ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ನೂತನ ಬಸ್ ಸಂಚಾರಕ್ಕೆ ಚಾಲನೆ

Srinivasa Murthy VN
Updated On : 3 Aug 2014, 9:47 am

ನುಗ್ಗೇಹಳ್ಳಿ: ಇಲ್ಲಿಯ ಇತಿಹಾಸ ಪ್ರಸಿದ್ದ ಶ್ರೀ ಲಕ್ಷ್ಮಿನರಸಿಂಹಸ್ವಾಮಿ ದೇವಾಲಯಕ್ಕೆ ಬೆಂಗಳೂರಿನಿಂದ ಬಂದು ಹೋಗುವ ಭಕ್ತರ ಸಂಚಾರಕ್ಕೆ ಅನುಕೂಲ ಕಲ್ಪಿಸಲು ನೂತನ ಕೆಎಸ್‌ಆರ್‌ಟಿಸಿ ಬಸ್‌ಗೆ  ಶಾಸಕ ಸಿ.ಎನ್. ಬಾಲಕೃಷ್ಣ  ಇತ್ತೀಚೆಗೆ ಚಾಲನೆ ನೀಡಿದರು. ನಂತರ ಶಾಸಕರು ಮಾತನಾಡುತ್ತಾ, ಸಂಜೆ 6 ಕ್ಕೆ ನುಗ್ಗೇಹಳ್ಳಿಯಿಂದ ಅಕ್ಕನಹಳ್ಳಿ ಹಿರಿಸಾವೆ ಮಾರ್ಗವಾಗಿ ಬೆಂಗಳೂರಿಗೆ ಹೋಗಿ ಬೆಳಿಗ್ಗೆ ಇದೇ ಮಾರ್ಗವಾಗಿ 10 ಕ್ಕೆ ನುಗ್ಗೇಹಳ್ಳಿ ಯಿಂದ ಹೊನ್ನಮಾರನಹಳ್ಳಿ ಮಾವಿನಹಳ್ಳಿ ಸಿದ್ದರಹಟ್ಟಿ ವಡ್ಡರಹಟ್ಟಿ ಬೂವನಹಳ್ಳಿ ಬಾಗೂರು ಮೂಡನಹಳ್ಳಿ ಮಾರ್ಗವಾಗಿ ಹಾಸನಕ್ಕೆ ಹೋಗುತ್ತದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ವಿಭಾಗಿಯ ಸಂಚಾರಿ ಅಧಿಕಾರಿ ಶ್ರೀನಿವಾಸ್, ಚ.ರಾ.ಪಟ್ಟಣ ಡಿಪೋ ವ್ಯವಸ್ಥಾಪಕ ವೆಂಕಟೇಶಮೂರ್ತಿ, ಕೆಂಪನಂಜೆಗೌಡ, ಬಸವಾಲಿಂಗಪ್ಪ, ಗುಂಡಣ್ಣ, ಕುಮಾರ್, ತೊಪೇಗೌಡ, ಕುಳ್ಳೇಗೌಡ, ರಂಗಸ್ವಾಮಿ, ವಿಠಲ, ಕೃಷ್ಣೇಗೌಡ ಇದ್ದರು.

ಸೌಲಭ್ಯದ ಸದ್ಬಳಕೆಯಾಗಲಿ
ಹಾಸನ: ರೈತರು ತಮ್ಮಲ್ಲೆ ಇರುವ ಎಲ್ಲಾ ಸೌಲಭ್ಯಗಳನ್ನು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳುವುದರಿಂದ ತಮ್ಮ ಕನಸುಗಳನ್ನು ನನಸಾಗಿಸಬಹುದು ಎಂದು ಹಾಸನದ ಆಕಾಶವಾಣಿಯ ಕೃಷಿರಂಗ ವಿಭಾಗದ ಮುಖ್ಯಸ್ಥ ಡಾ.ವಿಜಯ್ ಅಂಗಡಿ ತಿಳಿಸಿದರು. ತಾಲೂಕಿನ ಕಟ್ಟಾಯ ಹೋಬಳಿಯ ಮಲ್ಲಿಗೆವಾಳುವಿನ ಗ್ರಾಮದಲ್ಲಿ ಇತ್ತೀಚೆಗೆ  ನಡೆದ ಗ್ರಾಮೀಣ ಕೃಷಿ ಕಾರ್ಯಾನುಭವ ಶಿಬಿರದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕಾರ್ಯಕ್ರಮದಲ್ಲಿ ಕೃಷಿ ಕಾಲೇಜಿನ ಡಾ.ಮಂಜುನಾಥ, ಜಿಪಂ ಸದಸ್ಯ ಎಂ.ಕೆ. ದ್ಯಾವಪ್ಪ, ಮುಖಂಡರು ಮತ್ತು ಗ್ರಾಮಸ್ಥರು ಇದ್ದರು. ಗ್ರಾಮದ ಡಾ. ಅಂಬೇಡ್ಕರ್ ಯುವಕರ ಸಂಘದ ಸಾವಿತ್ರಮ್ಮ ಮತ್ತು ತಂಡದವರಿಂದ ಜಾನಪದ ಗೀತೆ ಮತ್ತು ಕೋಲಾಟ ಪ್ರದರ್ಶನ ನಡೆಯಿತು.

ಸವಿತಾ ಸಮಾಜದ ನೂತನ ಪದಾಧಿಕಾರಿಗಳು
ಸಕಲೇಶಪುರ: ತಾಲೂಕು ಸವಿತಾ ಸಮಾಜದ ಅಧ್ಯಕ್ಷರಾಗಿ ನಾಗರಾಜು ಇತ್ತೀಚೆಗೆ ಆಯ್ಕೆ ಯಾಗಿದ್ದಾರೆ. ಗೌರವಾಧ್ಯಕ್ಷರಾಗಿ ಪಳನಿ, ಉಪಾ ಧ್ಯಕ್ಷರಾಗಿ ಕೆ.ಟಿ.ರಾಮು, ಪ್ರಧಾನ ಕಾರ್ಯದದರ್ಶಿಯಾಗಿ ಶಾಮು ಎ.ಎಸ್.ಸೋಮ ಶೇಖರ್, ಖಜಾಂಚಿಯಾಗಿ ಜಗಣ್ಣ, ಸಹ ಕಾರ್ಯದರ್ಶಿ ಶಬರೀಶ್, ಸಂಘಟನಾ ಕಾರ್ಯದರ್ಶಿ ಶಾಮು, ತಾಲೂಕು ಪ್ರತಿನಿಧಿಯಾಗಿ ಯೋಗೇಶ್ (ವಿನು), ನಿದೇಶಕರಾಗಿ ಸಿ ಆನಂದ್, ಕುಮಾರ್ ಹೆತ್ತೂರು, ಚೆಲು ಮೂರ್ತಿ, ಸುನಿಲ್ ಶುಕ್ರವಾರಸಂತೆ, ವೆಂಕಟೇಶ್ ಚಂಗಡಹಳ್ಳಿ, ಸಂಚಾಲಕರಾಗಿ ಕೃಷ್ಣ ಎಸ್.ಎಂ. ರಾಮು, ರಾಮಚಂದ್ರು, ಪ್ರಸಾದ್ ಹಾನುಬಾಳ್, ಸಲಹೆಗಾರನಾಗಿ ದೇವರಾಜ್, ಮತ್ತು ಗಂಗಾಧರ್ ಇವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.

ಇಂದು ಲೋಕಾಯುಕ್ತ ಎಸ್ಪಿ ಪ್ರವಾಸ
ಹಾಸನ: ಕರ್ನಾಟಕ ಲೋಕಾಯುಕ್ತ ಹಾಸನ ವಿಭಾಗದ ಎಸ್ಪಿ ಡಾ. ಸಿ.ಬಿ. ವೇದಮೂರ್ತಿ ಹಾಗೂ ಸಿಬ್ಬಂದಿ ಆ.4 ರಂದು  ಸಕಲೇಶಪುರ ತಾಲೂಕು ಕೇಂದ್ರ ಹಾಗೂ ಆಲೂರು ತಾಲೂಕು ಕೇಂದ್ರದಲ್ಲಿರುವ ಸರ್ಕಾರಿ ಕಚೇರಿಗಳಿಗೆ ಭೇಟಿ ನೀಡಲಿದ್ದಾರೆ. ಈ ಸಂದರ್ಭದಲ್ಲಿ ಅವರಿಗೆ ಸಾರ್ವಜನಿಕರು ತಮ್ಮ
ಅಹವಾಲುಗಳುನ್ನು ಸಲ್ಲಿಸಬಹುದಾಗಿದೆ ಎಂದು  ತಿಳಿಸಿದ್ದಾರೆ.

ಆಲೂಗೆಡ್ಡೆ-ಶುಂಠಿ ಔಷಧೋಪಚಾರಕ್ಕೆ ಸಲಹೆ
ಹಾಸನ: ತೇವಾಂಶದ ಕೊರತೆಯಿಂದಾಗಿ ಕರಿಕಡ್ಡಿ ರೋಗಕ್ಕೆ ತುತ್ತಾಗಿರುವ ಆಲೂಗೆಡ್ಡೆ ಬೆಳೆಗೆ ಸೂಕ್ತವಾದ ಉಪಚಾರವನ್ನು ಸಕಾಲದಲ್ಲಿ ಮಾಡುವುದರಿಂದ ರೈತರು ಸಂಕಟದಿಂದ ಪಾರಾಗಬಹುದು, ತಾಲೂಕಿನಲ್ಲಿ ಆಲೂಗೆಡ್ಡೆ ಮತ್ತು ಶುಂಠಿ ಬೆಳೆ ಕುರಿತು ಗಾಬರಿಯಾಗುವಂತಹ ಸ್ಥಿತಿ ಎದುರಾಗಿಲ್ಲ ಎಂದು ಅರಕಲಗೂಡು ತಾಲೂಕು ತೋಟಗಾರಿಕಾ ತಜ್ಞ ಡಾ. ರಾವುಲ್ ಹೇಳಿದ್ದಾರೆ.  ತಾಲೂಕಿನ ಪೊಟ್ಯಾಟೋ ಕ್ಲಬ್ ರೈತರಿಗೆ ಮಾಹಿತಿ ಮತ್ತು ಪ್ರಾತ್ಯಕ್ಷಿಕೆ ನೀಡುವ ಕಾರ್ಯಕ್ರಮವನ್ನು ಉಲ್ಲಂಗಾಲ ಗ್ರಾಮದಲ್ಲಿ ಏರ್ಪಡಿಸಿದ್ದ ಸಂದರ್ಭದಲ್ಲಿ ರೈತರೊಂದಿಗೆ ಸಂವಾದ ನಡೆಸಿದ ಅವರು, ಕೀಟಬಾಧೆಗೆ ಮತ್ತು ಇತರೆ ರೋಗದ ಲಕ್ಷಣಗಳಿಗೆ ಸೂಕ್ತ ಉಪಚಾರದ ಔಷಧಿಗಳನ್ನು ಶಿಫಾರಸು ಮಾಡಿದರು.
ಕಾಲಕಾಲಕ್ಕೆ ಮಾಹಿತಿ: ಕ್ಷೇತ್ರ ಭೇಟಿ ತಂಡದ ನೇತೃತ್ವ ವಹಿಸಿದ್ದ ಕ್ಲಬ್ ಅಧ್ಯಕ್ಷ ಎಚ್. ಯೋಗಾ ರಮೇಶ್ ಮಾತನಾಡಿ, ತಾಲೂಕಿನ ರೈತರಿಗೆ ಕಾಲಕ್ಕೆ ತಕ್ಕಂತೆ ಮಾಹಿತಿ ಹಾಗೂ ನೆರವು ನೀಡುವ ಮೂಲಕ ಕ್ಲಬ್ ಎಂದಿನಂತೆ ರೈತರ ಜತೆಗಿದೆ ಎಂದರು. ಈ ಸಂದರ್ಭದಲ್ಲಿ ಕ್ಲಬ್ ಮುಖಂಡ ಕಳ್ಳಿಮುದ್ದನಹಳ್ಳಿ ಲೋಕೇಶ್, ಹೊನ್ನವಳ್ಳಿ ಲೋಕೇಶ್, ಬಸವರಾಜು, ಉಲ್ಲಂಗಾಲ ಹೊಂಬೇಗೌಡ ಮತ್ತಿತರರು ಇದ್ದರು.

ರಾ.ಅರ್ಹತಾ ಪರೀಕ್ಷೆಗೆ ಅರ್ಜಿ ಆಹ್ವಾನ
ಹಾಸನ: ವಿಶ್ವವಿದ್ಯಾನಿಲಯ ಧನ ಸಹಾಯ ಆಯೋಗ ಮತ್ತು ಕೌನ್ಸಿಲ್  ಆಫ್ ಸೈಂಟಿಫಿಕ್ ಮತ್ತು ಇಂಡಸ್ಟ್ರಿಯಲ್ ರಿಸರ್ಚ್ ಜಂಟಿಯಾಗಿ ಕಿರಿಯ ಸಂಶೋದನಾ ಶಿಷ್ಯವೇತನ ಮತ್ತು ಉಪನ್ಯಾಸಕರ ಹುದ್ದೆಗಳ ಅರ್ಹತೆಗೆ ರಾಷ್ಟ್ರೀಯ ಅರ್ಹತಾ ಪರೀಕ್ಷೆ ನಡೆಸಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದ್ದಾರೆ.
ಅರ್ಜಿ ಸಲ್ಲಿಸುವ  ವಿಧಾನ: www.csirhrdg.res.in  ಈ ವೆಬ್ ಸೈಟ್‌ನಲ್ಲಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಸಲು ಆ.13 ಕೊನೆ ದಿನ. ಮುದ್ರಿತ ಅರ್ಜಿ ಸಲ್ಲಿಸಲು ಆ.19 ಕೊನೆ ದಿನ. ಹೆಚ್ಚಿನ ಮಾಹಿತಿಗಾಗಿ ಉಪಮುಖ್ಯಸ್ಥರು, ವಿಶ್ವವಿದ್ಯಾನಿಲಯ ಉದ್ಯೋಗ ಮಾಹಿತಿ ಮತ್ತು ಮಾರ್ಗದರ್ಶನ ಕೇಂದ್ರ ಗ್ರಂಥಾಲಯ ಕಟ್ಟಡ , ಮಾನಸಗಂಗೋತ್ರಿ ಮೈಸೂರು-6 ದೂರವಾಣಿ  0821-2516844 ಅಥವಾ 9449686641

ರೈಲು ಸಂಚಾರ ಪುನರಾರಂಭ
ಸಕಲೇಶಪುರ: ಸಕಲೇಶಪುರ ತಾಲೂಕು ವ್ಯಾಪ್ತಿಯಲ್ಲಿ ಶನಿವಾರ ಭಾರಿ ಮಳೆ ಸುರಿದ ಪರಿಣಾಮ ಎಡಕುಮರಿ ಬಳಿ ಮಣ್ಣು ರೈಲ್ವೆ ಹಳಿ ಮೇಲೆ ಕುಸಿದು ರೈಲು ಸಂಚಾರಕ್ಕೆ
ಅಡ್ಡಿ ಉಂಟು ಮಾಡಿದ್ದನ್ನು ರೈಲ್ವೆ ಇಲಾಖೆಯು ಸರಿಪಡಿಸಿದ್ದು, ಭಾನುವಾರ ರೈಲು ಸಂಚಾರ ಪ್ರಾರಂಭಿಸಲಾಗಿದೆ.  ಶಿರವಾಗಿಲು ಮತ್ತು ಅರೆಬೆಟ್ಟ ಮಧ್ಯದಲ್ಲಿ ಗುಡ್ಡವೊಂದು ರೈಲ್ವೆ ಹಳಿ ಮೇಲೆ ಕುಸಿದು ಬಿದ್ದ ಪರಿಣಾಮ ರೈಲ್ವೆ ಸಂಚಾರವನ್ನು ನಿಲ್ಲಿಸಲಾಗಿತ್ತು. ವಿಷಯ ತಿಳಿದ ನಂತರ ಈ ಮಾರ್ಗವಾಗಿ ರೈಲು ಸಂಚಾರವನ್ನು ನಿಲ್ಲಿಸಿತ್ತು. ಹಳಿಯ ಮೇಲೆ ಬಿದ್ದಿದ್ದ ಮಣ್ಣನ್ನು ಭಾನುವಾರ ತೆರೆವುಗೊಳಿಸಿದ್ದು, ರೈಲು ಸಂಚಾರ ಪ್ರಾರಂಭವಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement