ಚೆಕ್‌ಪೋಸ್ಟ್‌ನಿಂದ ಅರಣ್ಯ ಸಿಬ್ಬಂದಿ ಅಪಹರಣ
ಹನೂರು: ಮಲೆ ಮಹದೇಶ್ವರ ವನ್ಯಧಾಮ ಗಡಿ ಭಾಗದ ಪಾಲಾರ್ ಚೆಕ್‌ಪೋಸ್ಟ್‌ನಿಂದ ಇಬ್ಬರು ಅರಣ್ಯ ಇಲಾಖೆ ಸಿಬ್ಬಂದಿಯ ಅಪಹರಿಸಲಾಗಿದೆ ಎಂದು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ವಾಸುದೇವಮೂರ್ತಿ ದೂರು ನೀಡಿದ್ದಾರೆ.
ಚೆಕ್‌ಪೋಸ್ಟ್‌ನಲ್ಲಿ ಸಿಬ್ಬಂದಿ ಜತೆ ತಾವು ತಪಾಸಣೆ ನಡೆಸುತ್ತಿದ್ದಾಗ ಶುಕ್ರವಾರ ಮಧ್ಯಾಹ್ನ 1.30ರ ಸಂದರ್ಭದಲ್ಲಿ ತಮಿಳುನಾಡಿನ ಬೈಕ್ ಸವಾರರು ಆಗಮಿಸಿದ್ದಾರೆ. ಗೇಟ್ ಹಾಕುವ ವೇಳೆ ಬೈಕ್ ಸವಾರರಿಗೆ ತಾಗಿದೆ. ಇದರಿಂದ ಅವರು ಗಲಾಟೆ ಮಾಡಿದ್ದು, ಸಿಬ್ಬಂದಿ ಜತೆ ಮಾತಿನ ಚಕಮಕಿ ನಡೆದಿದೆ. ಆಗ ಹಿಂದಿನಿಂದ ಬಂದ ತಮಿಳುನಾಡಿನ ಟೆಂಪೋದಲ್ಲಿದ್ದ ತಮಿಳರು ಕೆಳಗಿಳಿದು ಜಗಳ ಮಾಡಿದ್ದಾರೆ. ವಿಕೋಪಕ್ಕೆ ತಿರುಗಿ ಅರಣ್ಯ ರಕ್ಷಕ ರಕ್ಷಿತ್ ಮತ್ತು ಸಹಾಯಕ ನಂದೀಶ್‌ರನ್ನು ಟೆಂಪೋದಲ್ಲಿ ಎಳೆದೊಯ್ದಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಮುತ್ತತ್ತಿಯಲ್ಲಿ ಇಬ್ಬರು ನೀರುಪಾಲು
ಹಲಗೂರು: ಇಲ್ಲಿಗೆ ಸಮೀಪದ ಮುತ್ತತ್ತಿಯ ಕಾವೇರಿ ನದಿಯಲ್ಲಿ ಈಜಲು ಹೋಗಿ ಲೋಕೇಶ (28), ಪ್ರದೀಪ(24) ಮೃತರಾದರು. ಇವರು ಬೆಂಗಳೂರಿನ ಮಲ್ಲಸಂದ್ರದವರು. ಲೋಕೇಶ ಹಾಲಿನ ವ್ಯಾಪಾರ ಮಾಡುತ್ತಿದ್ದು, ಪ್ರದೀಪ್ ಗಾರ್ಮೆಂಟ್ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ. ಗುರುವಾರ 4 ಸ್ನೇಹಿತರು 2 ಬೈಕ್‌ನಲ್ಲಿ ಮುತ್ತತ್ತಿಗೆ ಬಂದಿದ್ದರು.