ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಸಕಲೇಶಪುರದಲ್ಲಿ ಹಾನಿ

Srinivasa Murthy VN
Updated On : 18 Apr 2014, 11:41 am

ಸಕಲೇಶಪುರ: ತಾಲೂಕಿನ ವಿವಿಧೆಡೆ ಸುರಿದ ಭಾರೀ ಗುಡುಗು ಸಿಡಿಲು ಮಳೆಗೆ  ಸಾರ್ವಜನಿಕರ ಆಸ್ತಿಪಾಸ್ತಿಗೆ ಅಪಾರ ಪ್ರಮಾಣದ ಹಾನಿ ಉಂಟಾದ ಘಟನೆ ಶುಕ್ರವಾರ ನಡೆದಿದೆ. ಗ್ರಾಮದ ಹೆನ್ನಲಿ ಗ್ರಾಮದ ಚೆಲುವಯ್ಯ ಎಂಬುವವರ ಮನೆಯ ಮೇಲೆ ಮರಬಿದ್ದ ಪರಿಣಾಮ ಹಂಚು ಹಾಗೂ ಶೀಟಗಳು ಒಡೆದು ಗೋಡೆ ಬಿರುಕು ಬಿಟ್ಟಿದೆ. ಅದೃಷ್ಟವಶಾತ್ ಮನೆಯಲ್ಲಿ ಯಾರೂ ಇಲ್ಲದ ಕಾರಣ ಸಾವು ನೋವು ಸಂಭವಿಸಿಲ್ಲ. ಪಟ್ಟಣದ ನಾನಾ ಬಡಾವಣೆಯಲ್ಲಿ ಬಾರಿ ಬಿರುಗಾಳಿಗೆ ಮನೆಯ ಹೆಂಚುಗಳು ಹಾರಿ ಹೋಗಿದ್ದು, ಮರ- ಗಿಡಗಳು ನೆಲಕ್ಕೆ ಉರಳಿ ಸಂಚಾರ ಅಸ್ತವ್ಯಸ್ತಗೊಂಡಿದೆ. ಹೆಮಂತ್ ಎಂಬುವವರ ಕಾರಿಗೆ ಮರಬಿದ್ದು ಕಾರು ಜಖಂಗೊಂಡಿದೆ.

ಅರಳಿ ಮರ ಬಿದ್ದು ಮಹಿಳೆಗೆ ಗಾಯ
ಹಾಸನ: ಮಳೆಯ ಆರ್ಭಟದಿಂದ ರಸ್ತೆ ಬದಿಯಲ್ಲಿದ್ದ ದೊಡ್ಡ ಅರಳಿ ಮರವೊಂದು ಅರ್ಧಕ್ಕೆ ಸೀಳಿಕೊಂಡು ಮನೆ ಮೇಲೆ ಬಿದ್ದ ಪರಿಣಾಮ ಓರ್ವ ಮಹಿಳೆ ಗಾಯಗೊಂಡ ಘಟನೆ ಶುಕ್ರವಾರ ಸಂಜೆ ನಡೆದಿದೆ. ಮರ ಬಿದ್ದ ಹಿನ್ನೆಲೆಯಲ್ಲಿ ಮನೆಯಲ್ಲಿನ ವಸ್ತುಗಳು ಜಖಂಗೊಂಡು ಲಕ್ಷಾಂತರ ರು. ನಷ್ಟವಾಗಿದೆ. ಮಧ್ಯಾಹ್ನದಿಂದ ಒಂದು ಗಂಟೆಗೂ ಹೆಚ್ಚು ಕಾಲ ಸುರಿದ ಬಾರಿ ಮಳೆ ಹಾಗೂ ಸಿಡಿಲು ಗುಡಿಗಿಗೆ ನಗರದ ಹೊರ ವಲಯ ಹನುಮಂತ ಪುರ ಗ್ರಾಮದ ರಸ್ತೆ ಬದಿಯಲ್ಲಿದ್ದ ಹಳೆಯ ಅರಳಿ ಮರ ಮಧ್ಯ ಸೀಳಿಕೊಂಡು ಮನೆಯ ಮೇಲೆ ಬಿತ್ತು. ಇದರಿಂದಾಗಿ, ಸುಶೀಲಮ್ಮ (58) ಎಂಬುವರಿಗೆ ತೀವ್ರ ಗಾಯಗಳಾಗಿವೆ. ಮನೆ ಒಳಗೆ ಒಟ್ಟು 8 ಜನರು ಇದ್ದರು. ಕೆಲವರು ಮನೆಯ ಹಿಂದೆ ಇದ್ದು, ಸುಶೀಲಮ್ಮ ಮನೆ ಮುಂದಿನ ರೂಂನಲ್ಲಿ ನಿಂತಿದಾಗ ಈ ಘಟನೆ ನಡೆದಿದೆ. ಹೆಂಚಿನ ಮನೆ ಮೇಲೆ ಮರ ಬಿದ್ದಾಗ ಆಕೆ ಕೆಳಗೆ ಕುಸಿದರು. ತಲೆಯ ಮೇಲೆ ಮರ ಬಿದ್ದುದರಿಂದ ರಕ್ತಸ್ರಾವವಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement