ಜೋಳದ ಬಣವೆ ಆಗ್ನಿಗಾಹುತಿ: ಕಂಗಾಲಾದ ರೈತ ಕುಟುಂಬ
ಬೇಲೂರು: ತಾಲೂಕಿನ ಹೆಬ್ಬಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಎಂ. ಹುಣಸೇಕೆರೆ ಗ್ರಾಮದ ರೈತ ಶಿವಪ್ಪಶೇಟ್ಟಿ ಎಂಬವರಿಗೆ ಸೇರಿದ ಜೋಳದ ಮೇವಿನ ಬಣವೆ ಸುಟ್ಟು ಭಸ್ಮವಾಗಿರುವ ಘಟನೆ ಇತ್ತೀಚೆಗೆ ನಡೆದಿದೆ.
ರೈತ ಶಿವಪ್ಪಶೇಟ್ಟಿ ತಮ್ಮ ಮನೆಯ ಮುಂದೆ ಜೋಳದ ಮೋವಿನ ಬವಣೆ ಇದ್ದು, ಆಕಸ್ಮಿಕವಾಗಿ ಬಿದ್ದ ಬೆಂಕಿಯಿಂದ ಸರಿ ಸುಮಾರು 20 ಸಾವಿರ ಮೌಲ್ಯ ಉಳ್ಳು ಮೋವಿನ ಬವಣೆ ಕ್ಷಣದಲ್ಲಿ ಸುಟ್ಟುಭಸ್ಮವಾಗಿದೆ.
ಈ ದಿಸೆಯಲ್ಲಿ ಜಾನುವಾರುಗಳಿಗೆ ತೀವ್ರ ತೊಂದರೆಯಾಗಿದೆ ಎಂದು ರೈತ ಶಿವಪ್ಪಶೆಟ್ಟಿ ತಿಳಿಸಿದರು. ಹಾಗೂ ಸಂಬಂಧ ಪಟ್ಟ ಇಲಾಖೆ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಸೂಕ್ತ ಪರಿಹಾರ ನೀಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದರು.