ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ದರೋಡೆಗೆ ಯತ್ನ

Srinivasa Murthy VN
Updated On : 10 Feb 2014, 11:49 am

ಹಾಸನ: ತಾಲೂಕಿನ ಶಾಂತಿಗ್ರಾಮದ ಬಳಿ ಕಾರೊಂದನ್ನು ಹಾದಿಗಳ್ಳರು ಬೆನ್ನಟ್ಟಿ ದರೋಡೆಗೆ ಯತ್ನ ನಡೆಸಿದ ಘಟನೆ ಇತ್ತೀಚೆಗೆ ನಡೆದಿದೆ.
ಮೂಡಿಗೆರೆ ತಾಲೂಕು ಹಂತೂರು ಗ್ರಾಮದ ಕೀರ್ತಿ ಎಂಬವರು ತಮ್ಮ ಕುಟುಂಬದೊಂದಿಗೆ  ಟೊಯೊಟೊ ಕಾರಿನಲ್ಲಿ ತಮ್ಮ ಗ್ರಾಮಕ್ಕೆ ಬೆಂಗಳೂರಿನಿಂದ ವಾಪಸ್ಸಾಗುತ್ತಿದ್ದರು. ಶಾಂತಿಗ್ರಾಮದ ವೃತ್ತದ ಬಳಿ 2 ಬೈಕ್‌ಗಳಲ್ಲಿ ಬಂದ ನಾಲ್ವರು, ಆ ಕಾರನ್ನು ಹಾಸನದ ಹೊರವಲಯದವರೆಗೂ ಬೆನ್ನಟ್ಟಿಕೊಂಡು ಬಂದರು. ಡೈರಿ ಸರ್ಕಲ್ ಬಳಿ ಕಾರನ್ನು ಅಡ್ಡ ಹಾಕಿ ಚಾಲನೆ ಮಾಡುತ್ತಿದ್ದ ಕೀರ್ತಿ ಅವರನ್ನು ಹೊರಗೆಳೆದುಕೊಂಡರು. ಹೆಲ್ಮೆಟ್‌ನಿಂದ ಕಾರಿನ ಮುಂಭಾಗದ ಗಾಜನ್ನು ಒಡೆದು ಕಾರಿನೊಳಗೆ ಕುಳಿತಿದ್ದವರ ಮೈ ಮೇಲಿದ್ದ ಚಿನ್ನದ ಒಡವೆಗಳನ್ನು ಕಸಿಯಲು ಪ್ರಯತ್ನಿಸಿದರು.
ಒಬ್ಬ ಸಿಕ್ಕಿಹಾಕಿಕೊಂಡ: ಈ ಸಂದರ್ಭದಲ್ಲಿ ಗದ್ದಲವುಂಟಾಗಿ ಸುತ್ತಮುತ್ತಲಿದ್ದ ಜನರು ಕಾರಿನತ್ತ ದೌಡಾಯಿಸಿದರು. ಇದರಿಂದ ಬೆದರಿದ ದರೋಡೆಕೋರರು ಪರಾರಿಯಾಗಲು ಯತ್ನಿಸಿದರು. ನಾಲ್ವರಲ್ಲಿ ಮೂವರು ತಪ್ಪಿಸಿಕೊಂಡರೆ ಒಬ್ಬ ಸಿಕ್ಕಿಬಿದ್ದನು. ತಕ್ಷಣ ಬಡಾವಣೆ ಪೊಲೀಸರಿಗೆ ಸುದ್ದಿ ಮುಟ್ಟಿಸಲಾಯಿತು. ಸ್ಥಳಕ್ಕೆ ಬಂದ ಪೊಲೀಸರು ಆರೋಪಿಯನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆಗೊಳಪಡಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement