ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಶಿಕ್ಷಕರು ವಿದ್ಯಾರ್ಥಿಗಳ ಜೊತೆ ಸೌಜನ್ಯದಿಂದ ವರ್ತಿಸಲಿ: ನ್ಯಾ. ಪ್ರಸಾದ್

Srinivasa Murthy VN
Updated On : 3 Aug 2014, 9:46 am

ಚನ್ನರಾಯಪಟ್ಟಣ: ಸಮಾಜದಲ್ಲಿ ಶಿಕ್ಷಕರಿಗೆ ಉತ್ತಮ ಗೌರವವಿದ್ದು, ಅದಕ್ಕೆ ಎಂದಿಗೂ ಧಕ್ಕೆ ಬಾರದಂತೆ ನೋಡಿಕೊಳ್ಳುವುದು ಶಿಕ್ಷಕರ ಜವಬ್ದಾರಿಯಾಗಿದೆ ಎಂದು ಪಟ್ಟಣದ  ಶೀಘ್ರಗತಿ ನ್ಯಾಯಾಲಯದ ನ್ಯಾಯಾಧೀಶರಾದ ಶ್ಯಾಮ್‌ಪ್ರಸಾದ್ ತಿಳಿಸಿದರು.
 ಪಟ್ಟಣದ ಗುರುಭವನದಲ್ಲಿ ಶಿಕ್ಷಕರಿಗಾಗಿ ಏರ್ಪಡಿಸಿದ್ದ ಕಾನೂನು ಅರಿವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕೆಲ ಶಿಕ್ಷಕರು ತಮ್ಮ ಜವಬ್ದಾರಿಯನ್ನು ಮರೆತು ವಿದ್ಯಾರ್ಥಿಗಳೊಂದಿಂಗೆ ಅನುಚಿತವಾಗಿ ವರ್ತಿಸುತ್ತಿರುವುದರಿಂದ ಶಿಕ್ಷಕ ವೃಂದಕ್ಕೆ ಧಕ್ಕೆ ತರುವ ಕೆಲಸ ಮಾಡುತ್ತಿದ್ದಾರೆ ಎಂದು ವಿಷಾದಿಸಿದರು.
ಪ್ರೀತಿಯಿಂದ ಪಾಠ ಮಾಡಿ: ಹಿಂದೆ ವಿದ್ಯಾರ್ಥಿಗಳಿಗೆ ಶಿಕ್ಷೆ ನೀಡಿ ಶಿಕ್ಷಣ ನೀಡಲಾಗುತ್ತಿತ್ತು, ಇಂದು ಮಕ್ಕಳಿಗೆ ಪ್ರೀತಿಯಿಂದ ಪಾಠ ಕಲಿಸುವ ಜವಬ್ದಾರಿಯಿದ್ದು, ಇದರ ನಡುವೆಯೂ ಶಿಕ್ಷಕರು ಉತ್ತಮ ಸೇವೆ ನೀಡಬೇಕಾಗಿದೆ ಎಂದರು.
 ಸರ್ಕಾರಿ ಹುದ್ದೆಯಲ್ಲಿದ್ದು ಅಪಾರ ಗೌರವಕ್ಕೆ ಪಾತ್ರರಾಗುತ್ತಿರುವ ಶಿಕ್ಷಕರು ಅನ್ಯ ಕಾರಣಗಳನ್ನು ತೋರಿ ಬಡ್ಡಿ ದಂದೆ ನಡೆಸುತ್ತಿರುವವರಿಗೆ ಖಾಲಿ ಚೆಕ್‌ಗಳನ್ನು ನೀಡಿ ಸಾಲ ಪಡೆದು ಅದನ್ನು ತೀರಿಸಲಾಗದೆ ನ್ಯಾಯಾಲಯದ ಮೆಟ್ಟಲೇರುತ್ತಿರುವುದರಿಂದ ಅವರು ಶಿಕ್ಷೆಗೆ ಗುರಿಯಾಗಿ ತಮ್ಮ ಸೇವೆಗೆ ಕಂಟಕ ತಂದುಕೊಳ್ಳುತ್ತಿದ್ದಾರೆ ಎಂದರು.
ಅಧ್ಯಯನ ಅಗತ್ಯ: ವಕೀಲರು ಹಾಗೂ ನ್ಯಾಯಾಧೀಶರಂತೆ ಶಿಕ್ಷಕರೂ ಕೂಡ ಪ್ರತಿನಿತ್ಯ ವ್ಯಾಸಂಗ ಮಾಡುವುದು ಅತ್ಯಗತ್ಯವಾಗಿದ್ದು, ಇದನ್ನು ಯಾರು ಮುಂದುವರಿಸುತ್ತಾರೆ ಅವರು ಉತ್ತಮ ಶಿಕ್ಷಕರಾಗಿ ಮಕ್ಕಳಿಗೆ ಒಳ್ಳೆಯ ವಿದ್ಯೆ ನೀಡುತ್ತಾರೆ ಎಂದು ತಿಳಿಸಿದರು.
 ತಹಸೀಲ್ದಾರ್ ಕೆ.ಕೃಷ್ಣ, ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಕೆ ಪಾಂಡು, ವಕಿಲರ ಸಂಘದ ಅಧ್ಯಕ್ಷ ಶ್ರೀನಿವಾಸ್, ವಕೀಲ ಸುಂದರ ರಾಜು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement