎಂದು ಮತದಾನ ಬಹಿಷ್ಕಾರಕ್ಕೆ ಮುಂದಾಗಿದ್ದರು. ಈ ವೇಳೆ ಸ್ಥಳಕ್ಕಾಗಮಿಸಿದ ಅಧಿಕಾರಿಗಳು ಮತದಾನ ಮಾಡುವಂತೆ ಗ್ರಾಮಸ್ಥರ ಮನ ಒಲಿಸಲು ಯಶಸ್ವಿಯಾದರು. ಮಧ್ಯಾಹ್ನ ಮೂರರ ವೇಳೆಗೆ ಗುಡುಗು ಸಿಡಿಲಿನ ಸಹಿತ ಮಳೆ ಸುರಿದ ಕಾರಣ ಕೆಲಕಾಲ ಮತದಾನಕ್ಕೆ ಹಿನ್ನೆಡೆಯಾಗಿತ್ತು.
ಸೂಕ್ಷ್ಮ ಮತಗಟ್ಟೆ ಎಂದು ಗುರುತಿಸಲಾಗಿದ್ದ ಕುಶಾಲನಗರ ಮತಕೇಂದ್ರ 91 ಹಾಗೂ 92 ಮತಗಟ್ಟೆಗಳಿಗೆ ಪ್ಯಾರಾ ಮಿಲಿಟರಿ ಪಡೆಯ ಯೋದರನ್ನು ನಿಯೋಜಿಸಲಾಗಿತ್ತು.ಈ ಘಟನೆಗಳನ್ನು ಹೊರತುಪಡಿಸಿ ಮತದಾನ ಶಾಂತಿಯುತವಾಗಿ ಮುಕ್ತಾಯಗೊಂಡಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement