ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಪೇಟೆ ಬಾಣಾವರ- 1ರಲ್ಲಿ ಮರು ಮತದಾನ ಸಾಧ್ಯತೆ

Srinivasa Murthy VN
Updated On : 19 Apr 2014, 9:40 am

ಹಾಸನ: ಅರಸೀಕೆರೆ ವಿಧಾನಸಭಾ ಕ್ಷೇತ್ರದ ಪೇಟೆ ಬಾಣಾವರ-1ರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ದಕ್ಷಿಣ ಪಾರ್ಶ್ವದ ಮತಗಟ್ಟೆ ಸಂಖ್ಯೆ 72ರಲ್ಲಿ ತಾಂತ್ರಿಕ ದೋಶದಿಂದ ಮತಯಂತ್ರ ಕೆಟ್ಟಿದ್ದ ಹಿನ್ನೆಲೆಯಲ್ಲಿ ಮರು ಮತದಾನ ನಡೆಯುವ ಸಾಧ್ಯತೆಗಳಿವೆ. ಈ ಮತಗಟ್ಟೆಯಲ್ಲಿ ಬೆಳಗಿನಿಂದ ಮಧ್ಯಾಹ್ನ 4ರವರೆಗೆ 332 ಮತಗಳು ಚಲಾವಣೆಗೊಂಡ ನಂತರ ತಾಂತ್ರಿಕ ದೋಷ ಕಂಡು ಬಂದಿತ್ತು. ಎಷ್ಟೇ ಪ್ರಯತ್ನ ಪಟ್ಟರೂ ಅದನ್ನು ಸರಿಪಡಿಸಲು ಸಾಧ್ಯವಾಗದೆ ಬದಲಿ ಮತಯಂತ್ರವನ್ನು ಬಳಸಿ ಮತದಾನವನ್ನು ಮುಂದುವರಿಸಲಾಗಿತ್ತು. ಮತಯಂತ್ರದಲ್ಲಿ ಬಳಸಿದ್ದ ಸಾಫ್ಟ್ವೇರ್ ಪ್ರೋಗ್ರಾಂ ಕರಪ್ಟ್ ಆಗಿದ್ದಾಗಿ ಬಿಇಎಲ್ ತಜ್ಞರು ವರದಿ ನೀಡಿದ್ದಾರೆ. ಈ ವಿಚಾರವನ್ನು ಚುನಾವಣಾಧಿಕಾರಿ ವಿ. ಅನ್ಬುಕುಮಾರ್ ಅವರು ಚುನಾವಣಾ ಆಯೋಗಕ್ಕೆ ವರದಿ ಮಾಡಿದ್ದು, ಚುನಾವಣಾ ಆಯೋಗದ ನಿರ್ದೇಶನದ ನಂತರ ಈ ಮತಗಟ್ಟೆಯಲ್ಲಿ ಮರು ಚುನಾವಣೆ ನಡೆಯುವ ನಿರೀಕ್ಷೆ ಇದೆ ಎಂದು ತಿಳಿದು ಬಂದಿದೆ.

ಸೋಲು-ಗೆಲುವು  ಕುರಿತು  ಬಿಜೆಪಿ ನಾಯಕರ ಲೆಕ್ಕಾಚಾರ
ಅರಸೀಕೆರೆ: ಕ್ಷೇತ್ರದಲ್ಲಿ ವ್ಯಾಪಕವಾಗಿ ಹರಿದ ಹಣದ ಹೊಳೆ ಮುಂದೆ ಬಿಜೆಪಿ ಪಕ್ಷದ ಎಲ್ಲಾ ಲೆಕ್ಕಾಚಾರಗಳು ತಲೆಕೆಳಗಾಗಿದ್ದು, ಜಿಲ್ಲೆಯಲ್ಲಿ 2ನೇ ಸ್ಥಾನಕ್ಕಾಗಿ ಪಕ್ಷ ಪೈಪೋಟಿ ನಡೆಸುತ್ತಿದೆ ಎಂದು ಬಿಜೆಪಿ ಜಿಲ್ಲಾ ವಕ್ತಾರ ಎನ್.ಡಿ. ಪ್ರಸಾದ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆದರ್ಶ ಸಿದ್ಧಾಂತಗಳ ಹೊರತಾಗಿಯೂ ಹಣಬಲವೇ ಮೇಲುಗೈ ಸಾಧಿಸುವ ಸಂಗತಿ ಎದ್ದುಕಾಣುತ್ತಿದೆ ಎಂದರು. ಈ ಸಂದರ್ಭದಲ್ಲಿ ತಾಲೂಕು ಬಿಜೆಪಿ.ಅಧ್ಯಕ್ಷ ಹರಳಕಟ್ಟಾ ರಮೇಶ್, ಮಾಜಿ ಅಧ್ಯಕ್ಷ ದುಮ್ಮೇನಹಳ್ಳಿ ಗಂಗಾಧರ್, ಕಾರ್ಯದರ್ಶಿ ಜಿ.ಜಿ. ಲೋಕೇಶ್ ಕುಮಾರ್, ತಾಪಂ ಸದಸ್ಯ ಪುಟ್ಟನಕಟ್ಟೆ ದಿನೇಶ್, ನಗರ ಕಾರ್ಯದರ್ಶಿ ಚೇತನ್ ಕುಮಾರ್ ಇದ್ದರು.

ಧಾರಾಕಾರ ಮಳೆಯಿಂದ ಮಳಿಗೆಗೆ ನುಗ್ಗಿದ ನೀರು
ಹಾಸನ: ನಗರದಲ್ಲಿ ಶುಕ್ರವಾರ ಸುರಿದ ಮಳೆ ಅಂಗಯೊಂದಕ್ಕೆ ನೀರು ನುಗ್ಗಿದ ಪರಿಣಾಮ ಅಗ್ನಿಶಾಮಕ ದಳದ ಸಿಬ್ಬಂದಿ ಮೋಟರ್ ಸಹಾಯದಿಂದ ನೀರು ಹೊರಹಾಕಲು ಹರಸಾಹಸಪಟ್ಟರು. ಕಟ್ಟಿನ ಕೆರೆ ಮಾರ್ಕೇಟ್ ಎದುರು, ನಗರದ ಕಸ್ತೂರ ಬಾ ರಸ್ತೆ ಬಳಿ ದೊಡ್ಡ ಚರಂಡಿಗಾಗಿ ತೋಡಲಾಗಿರುವ ಗುಂಡಿಗೆ ಮಳೆಯ ನೀರು ತುಂಬಿ ಕೆಳ ಬಾಗದಲ್ಲಿದ್ದ ಮೊಬೈಲ್ ಅಂಗಡಿಗೆ ನುಗ್ಗಿದೆ. ತಕ್ಷಣ ಆಗಮಿಸಿದ ಅಗ್ನಿಶಾಮಕ ದಳ ಹಾಗೂ ನಗರಸಭೆ ನೀರಿ ಹೀರುವ ಯಂತ್ರ ನೀರು ಹೊರ ತೆಗೆಯಲು ಸತತ ಪ್ರಯತ್ನ ಮಾಡಿದರು. ರಾತ್ರಿ ವೇಳೆ ನೀರು ಈ ಆಳವಾದ ಗುಂಡಿಗೆ ಸೇರಿದರೇ ಅಪಾಯ ತಪ್ಪಿದ್ದಲ್ಲ. ಮೊಬೈಲ್ ಅಂಗಡಿಯಲ್ಲಿದ್ದ ಸಾವಿರಾರು ಮೌಲ್ಯದ ವಸ್ತು ನಷ್ಟವಾಗಿದೆ.

ಹಾನಗಲ್ಲಮ್ಮ ಮೆರವಣಿಗೆ...
ರಾಮನಾಥಪುರ ಹತ್ತಿರವಿರುವ ದೊಡ್ಡಮಗ್ಗೆ ಹೋಬಳಿ ಹಾನಗಲ್ ಗ್ರಾಮದ ಹಾನಗಲ್ಲಮ್ಮ ದೇವರ ಉತ್ಸವ ಮೂರ್ತಿಯನ್ನು ರಾಮನಾಥಪುರ ಕಾವೇರಿ ನದಿಯ ದಂಡೆಯಲ್ಲಿ ಪೂಜಾ ಕೈಂಕರ್ಯದ ನಂತರ ಶ್ರೀ ಸುಬ್ರಹ್ಮಣ್ಯಸ್ವಾಮಿ ದೇವಸ್ಥಾನದ ಮುಂದೆ ಮೆರವಣಿಗೆ ದೃಶ್ಯ.

'ಚಿಕ್ಕ ವಯಸ್ಸಿನಲ್ಲೇ ಉತ್ತಮ ಸಂಸ್ಕೃತಿ ನೀಡಬೇಕು'
ಹಾಸನ: ಚಿಕ್ಕ ವಯಸ್ಸಿನಲ್ಲಿಯೇ ಉತ್ತಮ ಸಂಸ್ಕೃತಿ ಬೆಳೆಸಬೇಕೆಂದು ಜವೇನಹಳ್ಳಿ ಮಠದ ಶ್ರೀ ಸಂಗಮೇಶ್ವರ ಮಹಾಸ್ವಾಮೀಜಿ ಕರೆ ನೀಡಿದ್ದಾರೆ. ನಗರದ ಸಂಗಮೇಶ್ವರ ಬಡಾವಣೆ ಜವೇನಹಳ್ಳಿ ಮಠದ ಸಭಾಂಗಣದಲ್ಲಿ ಇತ್ತೀಚೆಗೆ  ಏರ್ಪಡಿಸಲಾಗಿದ್ದ 3 ದಿನಗಳ ಬೇಸಿಗೆ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು,  ಅತಿಯಾದ ನಾಗರೀಕರಣದಿಂದ ಬಾಂಧವ್ಯಗಳ ಕೊಂಡಿ ಕಳಚಿದ್ದು, ಇಂದಿನ ಮಕ್ಕಳು  ಬುದ್ಧಿವಂತರಾಗುತ್ತಿದ್ದರೂ, ಹೃದಯವಂತಿಕೆ ಕಳೆದುಕೊಳ್ಳುತ್ತಿದ್ದಾರೆ ಎಂದರು. ಕಾರ್ಯಕ್ರಮದಲ್ಲಿ ವಿಶ್ವ ಹಿಂದು ಪರಿಷತ್ ಕಾರ್ಯದರ್ಶಿ ಕಟ್ಟಾಯ ಶಿವಕುಮಾರ್, ಬಳಗಟ್ಟೆ ಲೋಕೇಶ್, ಸಂಗೀತಗಾರ ರೋಹನ್ ಅಯ್ಯರ್, ಆಯೋಜಕ ಭಾಗ್ಯಲಕ್ಷ್ಮಿ, ಆಶಾ ವಿಶ್ವನಾಥ್, ಸದ್ಭಾವ ಸಂಗಮದ ಅಧ್ಯಕ್ಷ ದೇವರಾಜ್ ಇತರರು ಪಾಲ್ಗೊಂಡಿದ್ದರು.

ರಥೋತ್ಸವ ಪ್ರಯುಕ್ತ ಸಾಂಸ್ಕೃತಿಕ ಹಬ್ಬ
ಬೇಲೂರು: ತಾಲ್ಲೂಕು ಜಯ ಕರ್ನಾಟಕ ಸಂಘಟನೆ ವತಿಯಿಂದ ಶ್ರೀ ಚನ್ನಕೇಶವಸ್ವಾಮಿ ರಥೋತ್ಸವದ ಅಂಗವಾಗಿ ಕೋಟೆ ಬಯಲು ರಂಗಮಂದಿರದಲ್ಲಿ ಸಾಂಸ್ಕೃತಿಕ ಹಬ್ಬ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಜಯ ಕರ್ನಾಟಕ ಸಂಘಟನೆಯ ರಾಜ್ಯಾಧ್ಯಕ್ಷ ಬಿ.ಎನ್. ಜಗದೀಶ್, ಜಿಲ್ಲಾಧ್ಯಕ್ಷ ಎಸ್. ಉಮೇಶ್, ಪ್ರಗತಿ ಪರ ಸಂಘಟನೆಯ ತಾಲೂಕು ಗೌರವಾಧ್ಯಕ್ಷ ಕೆ. ಸುದರ್ಶನ್, ಬೇಲೂರು ಪೊಲೀಸ್ ಠಾಣೆ ಅಸಿಸ್ಟೆಂಟ್ ಸಬ್ ಇನ್ಸ್ಪೆಕ್ಟರ್ ರಾಜಶೇಖರ್, ರೈತ ಸಂಘದ ಕಾರ್ಯದರ್ಶಿ ಸ್ವಾಮಿಗೌಡ, ಪತ್ರಕರ್ತ ಡಿ.ಬಿ. ಮೋಹನ್ ಕುಮಾರ್, ಕಲಾವಿದ ಸ್ವಾಮಿಗೌಡ ಅವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು.  ಜಯ ಕರ್ನಾಟಕ ಸಂಘಟನೆಯ ರಾಜ್ಯ ಗೌರವಾಧ್ಯಕ್ಷ ದೀಪಕ್, ರಾಮಚಂದ್ರಯ್ಯ,  ಸೋಮೇಶ್, ಎಮ್. ಕೆ.ಆರ್,  ಅರುಣ್ ಕುಮಾರ್,  ವಿ.ಎಸ್. ಬೋಜೇಗೌಡ,  ಬಿ.ಎಲ್. ಲಕ್ಷ್ಮಣ್,  ಕೇಬಲ್ ವಿಜಯ ಕುಮಾರ್ ಇತರರು ಇದ್ದರು.

ಸಂಗೀತದಿಂದ ಮನಸ್ಸಿಗೆ ನೆಮ್ಮದಿ, ಶಾಂತಿ
ರಾಮನಾಥಪುರ: ಸಮಾಜದ ಒಳತಿಗಾಗಿ, ಮನುಕುಲದ ಹಿತಕ್ಕಾಗಿ ಇಂತಹ ಸಂಗೀತ ಕಾರ್ಯಗಳು ಮನಸಿಗೆ ನೆಮ್ಮದಿ ಶಾಂತಿ ತರುತ್ತವೆ ಎಂದು ಗಾನ ಕಲಾ ಭೂಷಣ ರುದ್ರಪಟ್ಟಣ ವಿದ್ವಾನ್ ಅರ್.ಕೆ. ಪದ್ಮನಾಭ ಹೇಳಿದರು.
ಕಾವೇರಿ ನದಿ ದಂಡೆಯಲ್ಲಿರುವ ಬಸವಪಟ್ಟಣದಲ್ಲಿ ಶನಿವಾರ ಶ್ರೀ ರಾಮನವಮಿ ಪ್ರಯುಕ್ತ ಶ್ರೀರಾಮ ಸೇವಾ ಸಮಿತಿ ಅಶ್ರಯದಲ್ಲಿ  ನಡೆದ ಸಂಗೀತೋತ್ಸವ ಸಮಾರಂಭ ಕಾರ್ಯಕ್ರಮದಲ್ಲಿ ಮಾತನಾಡಿ ಅವರು ಮಾತನಾಡಿದರು. ಗ್ರಾಮೀಣ ಪ್ರದೇಶದಲ್ಲಿ ಸಂಗೀತೋತ್ಸವ ಇಷ್ಟೊಂದು ವೈವಿಧ್ಯಮಯವಾಗಿ ಬೆಳೆದಿರುವುದು ವಿಶಿಷ್ಟ ಎಂದರು.
ನಗರ, ಪಟ್ಟಣಗಳಿಗೆ ಸೀಮಿತವಾಗಿದ್ದ ಸಂಗೀತ ಕಾರ್ಯಕ್ರಮಗಳನ್ನು ಹಳ್ಳಿಗಾಡಿಗೂ ತಂದು ಜನಪ್ರಿಯತೆಗೊಳಿಸುವ ನಿಟ್ಟಿನಲ್ಲಿ ಹತ್ತಾರು ವರ್ಷಗಳಿಂದ ನಿರಂತರವಾಗಿ ಶ್ರಮಿಸುತ್ತಿರುವ ಶ್ರೀರಾಮ ಸೇವಾ ಸಮಿತಿ ಕಾರ್ಯ ಶ್ಲಾಘನೀಯ ಎಂದರು.

 '12 ಸಾವಿರಕ್ಕೂ ಅಧಿಕ ಮತಗಳಿಂದ ಮಂಜುಗೆ ಜಯ'
ಅರಸೀಕೆರೆ: ಲೋಕಸಭಾ ಚುನಾವಣೆಯಲ್ಲಿ ಅರಸೀಕೆರೆ ವಿಧಾನಸಭಾ ಕ್ಷೇತ್ರದಲ್ಲಿ ಸುಮಾರು 12 ಸಾವಿರಕ್ಕೂ ಅಧಿಕ ಮತಗಳ ಅಂತರ ಕಾಂಗ್ರೆಸ್ ಅಭ್ಯರ್ಥಿ ಎ. ಮಂಜು ಕಾಯ್ದುಕೊಂಡಿದ್ದಾರೆ ಎಂದು ಜಿಲ್ಲಾ ಸಂಘಟನಾ ಕಾರ್ಯದರ್ಶಿ ದಂದೂರು ರವಿ ಭವಿಷ್ಯ ನುಡಿದಿದ್ದಾರೆ.  
ಸುದ್ದಿಗಾರರ ಜೊತೆ ಮಾತನಾಡಿದ ಅವರು, ರಾಜ್ಯ ಸರ್ಕಾರದ ಜನಪರ ಯೋಜನೆಗಳು ಮಂಜು ಅವರಿಗೆ ಶ್ರೀರಕ್ಷೆಯಾಗಲಿವೆ. ಜಿಲ್ಲೆಯ ಜನರೂ ಕಾಂಗ್ರೆಸ್ ಕಡೆಗೆ ಒಲವು ತೋರಿದ್ದು, ಪ್ರಚಾರ ವೇಳೆ ತಿಳಿದಿದ್ದು ನಮ್ಮ ಉತ್ಸಾಹ ಇಮ್ಮಡಿಗೊಳಿಸಿತ್ತು. ಕ್ಷೇತ್ರದಲ್ಲಿನ 275 ಮತಗಟ್ಟೆಗಳ ಪೈಕಿ 160ರಿಂದ 170 ಮತಗಟ್ಟೆಗಳಲ್ಲಿ ಕಾಂಗ್ರೆಸ್ ಪ್ರಥಮ ಸ್ಥಾನ ಗಳಿಸಲಿದೆ. ಹೋಬಳಿ ಮಟ್ಟದ ಮತಗಟ್ಟೆಗಳಿಂದಲೇ ಹೆಚ್ಚು ಮತಗಳು ಹರಿದುಬರಲಿದೆ. ಪ್ರಬಲ ಪೈಪೋಟಿ ನೀಡಿದ ಜೆಡಿಸ್ 2ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಗಿದೆ ಎಂದರು.

ಸ್ಪರ್ಧಾತ್ಮಕ ಪರೀಕ್ಷೆ ಕುರಿತು ಉಚಿತ ಕಾರ್ಯಾಗಾರ
ಹಾಸನ: ಧಾರವಾಡ ದಿ ಕ್ಲಾಸಿಕ್ ಕೆಎಎಸ್ ಮತ್ತು ಐಎಎಸ್ ಸ್ಟಡಿ ಸರ್ಕಲ್ ಮತ್ತು ಸ್ಪರ್ಧಾ ಸ್ಫೂರ್ತಿ ಮಾಸಪತ್ರಿಕೆ ಆಶ್ರಯದಲ್ಲಿ ಏ. 20ರಂದು ಹಾಸನದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಂಬಂಧಿಸಿದಂತೆ ಒಂದು ದಿನದ ಉಚಿತ ಮಾಹಿತಿ ಕಾರ್ಯಾಗಾರ ಏರ್ಪಡಿಸಲಾಗಿದೆ. ನಗರದ ಕಲಾಭವನದಲ್ಲಿ ಬೆಳಗ್ಗೆ 10ರಿಂದ ಸಂಜೆ 5ರವರೆಗೆ ನಡೆಯುವ ಕಾರ್ಯಾಗಾರದಲ್ಲಿ ಐಎಎಸ್, ಕೆಎಎಸ್, ಪಿಎಸ್ಐ, ಪಿಸಿ, ಪಿಡಿಓ, ಡಿಇಡಿ, ಬಿಇಡಿ, ಬ್ಯಾಂಕಿಂಗ್ ಸೇರಿದಂತೆ ವಿವಿಧ ಪರೀಕ್ಷೆಗಳ ಕುರಿತು ಮಾರ್ಗದರ್ಶನ, ಮಾಹಿತಿ ನೀಡಲಾಗುವುದು. ಆಸಕ್ತರು ಲಕ್ಷ್ಮಣ ಎಸ್. ಉಪ್ಪಾರ (ಮೊ.ಸಂ. 9900018403) ಅವರನ್ನು ಸಂಪರ್ಕಿಸಬಹುದು. ಅಥವಾ ದಿ ಕ್ಲಾಸಿಕ್ ಕೆಎಎಸ್ ಮತ್ತು ಐಎಎಸ್ ಸ್ಟಡಿ ಸರ್ಕಲ್ ಮತ್ತು ಸ್ಪರ್ಧಾ ಸ್ಫೂರ್ತಿ ಮಾಸ ಪತ್ರಿಕೆ, ಧಾರವಾಡ ಇಲ್ಲಿ ಸಂಪರ್ಕಿಸಬಹುದು.

ಸಂವಿಧಾನ ಶಿಲ್ಪಿ ಸ್ಮರಣೆ...
ಚನ್ನರಾಯಪಟ್ಟಣದ ಹೊಸ ಬಸ್ ನಿಲ್ದಾಣದ ಬಳಿ ಅಂಬೇಡ್ಕರ್ ಸಾಮಾಜಿಕ ಸೇವಾ ಸಮಿತಿ ವತಿಯಿಂದ ಇತ್ತೀಚೆಗೆ ಏರ್ಪಡಿಸಿದ್ದ  ಅಂಬೇಡ್ಕರ್ರವರ 123ನೇ ಜಯಂತಿಯನ್ನು   ತಹಸೀಲ್ದಾರ್ ಕೆ. ಕೃಷ್ಣ ಉದ್ಘಾಟಿಸಿದರು. ತಹಸೀಲ್ದಾರ್ ಸೋಮಶೇಖರ್, ಸಮಿತಿ ಅಧ್ಯಕ್ಷ ಧರಣೇಶ್, ಸಂಚಾಲಕ ವೈ.ಕೆ. ಮಂಜುನಾಥ್ ಇದ್ದಾರೆ.

 ಕೃಷಿ ವಿವಿ ಘಟಿಕೋತ್ಸವದಲ್ಲಿ 847 ವಿದ್ಯಾರ್ಥಿಗಳಿಗೆ ಪದಕ
ಹಾಸನ: ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ 48ನೇ ಘಟಿಕೋತ್ಸವವನ್ನು ಏ.20 ರಂದು ಬೆಳಗ್ಗೆ 11ಕ್ಕೆ ಬೆಂಗಳೂರಿನ ಜಿಕೆವಿಕೆ ಆವರಣದಲ್ಲಿ ಏರ್ಪಡಿಸಲಾಗಿದೆ.
ಘಟಿಕೋತ್ಸವದಲ್ಲಿ 566 ಸ್ನಾತಕ ಪದವಿ, 222 ಸ್ನಾತಕೋತ್ತರ ಪದವಿ ಹಾಗೂ 59 ಡಾಕ್ಟರೇಟ್ ಪದವಿಗಳು ಸೇರಿದಂತೆ ಒಟ್ಟು 847 ವಿದ್ಯಾರ್ಥಿಗಳಿಗೆ ವಿವಿಧ ಪದವಿಗಳನ್ನು ಪ್ರದಾನ ಮಾಡಲಾಗುತ್ತಿದೆ. ಸಮಾರಂಭದಲ್ಲಿ ವಿಶ್ವವಿದ್ಯಾಲಯ ವತಿಯಿಂದ 41 ಚಿನ್ನದ ಪದಕ ಹಾಗೂ ದಾನಿಗಳ ವತಿಯಿಂದ 88 ಚಿನ್ನದ ಪದಕಗಳು ಸೇರಿ, ಒಟ್ಟು 129 ಚಿನ್ನದ ಪದಕಗಳನ್ನು ಪ್ರದಾನ ಮಾಡಲಾಗುವುದು ಎಂದು ಕುಲಪತಿ ಡಾ.ಕೆ. ನಾರಾಯಣಗೌಡ ತಿಳಿಸಿದ್ದಾರೆ. ರಾಜ್ಯಪಾಲ ಡಾ. ಹಂಸರಾಜ್ ಭಾರದ್ವಾಜ್ ಅಭ್ಯರ್ಥಿಗಳಿಗೆ ಪದವಿ ಹಾಗೂ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.

 ವಿಜೃಂಭಣೆಯಿಂದ ನಡೆದ ರಾಮೋತ್ಸವ ಕಾರ್ಯಕ್ರಮ
ಹೊಳೆನರಸೀಪುರ: ಪಟ್ಟಣದ ಶ್ರೀ ಸೀತಾರಾಮ ಮಂದಿರದ ಆಶ್ರಯದಲ್ಲಿ ಶ್ರೀ ಏಕಾಂತ ರಾಮೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ಶ್ರೀ ರಾಮೋತ್ಸವ ಕಾರ್ಯಕ್ರಮ ವಿಜೃಂಭಣೆಯಿಂದ ನಡೆಯಿತು. ಕೊನೆಯ ದಿನದಂದು ಶ್ರೀ ಮಹಿಳಾ ಹರಿದಾಸ ಸಂಘದ ಸದಸ್ಯರಾದ  ಸುಧಾಮಣಿ ಗುರುರಾಜ್, ಭವಾನಿ ಪ್ರಹ್ಲಾದ್, ಪಾರ್ವತಮ್ಮ, ಇಂದಿರಾ ಭಾರಾಸು, ಪದ್ಮಿನಿ ಶ್ರೀನಿವಾಸ್, ವಾಸುಕಿ ಮಧು ಹಾಗೂ ರಮಾಕಟ್ಟಿ ಇವರಿಂದ ದೇವರನಾಮ ಸ್ತುತಿ ಕಾರ್ಯಕ್ರಮ ಹಮ್ಮಿ ಕೊಳ್ಳಲಾಗಿತ್ತು. ಇದೇ ಸಂದರ್ಭದಲ್ಲಿ ಏಕಾಂತ ರಾಮೇಶ್ವರ ದೇವಸ್ಥಾನದ ಸಂಚಾಲಕ ರಾಮಕೃಷ್ಣಯ್ಯ ಅವರನ್ನು ಸನ್ಮಾನಿಸಲಾಯಿತು. ಸಂಘದ ಅಧ್ಯಕ್ಷ ರಾಮಚಂದ್ರ ಪುತ್ತುರಾಯ ಮಾತನಾಡಿದರು. ವೇದಿಕೆಯಲ್ಲಿ ದೇವಸ್ಥಾನದ ಅಧ್ಯಕ್ಷಎಂ.ಎಲ್. ರಾಮಚಂದ್ರ ಶೆಟ್ಟರು,  ಎಚ್.ವಿ. ಭಗವಾನ್, ಪಟ್ಟಾಭಿರಾಮ, ಎಸ್. ವಿಶ್ವನಾಥ್, ಶ್ಯಾಮಲಾ ಭಗವಾನ್, ಅರ್ಚಕರಾದ ವೆಂಕಟೇಶ್ ದೀಕ್ಷಿತ್ ಇದ್ದರು. ಬಾರಾಸು ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ಪಕ್ಕವಾದ್ಯದಲ್ಲಿ ಮೃದಂಗ ವಿದ್ವಾನ್ ಕೆ. ಆರ್. ವಿಜಯಕುಮಾರ್ ಪತ್ತುರಾಯ ಹಾಗೂ ಹಾರ್ಮೋನಿಯಂ ವಿದ್ವಾನ್ ಗಿರೀಶ್ ಸಹಕರಿಸಿದರು.

ಕೋಡಮ್ಮ ದೇವಿ ರಥೋತ್ಸವ 22ರಿಂದ
ಹಾಸನ: ತಾಲೂಕು ದುದ್ದ ಹೋಬಳಿಯ ಹೊನ್ನಾವರ ಗ್ರಾಮದಲ್ಲಿ ಏ. 22ರಿಂದ ಏ.  24 ರವರೆಗೆ ಕೋಡಮ್ಮ ದೇವಿಯವರ ರಥೋತ್ಸವದ ಕಾರ್ಯಕ್ರಮಗಳನ್ನು  ಹಮ್ಮಿಕೊಳ್ಳಲಾಗಿದೆ. ಏ. 22ರಂದು ರಾತ್ರಿ 7ಕ್ಕೆ ತಿರುಪತಿಹಳ್ಳಿ ಗ್ರಾಮಸ್ಥರಿಂದ ದೇವಿಯವರಿಗೆ  ಮಹಾಮಂಗಳಾರತಿ, ರಾತ್ರಿ 8ಕ್ಕೆ ಹೊನ್ನಾವರ ಗ್ರಾಮಸ್ಥರಿಂದ ಘಟಿಕೋತ್ಸವ ಹಾಗೂ ಬಾಯಿ ಬೀಗ ಏರ್ಪಡಿಸಲಾಗಿದೆ.  ವೀರಗಾಸೆ ಕುಣಿತ, ಶ್ರೀ ವೀರಭದ್ರೇಶ್ವರ ವೀರಗಾಸೆ ನೃತ್ಯ ನಡೆಯಲಿದ್ದು, ಮದ್ದುಗುಂಡು ಕಾರ್ಯಕ್ರಮ, ಹೂವಿನ ವಾಹನೋತ್ಸವ ನಡೆಯಲಿದೆ. ಏ. 24ರಂದು ಬೆಳಗ್ಗೆ 6ರಿಂದ ಮಧ್ಯಾಹ್ನ 12ರವರೆಗೆ ರಥೋತ್ಸವ, ಮಧ್ಯಾಹ್ನ 3ರ ನಂತರ ದೇವಿಯವರ ಸಿಡಿ ಕಾರ್ಯಕ್ರಮ ನಡೆಯಲಿದೆ. ನಂತರ ನಾನಾ ಮನರಂಜನಾ ಕಾರ್ಯಕ್ರಮ ಏರ್ಪಡಿಸಲಾಗಿದೆ. 12 ಗ್ರಾಮಗಳಾದ ಹೊನ್ನಾವರ, ಪೂಮಗಾಮೆ, ಉದ್ಧೂರಹಳ್ಳಿ, ಚಿಕ್ಕಮೇನಹಳ್ಳಿ, ದೇವಿಹಳ್ಳಿ, ಕೋಡಿಹಳ್ಳಿ, ಅನುಗವಳ್ಳಿ, ತಿಮ್ಮನಹಳ್ಳಿ, ಚಿಗಟಿಹಳ್ಳಿ, ಬೈರಾಪುರ, ಹುಲ್ಲೇನಹಳ್ಳಿ, ಎಚ್. ಮೈಲನಹಳ್ಳಿ ಗ್ರಾಮಗಳ ದೇವರ ರಥೋತ್ಸವ ಶ್ರೀ ಕೋಡಮ್ಮ ದೇವಿಯವರ ರಥೋತ್ಸವದೊಂದಿಗೆ ನಡೆಯಲಿದೆ.

ಅಂಬೇಡ್ಕರ್ ಮಾದರಿಯಲ್ಲಿ ಜ್ಞಾನ ಸಂಪಾದನೆಗೆ ಶ್ರಮಿಸಿ
ಹಾಸನ: ಡಾ. ಬಿ.ಆರ್. ಅಂಬೇಡ್ಕರ್ ಅವರು ನಮ್ಮೆಲ್ಲರಿಗೂ ಮಾದರಿ ಆಗಬೇಕು. ಅವರ ಹುಟ್ಟು, ಸಾಧನೆ ಯುವ ಜನತೆಗೆ ಮಾರ್ಗದರ್ಶನವಾಗಬೇಕು ಎಂದು ಕೃಷಿಕ್ ಸರ್ವೋದಯ ಫೌಂಡೇಶನ್ನ ಶೈಕ್ಷಣಿಕ ಸಮನ್ವಯಾಧಿಕಾರಿ ಹಾಗೂ ವೃತ್ತಿ ಸಲಹೆಗಾರ ಜಿ.ಎಚ್. ಅನಂತರಾಮು ತಿಳಿಸಿದರು.
ನಗರದ ಕೃಷಿಕ್ ಸರ್ವೋದಯ ಫೌಂಡೇಶನ್ ವತಿಯಿಂದ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ಪಡೆಯುತ್ತಿರುವ ಅಭ್ಯರ್ಥಿಗಳು ಇತ್ತೀಚೆಗೆ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದರು. ಅಂಬೇಡ್ಕರ್ ತಮ್ಮ ಜ್ಞಾನದಿಂದ ವಿಶ್ವಮಾನ್ಯರಾದರು. ಹಾಗಾಗಿ, ಜ್ಞಾನ ಸಂಪಾದನೆಗೆ ಸತತ ಮತ್ತು ನಿರಂತರ ಪ್ರಯತ್ನ ನಡೆಸಬೇಕೆಂದು ಹೇಳಿದರು. ಸಮಾರಂಭದಲ್ಲಿ ಎಚ್.ಪಿ. ರಂಗಸ್ವಾಮಿ, ಬಿ. ಸಿದ್ದೇಗೌಡ, ಎಚ್.ಎಸ್. ಚಂದ್ರಶೇಖರ್, ಚರಣ್ ಕುಮಾರ್ ಮತ್ತು ನೂರಾರು ಶಿಬಿರಾರ್ಥಿಗಳು ಭಾಗವಹಿಸಿದ್ದರು.

ಕಂಬೈಂಡ್ ಮೆಡಿಕಲ್ ಸರ್ವೀಸ್ ಪರೀಕ್ಷೆ
ಹಾಸನ: ಕೇಂದ್ರ ಸರ್ಕಾರದ ಅಧೀನದಲ್ಲಿ ಲಭ್ಯವಾಗುವ ಸುಮಾರು ಒಂದು ಸಾವಿರ ಮೆಡಿಕಲ್ ಆಫೀಸರ್ಗಳನ್ನು ಭರ್ತಿ ಮಾಡಲು ್ಖಕಿಖಈ ಜೂ. 22ರಂದು ದೇಶ ದಲ್ಲೆಲ್ಲಾ ಕಂಬೈಂಡ್ ಮೆಡಿಕಲ್ ಸರ್ವೀಸ್ ಪರೀಕ್ಷೆ ನಡೆಸಲಿದೆ.  ಂಇಇಖ ಪದವಿ ಹೊಂದಿರುವವರು ಅಥವಾ ಅಂತಿಮ ವರ್ಷದ ಂಇಇಖ ಓದುತ್ತಿರುವವರು ಆನ್ಲೈನ್ ಮೂಲಕ (ಜಾಲತಾಣ ಢಿಢಿಢಿ.್ಡಠಡ್ಛ್ಟಟಿಟ್ಝಟಿಜ.ಟ್ಝ್ಛಿ.್ಝಟಿ) ಅರ್ಜಿ ಸಲ್ಲಿಸಬಹುದು. ಅರ್ಜಿ ಶುಲ್ಕ ರು. 200. ಪ.ಪಂ, ವಿ.ಚೆ. ಮಹಿಳಾ ಅಭ್ಯರ್ಥಿಗಳಿಗೆ ವಿನಾಯತಿ ಇದೆ. ವಯೋವುತಿ ಗರಿಷ್ಠ 32 ವರ್ಷ ಮೀರಿರಬಾರದು. 01.01.2014 ರಂತೆ ನಿಯಮಾನುಸಾರ ವಯೋವುತಿಯಲ್ಲಿ ಸಡಿಲಿಕೆ ಇದೆ. ಈ ಪರೀಕ್ಷೆಯಲ್ಲಿ 2 ಪತ್ರಿಕೆಗಳಿದ್ದು, 1ನೇ ಪತ್ರಿಕೆಯಲ್ಲಿ ಜನರಲ್ ಎಬಿಲಿಟಿ 30 ಪ್ರಶ್ನೆಗಳು, ಜನರಲ್ ಮೆಡಿಸನ್ 70 ಪ್ರಶ್ನೆಗಳು, ಪಿಡಿಯಾಟ್ರಿಕ್ಸ್ 20 ಪ್ರಶ್ನೆಗಳು, ಒಟ್ಟು 120 ಪ್ರಶ್ನೆಗಳು, 2ನೇ ಪತ್ರಿಕೆ, ಸರ್ಜರಿ, ಗೈನಕಾಲಜಿ, ಪ್ರಿವೆಂಟೀವ್ ಮತ್ತು ಸೋಷಿಯಲ್ ಮೆಡಿಸನ್ - ಇದು ಪ್ರತಿ ಶಾಖೆಗೂ 40 ಪ್ರಶ್ನೆಗಳಿರುತ್ತವೆ. ಒಟ್ಟು 120 ಪ್ರಶ್ನೆಗಳು. ಪ್ರತಿ ಪತ್ರಿಕೆಗೆ 250 ಅಂಕಗಳ 2 ಗಂಟೆ ಅವಧಿ ಇರುತ್ತದೆ.

ಮಳೆ ಹಾನಿ...
ಆಲೂರಿನ ತಾಲೂಕಿನ ವಿವಿಧೆಡೆ ಸುರಿದ ಧಾರಾಕಾರ ಮಳೆ, ಗಾಳಿಗೆ ದೇವರುಮನೆ ಕೊಪ್ಪಲು ಗ್ರಾಮದ ಮರೀಗೌಡ, ಬಸಪ್ಪ, ವೀರಭದ್ರ, ನಂಜುಂಡೇಗೌಡ, ಶಿವಶಂಕರ್, ಜವರಶೆಟ್ಟರ್, ಬಾಲಕೃಷ್ಣ, ಸಣ್ಣಶೆಟ್ಟಿ, ಸ್ವಾಮಿಗೌಡ, ದೇವರಾಜೇಗೌಡ ಹಾಗೂ ಮುಂತಾದವರ ಮನೆಯ ಹೆಂಚುಗಳು ಹಾಗೂ ಛಾವಣಿಗಳು ಹಾರಿಹೋಗಿರುವುದು.

ಭಾರೀ ಮಳೆ...
ಹಾಸನ ತಾಲೂಕಿನ ಹನುಮಂತಪುರದಲ್ಲಿ ಶನಿವಾರ ಸುರಿದ ಭಾರೀ ಮಳೆ ಹಾಗೂ ಗಾಳಿಗೆ ಮನೆಯೊಂದರ ಮೇಲ್ಛಾವಣಿ  ಮೇಲೆ ಮರ ಬಿದ್ದ ಪರಿಣಾಮ ಹೆಂಚುಗಳು ತುಂಡಾಗಿ ಮನೆಯೊಳಗೆ ಚೆಲ್ಲಾಪಿಲ್ಲಿಯಾಗಿ ಬಿದ್ದಿರುವುದು.

 ಪೊಲೀಸ್ ಕ್ಯಾಂಟೀನ್ಗೆ ಜಿಲ್ಲಾಧಿಕಾರಿ ಚಾಲನೆ
ಹಾಸನ: ಪೊಲೀಸರಿಗೆಂದು ನೂತನವಾಗಿ ನಿರ್ಮಿಸಿರುವ ಕ್ಯಾಂಟಿನ್ಗೆ ಜಿಲ್ಲಾಧಿಕಾರಿ  ಅನ್ಬುಕುಮಾರ್ ಇತ್ತೀಚೆಗೆ ಚಾಲನೆ ನೀಡಿದರು. ನಗರದ ಡಿ.ಎ.ಆರ್. ಪೊಲೀಸ್ ಕ್ವಾರ್ಟರ್ಸ್ನಲ್ಲಿ ಕ್ಯಾಂಟೀನ್ ನಿರ್ಮಿಸಲಾಗಿದೆ. ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ದಕ್ಷಿಣ ವಲಯ ಐ.ಜಿ.ಪಿ. ಡಾ. ರಾಮಚಂದ್ರ, ಸದಾ ಕರ್ತವ್ಯದಲ್ಲಿ ನಿರತರಾಗಿರುವ ಪೊಲೀಸರಿಗೆ ಮಿಲಿಟರಿ  ಕ್ಯಾಂಟಿನ್ ಮಾದರಿಯಲ್ಲೇ ಕ್ಯಾಂಟೀನ್ ತೆರೆಯಲಾಗಿದೆ. ಈ ಕ್ಯಾಂಟಿನ್ ಕರ್ತವ್ಯ ನಿರತ ಪೊಲೀಸರಿಗೆ ಮಾತ್ರ ಸೀಮಿತ. ವಸ್ತುಗಳು ಮತ್ತು ತಿನಿಸುಗಳು ಶೇ. 15ರಷ್ಟು ರಿಯಾಯಿತಿ ದರದಲ್ಲಿ ದೊರೆಯುತ್ತವ ಎಂದು ತಿಳಿಸಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ. ಚನ್ನಣ್ಣನವರ್ ಮಾತನಾಡಿ, ಮುಂದಿನ ದಿನಗಳಲ್ಲಿ ನಿವೃತ್ತ ಪೊಲೀಸರಿಗೆ ಕ್ಯಾಂಟೀನ್ ಉಪಯೋಗ ಪಡೆಯುವ ಅನುಕೂಲ ಕಲ್ಪಿಸಲಾಗುವುದು ಎಂದರು. ಕ್ಯಾಂಟಿನ್ ಮಾದರಿಯಲ್ಲೇ ಪೊಲೀಸ್ ಆರೋಗ್ಯ ಚಿಕಿತ್ಸಾ ಘಟಕ ಸ್ಥಾಪಿಸಲಾಗುವುದು ಎಂದು ಭರವಸೆ ನೀಡಿದರು. ಜಿಲ್ಲಾ ಹೆಚ್ಚುವರಿ ಪೊಲೀಸ್ ಹೆಚ್ಚುವರಿ ಅಧಿಕಾರಿ ರಶ್ಮಿ ಇದ್ದರು.

ಉಪನ್ಯಾಸಕರಿಗೆ ಸನ್ಮಾನ...
ಹಾಸನದ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದಲ್ಲಿ ಇತ್ತೀಚೆಗೆ ನಡೆದ ಗುರು ತೋರಿದ ದಾರಿ ತಿಂಗಳ ಮಾಮನ ತೇರು ಹುಣ್ಣಿಮೆ ಕಾರ್ಯಕ್ರಮದ ಪ್ರಾಯೋಜಕ ಡಾ. ಹೇಮಲತಾ ಸುರೇಶ್ ಮತ್ತು ವಿಶೇಷ ಉಪನ್ಯಾಸ ನೀಡಿದ ಸಾಹಿತಿ ಚಟ್ನಳ್ಳಿ ಮಹೇಶ್ ಅವರನ್ನು ಶ್ರೀಮಠದ ವತಿಯಿಂದ ಸನ್ಮಾನಿಸಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement