ಹಾಸನ

ಅವ್ಯವಸ್ಥೆ ಆಗರ ಮೊರಾರ್ಜಿ ವಸತಿ ಶಾಲೆ

ಕ.ಪ್ರ.ವಾರ್ತೆ, ಬೇಲೂರು, ಆ. 6
ಬೇಲೂರು ಪಟ್ಟಣದ ಹೊರ ವಲಯದ ಹನಮಂತನಗರದಲ್ಲಿ ಇರುವ ಮೊರಾರ್ಜಿ ವಸತಿ ಶಾಲೆಗೆ ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಭಾಗ್ಯ ಗೋವಿಂದಗೌಡ ಮತ್ತು ಜಿಲ್ಲಾ ಪಂಚಾಯ್ತಿ ಸದಸ್ಯರಾದ ಬಿ.ಡಿ. ಚಂದ್ರೇಗೌಡ, ಜಿ.ಟಿ.ಇಂದಿರಾ ಧರ್ಮಪ್ಪ ಮತ್ತು ತಾಪಂ  ಅಧ್ಯಕ್ಷ ಅಬ್ದುಲ್ ಸುಭಾನ್ ಭೇಟಿ ನೀಡಿ ಸಮಸ್ಯೆಗಳನ್ನು ಆಲಿಸಿ ದರು.
 ಅಡುಗೆ ಮನೆ ಪರಿಶೀಲಿದ ಅಧ್ಯಕ್ಷರು ಅಲ್ಲಿನ ಅವ್ಯವಸ್ಥೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಟೌನ್ಗೆ ಹೊಗಿದ್ದರು. ಇದರಿಂದ ಕೋಪಗೊಂಡ ಅಧ್ಯಕ್ಷರು ದೂರವಾಣಿ ಮೂಲಕ ಆತನನ್ನು ಕರೆಸಿ ಛೀಮಾರಿ ಹಾಕಿದರು.
ವಾರ್ಡನ್ಗೆ ತರಾಟೆ: ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಪಂಚಾಯ್ತಿ  ಸದಸ್ಯ ಬಿ.ಡಿ. ಚಂದ್ರೇಗೌಡ, ರಾತ್ರಿ ವೇಳೆ ಮಕ್ಕಳಿಗೆ ಊಟ ಮತ್ತು ಇನ್ನಿತರ ಸೌಲಭ್ಯವನ್ನು ನೋಡದೆ ಟೌನ್ಗೆ ಏಕೆ ಹೋಗಬೇಕು, ಮಕ್ಕಳಿಗೆ ಮಣ್ಣು ಮಿಶ್ರಿತ ಅಲೂಗಡ್ಡೆ ಮತ್ತು ಹರಕಲು ಚಾಪೆ ನೀಡಿರುವ ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡರು.  ವಸತಿ ಶಾಲೆಯಲ್ಲಿ ಬಯೋವುಟ್ರಿಕ್ ಹಾಜರಾತಿ ಯಂತ್ರ ಬಳಕೆ ಮಾಡುತ್ತಿಲ್ಲ. ಇಂದು 3 ಜನರು ಗೈರು ಹಾಜರಿಯಾಗಿದ್ದಾರೆ. ಈ ಬಗ್ಗೆ ಅಧಿಕಾರಿಗಳಲ್ಲಿ ಚೆರ್ಚೆ ಮಾಡುವುದಾಗಿ ತಿಳಿಸಿದರು.
ಸೊಳ್ಳೆಗಳ ತಾಣ: ಜಿಲ್ಲಾ ಪಂಚಾಯ್ತಿ ಸದಸ್ಯೆ ಜಿ.ಟಿ. ಇಂದಿರಾ ಧರ್ಮಪ್ಪ ಮಾತನಾಡಿ, ಹೆಣ್ಣು ಮಕ್ಕಳಿಗೆ ಬೀಸಿ ನೀರು ನೀಡಿದೆ ಮಕ್ಕಳ ಆರೋಗ್ಯದಲ್ಲಿ ಏರು ಪೇರು ಕಂಡಿದೆ. ವಸತಿ ನಿಯಲಗಳ ಕಿಟಕಿ ಗಾಜು ಒಡೆದು ಸೊಳ್ಳೆಗಳ ತಾಣವಾಗಿದೆ. ಅಡುಗೆ ಮಾಡಿದ ಆಹಾರವನ್ನು ತೆರದು ಇಟ್ಟ ಪರಿಣಾಮ ಆಹಾರದಲ್ಲಿ ಹುಳು ತುಂಬಿವೆ ಎಂದ ಎಂದು ವಾರ್ಡನ್ಗೆ ತರಾಟೆಗೆ ತೆಗೆದುಕೊಂಡರು.
 ತಾಲೂಕು ಪಂಚಾಯ್ತಿ ಅಧ್ಯಕ್ಷ ಅಬ್ದುಲ್ ಸುಭಾನ್ ಮಾತನಾಡಿ, ತಾಲೂಕಿನ ಬಹುತೇಕ ವಸತಿ ನಿಯಲಗಳ ಪರಿಸ್ಥಿತಿ ಹೇಳತೀರದಾಗಿದೆ. ಮೊರಾರ್ಜಿ ವಸತಿ ನಿಲಯ ಕಟ್ಟಿ ವರ್ಷಗಳೇ ಕಳೆದರು ಉದ್ಘಾಟನೆಯಾಗಿಲ್ಲ. ಕಟ್ಟಡಗಳು ಶಿಥಿಲ ಸ್ಥಿತಿಯಲ್ಲಿದೆ. ಈ ಬಗ್ಗೆ ಗುತ್ತಿಗೆದಾರನ ವಿರುದ್ಧ ಸಮಗ್ರ ತನಿಖೆ ಕೈಗೊಳ್ಳಬೇಕು ಎಂದರು.
ಕಾಳಜಿ ವಹಿಸಿ: ಪ್ರತಿ ಮಕ್ಕಳಿಗೆ ಬಿಸಿ ನೀರು ನೀಡಬೇಕು, ಅಯೋಡಿನ್ ಬಳಕೆ ಮಾಡಬೇಕು. ಮಕ್ಕಳಿಗೆ ಹಾಸಿಗೆ ನೀಡುವ ಬಗ್ಗೆ ವಿಷಯ ಪ್ರಸ್ತಾಪ ಮಾಡಲಾಗುವುದು. ಅಧಿಕಾರಿಗಳು ಇಲ್ಲಿಯ ಮಕ್ಕಳ ಬಗ್ಗೆ ಕಾಳಜಿ ವಹಿಸುವಂತೆ ಜಿಪಂ ಅಧ್ಯಕ್ಷೆ ತಾಕೀತು ಮಾಡಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್; ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

SCROLL FOR NEXT