ವಿಜ್ಞಾನ ಲೇಖಕರ ತರಬೇತಿ ಶಿಬಿರ
ಹಾಸನ: ಕರ್ನಾಟಕ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಸಹಯೋಗದಲ್ಲಿ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ರಾಜ್ಯದ ಉದಯೋನ್ಮುಖ ಕನ್ನಡ ವಿಜ್ಞಾನ ಬರಹಗಾರರಿಗೆ, ಕಾರ್ಯನಿರತ ವಿಜ್ಞಾನ ಪತ್ರಿಕೋದ್ಯಮಿಗಳು, ವರದಿಗಾರರಿಗೆ ಜನಪ್ರಿಯ ವಿಜ್ಞಾನ ಬರವಣಿಗೆಯ ತರಬೇತಿ ಶಿಬಿರವನ್ನು ಹಮ್ಮಿಕೊಂಡಿದೆ.
ಶಿಬಿರದಲ್ಲಿ ಬಾಗವಹಿಸುವವರು ವಿಜ್ಞಾನ ಸಂವಹದಲ್ಲಿ ವಿಶೇಷ ಆಸಕ್ತಿ ಹೊಂದಿದ್ದು, ವ್ಯಕ್ತಿ ವಿವರದೊಂದಿಗೆ ಈಗಾಗಲೇ ಒಂದು ಸ್ವರಚಿತ ಕನ್ನಡ ವೈಜ್ಞಾನಿಕ ಲೇಖನದ ಪ್ರತಿಯೊಂದಿಗೆ ಅರ್ಜಿಯನ್ನು ಡಾ. ವಸುಂದರಾ ಭೂಪತಿ, ಗೌರವ ಕಾರ್ಯದರ್ಶಿ, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು, ವಿಜ್ಞಾನ ಭವನ, ನಂ.24/2, 21ನೇ ಮುಖ್ಯ ರಸ್ತೆ, ಬನಶಂಕರಿ 2ನೇ ಹಂತ, ಬೆಂಗಳೂರು 560070 ಈ ವಿಳಾಸಕ್ಕೆ ತಲುಪುವಂತೆ ಫೆಬ್ರವರಿ 20ರೊಳಗೆ ಸಲ್ಲಿಸಬೇಕು. ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಸಂಘಟಿಸಿದ ಲೇಖಕರ ಶಿಬಿರಗಳಲ್ಲಿ ಈಗಾಗಲೇ ಭಾಗವಹಿಸಿದರು ಅರ್ಜಿ ಸಲ್ಲಿಸುವಂತಿಲ್ಲ. ಹೆಚ್ಚಿನ ಮಾಹಿತಿಗೆ ದೂ.ಸಂ. 080-26718938-26718939, 26718962 ಫ್ಯಾಕ್ಸ್ 080-26718959, ಡಾ. ಸಂಗಮೇಶ್ ಎಸ್. ಹಿರೇಮಠ, ಸಂಯೋಜಕರು, 29ನೇ ಅಖಿಲ ಕರ್ನಾಟಕ ಉದಯೋನ್ಮುಖ ಜನಪ್ರಿಯ ಕನ್ನಡ ವಿಜ್ಞಾನ ಲೇಖಕರ ತರಬೇತಿ ಶಿಬಿರ, ಮೊಬೈಲ್ 9448219830 ಅಥವಾ ಗಿರೀಶ್ ಕಡ್ಲೇವಾಡ್ ಖಜಾಂಚಿ ಮೊಬೈಲ್ 9448830454 ಸಂಪರ್ಕಿಸುವುದು.