ವಿಧವೆಯರಿಗೆ ಚೆಕ್ ವಿತರಣೆ
ಹಾಸನ: ಪ್ರಸಕ್ತ ಸಾಲಿನ ರಾಷ್ಟ್ರೀಯ ಕುಟುಂಬ ನೆರವು ಯೋಜನೆಯಡಿ 4ನೇ ಕಂತಿನಲ್ಲಿ ಮಂಜುರಾಗಿರುವ ಫಲಾನುಭವಿಗಳಿಗೆ (ವಿಧವೆಯವರಿಗೆ) ಕ್ಷೇತ್ರದ ಸಾಸಕ ಎಚ್.ಎಸ್. ಪ್ರಕಾಶ್, ಪ್ರತಿಯೊಬ್ಬರಿಗೂ ರು. 10 ಸಾವಿರದ ಚೆಕ್ಗಳನ್ನು ಸೋಮವಾರ ವಿತರಿಸಿದರು.
ನಗರದ ಅಂಬೇಡ್ಕರ್ ಭವನದಲ್ಲಿ ನಡೆದ ಚೆಕ್ ವಿತರಣೆ ಕಾರ್ಯಕ್ರಮದಲ್ಲಿ ಶಾಸಕರು ಮಾತನಾಡಿ, ಅಧಿಕಾರಿಗಳು ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ನಿರ್ವಹಿಸಬೇಕು. ಇರುವ ಯೋಜನೆ ಬಗ್ಗೆ ತಿಳಿಸಿ ಬಡವರಿಗೆ ಸಿಗುವ ಆಗೇ ಜವಬ್ಧಾರಿಯುತವಾಗಿ ಕರ್ತವ್ಯ ನಿರ್ವಹಿಸುವಂತೆ ಸಲಹೆ ನೀಡಿದರು. ಯಾರೇ ಕಚೇರಿಗೆ ಬಂದಾಗ ಕಾಳಜಿ ವಹಿಸಿ ಮಾಹಿತಿ ನೀಡಬೇಕು. ಜೊತೆಗೆ ಪ್ರಾಮಾಣಿಕವಾಗಿ ಕೆಲಸ ಮಾಡುವಂತೆ ಕರೆ ನೀಡಿದರು. ಚೆಕ್ ವಿತರಣೆ ಕಾರ್ಯಕ್ರಮದಲ್ಲಿ ಒಟ್ಟು 306 ಮಹಿಳೆಯರಿಗೆ ಚೆಕ್ ವಿತರಿಸಲಾಯಿತು. ಇದೆ ವೇಳೆ ನಗರಸಭೆ ಅಧ್ಯಕ್ಷೆ ಶ್ರೀವಿದ್ಯಾ ಆನಂದ್, ತಹಸೀಲ್ದಾರ್ ಮಂಜುನಾಥ್, ನಗರಸಭೆ ಸದಸ್ಯ ಪ್ರಸನ್ನ ಕೃಷ್ಣಮೂರ್ತಿ, ಗ್ರಾಹಕರ ವೇದಿಕೆಯ ಸಿದ್ದಯ್ಯ ಹಾಗೂ ಇತರರು ಪಾಲ್ಗೊಂಡಿದ್ದರು.