ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಆಟೋ ಚಾಲಕನಿಗೆ ನಿಂದನೆ: ಪ್ರತಿಭಟನೆ

Srinivasa Murthy VN
Updated On : 10 Feb 2014, 11:50 am

ಬೇಲೂರು: ಆಟೊ ಚಾಲಕನೊಬ್ಬನಿಗೆ ಬೇಲೂರು ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಅಶ್ವಿನ್ ಕುಮಾರ್ ಅವಾಚ್ಯ ಶಬ್ದಗಳಿಂದ ನಿಂದಿಸಿದರೆಂದು ಆರೋಪಿಸಿ ಹೊಯ್ಸಳ ಆಟೋ  ಚಾಲಕರ ಮತ್ತು ಮಾಲೀಕರ ಸಂಘದ ವತಿಯಿಂದ ವೃತ್ತ ನಿರೀಕ್ಷಕರ ಕಚೇರಿ ಮುಂದೆ ಇತ್ತೀಚೆಗೆ ಪ್ರತಿಭಟನೆ ನಡೆಸಲಾಯಿತು.
ಆಟೋ ಚಾಲಕ ಮಹಮದ್ ಇಮ್ತಿಯಾಜ್ ಮತ್ತು ಸತೀಶ್ ಮಾತನಾಡಿ, ಮಧ್ಯಾಹ್ನ 1.30ರ ಸಮಯದಲ್ಲಿ ಆಟೋದಲ್ಲಿದ್ದ ಪ್ರಯಾಣಿಕರನ್ನು ಇಳಿಸುವಂತ ಸಂದರ್ಭದಲ್ಲಿ ಬೇಲೂರು ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಅಶ್ವಿನ್ ಕುಮಾರ್ ಬಂದು ಏಕಾಏಕಿ  ರು. 300 ದಂಡ ಬರೆದು ಹಣ ಕೊಡುವಂತೆ ಕೇಳಿದರು. ತಮ್ಮ ಹತ್ತಿರ ರು. 100 ಅಷ್ಟೇ ಇತ್ತು. ಆದರೆ, ಅದನ್ನು ಸ್ವೀಕರಿಸಲು ಹಿಂದೆ ಸರಿದ ಅವರು, ಅವಾಚ್ಯ ಶಬ್ದಗಳಿಂದ ನಿಂದಿಸಿ, ಪುನಃ ರು. 700 ದಂಡ ಹೆಚ್ಚಿಸಿದರು. ಅಲ್ಲದೇ, ಮತ್ತೊಬ್ಬ ಆಟೋ ಚಾಲಕ ಸತೀಶ್ ಎಂಬುವವರಿಗೂ ಸಹ ರು. 300 ದಂಡ ವಿಧಿಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿದರು ಎಂದು ಆರೋಪಿಸಿದರು.
ಈ ಸಂದರ್ಭದಲ್ಲಿ ಸ್ಥಳಕ್ಕೆ ಆಗಮಿಸಿದ ವೃತ್ತ ನಿರೀಕ್ಷಕ ಗಣೇಶ್, ಆಟೋ ಚಾಲಕರ ಮನವೊಲಿಸುವಲ್ಲಿ ಯಶಸ್ವಿಯಾದರು.
ನಂತರ ಮಾತನಾಡಿದ ವೃತ್ತ ನಿರೀಕ್ಷಕ ಗಣೇಶ್, ಆಟೋ ಚಾಲಕರು ಕಡ್ಡಾಯವಾಗಿ ಸಮವಸ್ತ್ರ, ವಾಹನ ಚಾಲನ ಪರವಾನಗಿ, ವಾಹನದ ಪರ್ಮಿಟ್, ವಾಹನದ ಇನ್ಸುರೆನ್ಸ್  ಹಾಗೂ ಸರಿಯಾದ ದಾಖಲೆಗಳನ್ನಿಟ್ಟು ಕೊಂಡಲ್ಲಿ ನಿಮನ್ನು ತಪಾಸಣೆ ಸಂದರ್ಭ ತೋರಿಸಿದಲ್ಲಿ ಯಾರು ಕೇಸು ದಾಖಲಿಸುವುದಿಲ್ಲ ಹಾಗೂ ಸಾರಿಗೆ ಇಲಾಖೆ ಮತ್ತು ಪೊಲೀಸ್  ಇಲಾಖೆ ವತಿಯಿಂದ ವಾಹನ ಚಾಲನ ಪರವಾನಗಿಯನ್ನು ಪಡೆದುಕೊಳ್ಳುವುದಕ್ಕಾಗಿ ಕಾರ್ಯಕ್ರಮವನ್ನೂ ಹಮ್ಮಿಕೊಳ್ಳಲಾಗಿತ್ತು ಆದರೂ ಸಹ ಹೆಚ್ಚಿನವರು ಪರವಾನಗಿಯನ್ನು ಪಡೆದುಕೊಳ್ಳುವಲ್ಲಿ ಆಟೋ ಚಾಲಕರು ವಿಫಲರಾದ್ದಾರೆ ಎಂದರು. ಇಂದಿನ ಘಟನೆಗೆ ಕಾರಣವಾದ ವಿಚಾರವನ್ನು ಪರಿಶಿಲಿಸಲಾಗುವುದು ಎಂದು ಅವರು ತಿಳಿಸಿದರು. ಈ ಸಂದರ್ಭದಲ್ಲಿ ಆಟೋ ಮಾಲೀಕರ ಮತ್ತು ಚಾಲಕರ ಸಂಘದ ಪದಾಧಿಕಾರಿಗಳು  ಪ್ರತಿಭಟನೆಯಲ್ಲಿ ಇದ್ದರು.

ಕ್ಷಮೆ ಕೇಳಲು ಒತ್ತಾಯ
ಈ ವಿಚಾರವಾಗಿ ಆಟೊ ಚಾಲಕರ ಮತ್ತು ಮಾಲೀಕರ ಸಂಘದ ವತಿಯಿಂದ ಬೇಲೂರು  ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಅಶ್ವಿನ್ ಕುಮಾರ್ ಮತ್ತು ಚಾಲಕ ಅವಾಚ್ಯ  ಶಬ್ದಗಳಿಂದ ನಿಂದಿಸಿದರೆಂದು ಆರೋಪಿಸಿ, ಸಂಘದ ಅಧ್ಯಕ್ಷ ಲೋಕೇಶ್ (ರಾಮೇಗೌಡ) ನೇತೃತ್ವದಲ್ಲಿ ವೃತ್ತ ನಿರೀಕ್ಷಕರ ಕಚೇರಿ ಮುಂದೆ ನೂರಾರು ಆಟೋ ಚಾಲಕರು ದಿಢೀರ್ ಪ್ರತಿಭಟನೆ ನಡೆಸಿ ಸಬ್ ಇನ್ಸ್‌ಪೆಕ್ಟರ್ ಅಶ್ವಿನ್ ಕುಮಾರ್ ಕ್ಷಮೆ ಕೇಳಬೇಕೆಂದು ಒತ್ತಾಯಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement