ಸಿಡಿಲು ಬಡಿದು ಬಾಲಕ ಸಾವು
ಅರಸೀಕೆರೆ: ತಾಲೂಕಿನ ಕಣಕಟ್ಟೆ ಗ್ರಾಮದಲ್ಲಿ ಸಿಡಲು ಬಡಿದು ಬಾಲಕನೊಬ್ಬ ಮೃತಪಟ್ಟಿರುವ ಘಟನೆ ಶುಕ್ರವಾರ ಮಧ್ಯಾಹ್ನ ನಡೆದಿದೆ.
ಕಣಕಟ್ಟೆ ಗ್ರಾಮದ ಬೋಜಪ್ಪ ಅವರ ಮನೆಗೆ ಶಾಲೆಯ ರಜಾ ದಿನಗಳನ್ನು ಕಳೆಯಲು ತಮ್ಮ ತಾತನ ಮನೆಗೆ ಬಂದಿದ್ದ ಮಹೇಶ್ (14) ಎಂಬ ಬಾಲಕನಿಗೆ ಇಂದು ಮಧ್ಯಾಹ್ನ ವೇಳೆಯಲ್ಲಿ ತೋಟಕ್ಕೆ ಹೋಗಿದ್ದ ಸಂದರ್ಭದಲ್ಲಿ ಈ ದುರ್ಘಟನೆ ಸಂಭವಿಸಿದೆ ಎಂದು ಹೇಳಲಾಗಿದೆ. ಕಣಕಟ್ಟೆ ಹೋಬಳಿಯ ನರಸೀಪುರ ಗ್ರಾಪಂ ವ್ಯಾಪ್ತಿಯ ಹಿರೇಸಾದರಹಳ್ಳಿ ಗ್ರಾಮದಲ್ಲಿ ಗುರುವಾರ ರಾತ್ರಿ ಸುರಿದ ಬಿರುಗಾಳಿ ಮಿಶ್ರಿತ ಮಳೆಯಿಂದಾಗಿ ಅಪಾರ ಪ್ರಮಾಣದ ಆಸ್ತಿಪಾಸ್ತಿಗಳಿಗೆ ನಷ್ಟ ಉಂಟಾಗಿರುವ ಘಟನೆಗಳು ನಡೆದಿವೆ.
ಹಾನಿ: ತಾಲೂಕಿನ ಹಿರೇಸಾದರಹಳ್ಳಿ ಗ್ರಾಮವು ಸೇರಿದಂತೆ ಸುತ್ತಮುತ್ತ ಗ್ರಾಮಗಳಲ್ಲಿ ಗುರುವಾರ ರಾತ್ರಿ ಗುಡುಗು ಮತ್ತು ಗಾಳಿ ಸಹಿತ ಬಾರಿ ಮಳೆಯಿಂದ ಇಲ್ಲಿನ ಸುತ್ತಮುತ್ತ ಜಮೀನಿನಲ್ಲಿ ಬೆಳೆದಿದ್ದ ದಾಳಿಂಬೆ ಬೆಳೆ ಹಾಗೂ ಹಲವು ತೆಂಗಿನಮರಗಳು ನೆಲಕಚ್ಚಿ ಲಕ್ಷಾಂತರ ರು.ಗಳ ನಷ್ಟ ಸಂಭವಿಸಿದೆ ಎನ್ನಲಾಗಿದೆ.
ಅಲ್ಲದೆ ಹಿರೇಸಾದರಹಳ್ಳಿ ಗ್ರಾಮದ ಶ್ರೀಶನೇಶ್ವರ ದೇವಾಲಯದ ಬಳಿ ಇರುವ ಸಮುದಾಯ ಭವನದ ಮೇಲ್ಛಾವಣಿಗೆ ಹಾಕಲಾಗಿದ್ದ ಲಕ್ಷಾಂತರ ಮೌಲ್ಯದ ಕಬ್ಬಿಣದ ಶೀಟ್ಗಳು ಗಾಳಿಯ ಆರ್ಭಟಕ್ಕೆ ಸಿಕ್ಕಿ 100 ಮೀಟರ್ ದೂರಕ್ಕೆ ಹಾರಿಹೋಗಿ ಅಪಾರ ಪ್ರಮಾಣದ ನಷ್ಟವಾಗಿದೆ.