ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಎಂಇಎಸ್ ಪುಂಡಾಟಿಕೆ, ಅತ್ಯಾಚಾರ ಖಂಡಿಸಿ ಕರವೇ ಪ್ರತಿಭಟನೆ

Srinivasa Murthy VN
Updated On : 2 Aug 2014, 10:30 am

ಅರಸೀಕೆರೆ: ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಒಂದೆಡೆ ಮಹಿಳೆಯರು ಮಕ್ಕಳ ಮೇಲೆ ಅತ್ಯಾಚಾರ ಪ್ರಕರಣಗಳು ನಡೆಯುತ್ತಿದ್ದರೆ ರಾಜ್ಯದ ಗಡಿ ಭಾಗದಲ್ಲಿ ಎಂಇಎಸ್ ಪುಂಡಾಟಿಕೆಗೆ ಕಡಿವಾಣ ಹಾಕುವಲ್ಲಿ ವಿಫಲಲವಾಗಿದೆ. ರಾಜ್ಯದಲ್ಲಿ ಚುನಾಯಿತ ಸರ್ಕಾರ ಅಧಿಕಾರದಲ್ಲಿದಿಯೋ ಇಲ್ಲವೋ ಎಂಬಂತಾಗಿದೆ ಎಂದು ಶನಿವಾರ ತಾಲೂಕು ಕರವೇ ಅಧ್ಯಕ್ಷ ಹೇಮಂತ್ ಕುಮಾರ್ ಆಕ್ರೋಶ ವ್ಯಕ್ತಪಡಿಸಿದರು.
ಉಲ್ಲಂಘನೆ: ಬೆಳಗಾವಿಯಲ್ಲಿ ಎಂಇಎಸ್ ಅವರ ಪುಂಡಾಟಿಕೆ ರಾಜ್ಯದಲ್ಲಿ ಮಹಿಳೆಯರು ಮತ್ತು ಅಪ್ರಾಪ್ತ ಬಾಲಕಿಯರ ಮೇಲೆ ನಡೆಯುತ್ತಿರುವ ಅತ್ಯಾಚಾರ ಹಾಗೂ ಲೈಂಗಿಕ ದೌರ್ಜನ್ಯ ಖಂಡಿಸಿ, ತಾಲೂಕಿನ ಗಂಡಸಿ ಹ್ಯಾಂಡ್‌ಪೋಸ್ಟ್ ಬಳಿ ಕರವೇ ಕಾರ್ಯಕರ್ತರು ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದರು. ಎಂಇಎಸ್ ಪುಂಡಾಟಿಕೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತ್ತಿದ್ದರೂ, ಅಂತಹ ಪುಂಡರ ವಿರುದ್ಧ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳುವಲ್ಲಿ ವಿಫಲವಾಗಿದೆ ಎಂದು ಟೀಕಿಸಿದರು.
ಕಠಿಣ ಶಿಕ್ಷೆ ವಿಧಿಸಿ: ಇದಕ್ಕೂ ಮುನ್ನ ಪ್ರತಿಭಟನಕಾರರು ಎಂಇಎಸ್‌ನ ಪುಂಡರು ಹಾಗೂ ಶಾಸಕ ಸಾಂಬಾಜಿ ಪಾಟೀಲ್ ವಿರುದ್ಧ ಘೋಷಣೆಯನ್ನು ಕೂಗಿದರು.
ಪ್ರತಿಭಟನೆಯಲ್ಲಿ ತಾಲೂಕು ಕರವೇ ಉಪಾಧ್ಯಕ್ಷ ಗಂಗಾಧರ ನಾಯಕ್, ನಗರಾಧ್ಯಕ್ಷ ಕಿರಣ್ ಕುಮಾರ್, ಮುಖಂಡರಾದ ಮೋಹನ್ ಕುಮಾರ್, ಯತೀಶ್, ರಘು, ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement