ಬ್ಯಾಂಕ್ ವಹಿವಾಟು ಬಂದ್: ಸಾರ್ವಜನಿಕರ ಪರದಾಟ
ಹಾಸನ: ವೇತನ ಪರಿಷ್ಕರಣೆ ಸೇರಿದಂತೆ ನಾನಾ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಬ್ಯಾಂಕ್ ನೌಕರರು ಸೋಮವಾರ ಬ್ಯಾಂಕ್ಗಳನ್ನು ಮುಚ್ಚಿ ಪ್ರತಿಭಟನೆ ನಡೆಸಿದರು. ರಾಷ್ಟ್ರೀಕೃತ ಬ್ಯಾಂಕ್ಗಳು ಬಂದ್ ಆಗಿದ್ದರಿಂದ ವಹಿವಾಟು ನಡೆಯದ ಕಾರಣ ಸಾರ್ವಜನಿಕರು ಪರದಾಡಿದರು.
ಎಲ್ಲೆಡೆ ಬಂದ್: ಪ್ರತಿಭಟನಾಕಾರರು ನಗರದ ಸ್ಟೇಟ್ ಬ್ಯಾಂಕ್ ಆಫ್ ಮೈಸೂರಿನ ಮುಖ್ಯ ಶಾಖೆಯ ಮುಂಭಾಗ ಸುಮಾರು 300ಕ್ಕೂ ಹೆಚ್ಚು ಬ್ಯಾಂಕ್ ನೌಕರರು ಪ್ರತಿಭಟನೆ ನಡೆಸಿ ಕೇಂದ್ರ ಸರ್ಕಾರದ ಬ್ಯಾಂಕ್ ವಿರೋಧಿ ನೀತಿಯ ವಿರುದ್ಧ ಘೋಷಣೆ ಕೂಗಿದರು. ಸ್ಟೇಟ್ ಬ್ಯಾಂಕ್ ಆಫ್ ಮೈಸೂರು, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಕಾರ್ಪೋರೇಷನ್ ಬ್ಯಾಂಕ್, ಕೆನರಾ ಬ್ಯಾಂಕ್, ವಿಜಯ ಬ್ಯಾಂಕ್ ಸೇರಿದಂತೆ ಅನೇಕ ರಾಷ್ಟ್ರೀಕೃತ ಬ್ಯಾಂಕ್ಗಳು ಸೇರಿದಂತೆ ಇತರೆ ಬ್ಯಾಂಕ್ಗಳು ಎಂದಿನಂತೆ ಕಾರ್ಯ ನಿರ್ವಹಿಸದ ಕಾರಣ ಗ್ರಾಹಕರು ತೀವ್ರ ತೊಂದರೆ ಅನುಭವಿಸಬೇಕಾಯಿತು. ಖಾಸಗಿ ಬ್ಯಾಂಕ್ಗಳು ಸಹ ಬೆಂಬಲ ವ್ಯಕ್ತಪಡಿಸಿ, ಬಂದ್ ಮಾಡಿದ್ದವು.
ಆಕ್ರೋಶ: ನೌಕರರ ವೇತನವನ್ನು ಶೇ. 10ಕ್ಕಿಂತ ಹೆಚ್ಚಳ ಮಾಡುವಂತೆ ಹಲವು ಬಾರಿ ಒತ್ತಾಯಿಸಿದ್ದರು ಸಂಬಂಧಪಟ್ಟವರು ಈ ಬಗ್ಗೆ ಯಾವುದೇ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ. ವೇತನ ಪರಿಷ್ಕರಣೆ ಮಾಡದೆ ಸರ್ಕಾರಗಳು ನೌಕರರಿಗೆ ವೇತನ ತಾರತಮ್ಯ ಮಾಡುತ್ತಿದೆ. ಈ ಬಗ್ಗೆ ಹಲವು ಬಾರಿ ಪ್ರತಿಭಟನೆ ನಡೆಸಿದರು ಸಹ ಯಾಮೊಬ್ಬರು ಸಹ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ. ಚರ್ಚೆಗೆ ಕರೆಯುತ್ತಾರೆ. ಆದರೆ, ಅಲ್ಲಿ ನೌಕರರ ಪರವಾಗಿ ನಿಲುವನ್ನು ತೆಗೆದುಕೊಳ್ಳುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಆರೋಪ: ಅಖಿಲ ಭಾರತ ಬ್ಯಾಂಕ್ ನೌಕರರ ಸಂಘವು ದೇಶಾದ್ಯಂತ ಪ್ರತಿಭಟನೆ ಕರೆ ನೀಡಿದ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿನ ಎಲ್ಲಾ ಬ್ಯಾಂಕ್ಗಳು ಸಹ ಬಂದ್ ಮಾಡಿದ್ದವು. 9 ಸಂಘಟನೆಗಳಿಂದ ಸುಮಾರು 10 ಲಕ್ಷ ಬ್ಯಾಂಕ್ ನೌಕರರಿದ್ದಾರೆ. 2012ರಿಂದಲೇ ಬ್ಯಾಂಕ್ನೌಕರರ ವೇತನ ಪರಿಷ್ಕರಣೆಯಾಗಬೇಕಿದೆ. ಆದರೆ ವೇತನ ಪರಿಷ್ಕರಣೆಯಲ್ಲಿ ವಿಳಂಬ ನೀತಿಯನ್ನು ಅನುಸರಿಸುತ್ತವೆ. ವೇತನ ಪರಿಷ್ಕರಣೆ ಕುರಿತಂತೆ ಭಾರತೀಯ ಬ್ಯಾಂಕ್ಗಳ ಸಂಘದ ಜೊತೆಗೆ ನಡೆಸಿದ ಸಭೆ ವಿಫಲವಾಗಿದೆ. ಬ್ಯಾಂಕ್ಗಳಲ್ಲಿ ಕೆಲಸದ ಒತ್ತಡದಿಂದಾಗಿ ನೌಕರರ ಆರೋಗ್ಯ ಸಮಸ್ಯೆಯನ್ನು ಎದುರಿಸುವಂತಾಗಿದೆ. ಅಗತ್ಯ ವಸ್ತುಗಳ ಬೆಲೆಗಳು ಹೆಚ್ಚಾಗಿರುವುದರಿಂದ ನೌಕರರ ಜೀವನ ನಿರ್ವಹಣೆ ಕಷ್ಟವಾಗಿದೆ ಎಂದು ಆರೋಪಿಸಿದರು.
ಷೇರು ವಾಪಸ್ ನಿರ್ಧಾರ ಸರಿಯಲ್ಲ: ಸಾರ್ವಜನಿಕ ಕ್ಷೇತ್ರವಾದ ಬ್ಯಾಂಕುಗಳನ್ನು ಮಟ್ಟ ಹಾಕಲು ಕೇಂದ್ರ ಸರ್ಕಾರವು ಜನ ವಿರೋಧಿ ಬ್ಯಾಂಕಿಂಗ್ ನೀತಿಯನ್ನು ಅನುಸರಿಸುತ್ತಿದೆ. ಈ ಜನ ವಿರೋಧಿ ಬ್ಯಾಂಕಕ್ನೀತಿಯಿಂದ ಸಾರ್ವಜನಿಕರು ಸಂಕಷ್ಟವನ್ನು ಎದುರಿಸಲಿದ್ದಾರೆ. ಶೇ.51ರಷ್ಟು ಸಾರ್ವಜನಿಕರ ಷೇರ್ಗಳನ್ನು ವಾಪಸ್ ನೀಡಲಿದೆ. ಇದರಿಂದ ಸಾರ್ವಜನಿಕರಿಗೆ ಅನ್ಯಾಯವಾಗಲದೆ. ಕೇಂದ್ರದ ಬ್ಯಾಂಕಿಂಕ್ ನೀತಿಯನ್ನು ಯಾರಿಗೂ ಪ್ರಯೋಜನವಾಗುವುದಿಲ್ಲ ಎಂದು ಕಿಡಿಕಾರಿದರು.
ಅಷ್ಟೇ ಅಲ್ಲದೆ ಸಾರ್ವಜನಿಕ ಬ್ಯಾಂಕ್ಗಳನ್ನು ಬಂಡವಾಳ ಶಾಹಿಗಳ ಪಾಲುದಾರಿಕೆಗೆ ಅನುವು ಮಾಡಿಕೊಡಲಾಗುತ್ತಿದೆ. ವಿದೇಶಿ ಬಂಡವಾಳಗಾರರಿಗೆ ನೇರವಾಗಿ ಬ್ಯಾಂಕ್ಗಳ ಲೈಸೆನ್ಸ್ಗಳನ್ನು ನೀಡಲಾಗುತ್ತಿದೆ ಎಂದು ದೂರಿದರು.
ಎಚ್ಚರಿಕೆ: ಜೊತೆಗೆ 1 ಕೋಟಿ ರು.ಗಳಿಗೂ ಅಧಿಕವಾಗಿ ಬ್ಯಾಂಕ್ಗಳಲ್ಲಿ ಸಾಲ ಪಡೆದಿರುವಂತಹ ಮಾಹಿತಿ ಬಹಿರಂಗ ಪಡಿಸಬೇಕು. ಆದ್ದರಿಂದ ಬ್ಯಾಂಕ್ಗಳ ಸಂಪೂರ್ಣ ಮಾಹಿತಿಯನ್ನು ನೀಡಬೇಕು ಎಂದು ಆಗ್ರಹಿಸಿದ ಅವರು, ಒಟ್ಟಿನಲ್ಲಿ ಬ್ಯಾಂಕ್ ನೌಕರರ ಬೇಡಿಕೆಗಳನ್ನು ಈಡೇರಿಸಬೇಕು. ಇಲ್ಲವಾದಲ್ಲಿ ಈ ವಿರುದ್ಧ ಉಗ್ರ ಹೋರಾಟ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ಬ್ಯಾಂಕ್ ನೌಕರರ ಸಂಘದ ಅಧ್ಯಕ್ಷ ಪರಮಶಿವಯ್ಯ, ರಾಮನಾಥ, ಪುಟ್ಟಸ್ವಾಮಿ, ಲೋಕೇಶ್, ಭಾಸ್ಕರ್, ಚಂದ್ರಶೇಖರ್, ಮಂಜುನಾಥ್, ಮೋಹನ್, ಕುಮಾರ್, ಸುನೀಲ್ ಕುಮಾರ್, ಚಂದ್ರಶೇಖರ್, ತಿಮ್ಮೇಗೌಡ, ಗುರುಮೂರ್ತಿ, ನಾಗವರ್ಮ, ಮಹದೇವ್, ಜಯೇಂದ್ರಕುಮಾರ್, ಶ್ರೀಧರ್ ಹಾಗೂ ಇತರರು ಇದ್ದರು.
ಜನರ ಪರದಾಟ
ಬ್ಯಾಂಕ್ ನೌಕರರ ಮುಷ್ಕರದಿಂದಾಗಿ ಸಾರ್ವಜನಿಕರು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಬೆಳಗ್ಗೆ ಬ್ಯಾಂಕ್ಗಳು ಬಂದ್ ಆಗಿದ್ದ ಪರಿಣಾಮ ಸಾರ್ವಜನಿಕರ ಬಂದ ದಾರಿಗೆ ಸುಂಕ ಇಲ್ಲದಂತೆ ಪರತಪ್ಪಿಸಿದರು.
ಎಟಿಎಂಗಳಲ್ಲೂ ಹಣವಿಲ್ಲ
ಎಟಿಎಂಗಳಲ್ಲಿ ಹಣ ಇಲ್ಲದ ಕಾರಣ ಗ್ರಾಹಕರು ಪರದಾಟ ಬೇಕಾಯಿತು. ಸಿಬ್ಬಂದಿಗಳು ಮುಷ್ಕರ ನಿರತರಾಗಿದ್ದರಿಂದ ಬಹುತೇಕ ಎಟಿಎಂಗಳಿಗೆ ಹಣ ತುಂಬಿರಲಿಲ್ಲ.