ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

132 ಕೋಟಿ ಮೆಗಾಬಜೆಟ್!

Srinivasa Murthy VN
Updated On : 12 Feb 2014, 12:56 pm

ಹಾಸನ: ನಗರಸಭೆಯ ಆಡಳಿತಾರೂಢ ಜೆಡಿಎಸ್ ಪಕ್ಷ ಮಂಗಳವಾರ 132.22 ಕೋಟಿ ರು.ಗಳ ಮೆಗಾ ಬಜೆಟ್ ಮಂಡಿಸಿದ್ದಾರೆ. ನಗರಸಭೆ ಅಧ್ಯಕ್ಷೆ ಶ್ರೀವಿದ್ಯಾ ಅವರು 2014-15ನೇ ಸಾಲಿನ 125,86,56,000 ರು.ಗಳ ಆದಾಯ ನಿರೀಕ್ಷಿಸಿದ್ದು, ಒಟ್ಟಾರೆಯಾಗಿ 132,21,46,302 ರು.ಗಳ ಬಜೆಟ್ ಮಂಡಿಸಿದರು. ಈ ಪೈಕಿ 2014-15ನೇ ಸಾಲಿನಲ್ಲಿ 131,41,31,000 ರು.ಗಳ ಖರ್ಚು ನಿರೀಕ್ಷಿಸಲಾಗಿದ್ದು, 80,15,302 ರು.ಗಳ ಉಳಿತಾಯ ಬಜೆಟ್ ಮಂಡಿಸಿದರು.
ಹೆಚ್ಚಿನ ಆದ್ಯತೆ: ಕಟ್ಟಡಗಳಿಗೆ 2 ಕೋಟಿ ರು., ಲಘವಾಹನಕ್ಕೆ 25 ಲಕ್ಷ ರು., ವಾಹನ ತಂಗುದಾಣ ಮತ್ತು ಬಸ್ ಶೆಲ್ಟರ್ ನಿರ್ಮಾಣಕ್ಕೆ 70 ಲಕ್ಷ ರು., ಅಡ್ಡರಸ್ತೆಗೆ ನಾಮಫಲಕಗಳು- ಮನೆಗಳಿಗೆ ಹಾಗೂ ನಿವೇಶನಗಳಿಗೆ ನಂಬರ್ ಪ್ಲೇಟ್ಗಳಿಗೆ 40 ಲಕ್ಷ ರು., ರಸ್ತೆ ನಿರ್ಮಾಣ, ರಸ್ತೆಗಳ ಉನ್ನತೀಕರಣ, ಡಾಂಬರು, ರಸ್ತೆ ಮತ್ತು ಪುಟ್ಪಾತ್ಗೆ 27 ಕೋಟಿ ರು., ರಸ್ತೆ ಬದಿ ಚರಂಡಿಗೆ 7.10 ಕೋಟಿ ರು., ಹೊಸ ಬಡಾವಣೆಗಳ ಅಭಿವೃದ್ಧಿಗೆ 85 ಲಕ್ಷ ರು., ಬೀದಿ ದೀಪಗಳು, ಟ್ರಾಫಿಕ್ ಸಿಗ್ನಲ್ಗಳು, ಸೋಲಾರ್ ದೀಪಗಳು ಮತ್ತು ಹೈಮಾಸ್ಟ್ ದೀಪಗಳಿಗೆ 50 ಲಕ್ಷ ರು., ಸ್ಟಾರ್ಮ ವಾಟರ್ ಚರಂಡಿಗಳು, ತೆರೆದ ಚರಂಡಿಗಳಿಗೆ 1 ಕೋಟಿ ರು., ಭೂಮಿ ಮತ್ತು ನಿವೇಶನಗಳಿಗೆ 1.25 ಕೋಟಿ ರು., ಸ್ವೀಪಿಂಗ್ ಮಿಷನ್ಗೆ 50 ಲಕ್ಷ ರು.
ಇತರೆ ಆಸ್ತಿಗಳು ಮತ್ತು ಟೂಲ್ಸ್ ಮತ್ತು ಉಪಕರಣಗಳಿಗೆ 50 ಲಕ್ಷ, ಸ್ಲ್ಯಾಟ್ಹೌಸ್ ನಿರ್ಮಾಣ ಮತ್ತು ಭೂಮಿ ಖರೀದಿಗೆ 50 ಲಕ್ಷ ರು., ಡಂಪಿಂಗ್ ಯಾರ್ಡ್ ಅಭಿವೃದ್ಧಿ ಕೆಲಸಕ್ಕೆ 1.50 ಕೋಟಿ ರು., ಶೂನ್ಯ ಕಸ ಘಟಕ ನಿರ್ಮಾಣಕ್ಕೆ 75 ಲಕ್ಷ ರು., ನೀರು ಸರಬರಾಜು ಮ್ತು ಪೈಪ್ಲೈನ್ ಮತ್ತು ಬೋರ್ವೆಲ್ಗೆ 3 ಕೋಟಿ ರು., 3ನೇ ಹಂತದ ನೀರು ಸರಬರಾಜು ಯೋಜನೆ ಕೆಯುಡ್ಲೂಎಸ್ ಮತ್ತು ಡಿಬಿಗೆ ವಂತಿಗೆ 1.50 ಕೋಟಿ ರು., ನಗರದ ಪಾರ್ಕ್ಗಳ ಅಭಿವೃದ್ಧಿ ಮತ್ತು ನಿರ್ವಹಣೆಗೆ 1ಕೋಟಿ ರು., ವಸತಿ ಮತ್ತು ವಾಣಿಜ್ಯ ಕಟ್ಟಡಗಳಿಗೆ ನೀರು ಸರಬರಾಜು ಮೀಟರ್ ಅಳವಡಿಸಲು 50 ಲಕ್ಷ ರು..
ಒಳಚರಂಡಿ ಲೈನ್ಗೆ 1 ಕೋಟಿ ರು., ಮಾರುಕಟ್ಟೆ, ಸಂಕೀರ್ಣ ನಿರ್ಮಾಣ, ತರಕಾರಿ ಮಾರುಕಟ್ಟೆ ನಿರ್ಮಾಣಕ್ಕೆ 50 ಲಕ್ಷ ರು., ರಸ್ತೆ ನಿರ್ಮಾಣಕ್ಕಾಗಿ ಭೂ ಸ್ವಾಧೀನಕ್ಕೆ 5 ಕೋಟಿ ರು., ರಾಜ ಸ್ವ ಜಮೆಗಳು 34.28 ಕೋಟಿ ರು., ಅಸಾಮಾನ್ಯಖಾತೆ ಜಮೆಗಳು 39.47 ಕೋಟಿ ರು. ಸೇರಿದಂತೆ ನಾನಾ ಬಾಬ್ತುಗಳ ಖರ್ಚು 131,41,31,000 ಅಂದಾಜಿಸಲಾಗಿದೆ ಎಂದರು.
ಸಭೆಯಲ್ಲಿ ನಗರಸಭೆ ಉಪಾದ್ಯಕ್ಷೆ ಇರ್ಷಾದ್ ಪಾಷ, ನಗರಸಭೆ ಆಯುಕ್ತ ಕೃಷ್ಣಮೂರ್ತಿ ಹಾಗೂ ಇತರರು ಇದ್ದರು.

ಆದಾಯದ ಮೂಲಗಳು ಇವು...
2014-15ನೇ ಸಾಲಿನಲ್ಲಿ ಎಸ್ಎಫ್ಸಿ ವೇತನ ನಿಧಿ ಅನುದಾನ 8 ಕೋಟಿ ರು., ಅಂಗಡಿ ಮಳಿಗೆಗಳ ಬಾಡಿಗೆಯಿಂದ 45 ಲಕ್ಷ, ಕಟ್ಟಡ ಪರವಾನಗಿ ಶುಲ್ಕದಿಂದ 40 ಲಕ್ಷ ರು., ನಗರಾಭಿವೃದ್ಧಿಯಿಂದ 5 ಲಕ್ಷ, ಕಟ್ಟಡ ಕಾರ್ಮಿಕರ ಕಲ್ಯಾಣ ನಿಧಿ 15 ಲಕ್ಷ ರು., ಇತರೆ ಅಭಿವೃದ್ಧಿ ಶುಲ್ಕ 25 ಲಕ್ಷ, ಟೆಂಡರ್ ಫಾರಂ ಮಾರಾಟದಿಂದ 50 ಸಾವಿರ ರು., ಗುತ್ತಿಗೆದಾರರು ಮತ್ತು ಪ್ಲಂಬರ್ಗಳ ನೋಂದಣಿ ಶುಲ್ಕ 10 ಸಾವಿರ ರು., ಈಜುಕೋಳ ನೊಂದಣಿ ಅರ್ಜಿ ಮಾರಾಟದ ಶುಲ್ಕ 2 ಲಕ್ಷ ರು., ರಸ್ತೆ ಅಗೆತ ಮತ್ತು ಸುಧಾರಣಾ ವೆಚ್ಚ 7.50 ಕೋಟಿ ರು. ಜನನ ಮತ್ತು ಮರಣ ಪ್ರಮಾಣದ ಪತ್ರದ ಶುಲ್ಕ 1 ಲಕ್ಷರು., ಕೊಳಚೆ ಪ್ರದೇಶ ಅಭಿವೃದ್ಧಿ ಉಪಕರ 75 ಸಾವಿರ ರು., ಸಂತೆ ಜಾತೆ, ಖಾಸಗಿ ಬಸ್ ನಿಲ್ದಾಣ ಮತ್ತು ಇತರೆ ಮೂಲಗಳ ನೆಲ ಬಾಡಿಗೆಯಿಂದ 25.5 ಲಕ್ಷ ರು., ಈಜುಕೊಳ ಶುಲ್ಕ 6 ಲಕ್ಷ ರು., ನೀರು ಸರಬರಾಜು ತೆರಿಗೆಯಿಂದ 2 ಕೋಟಿ ರು., ನೀರು ಸರಬರಾಜು ಸಂಪರ್ಕಗಳ ಶುಲ್ಕ 6 ಲಕ್ಷ ರು., ನೀರು ಸರಬರಾಜು ಸಂಪರ್ಕಗಳ ಸಂಕ್ರಮಿಕರಣ ಶುಲ್ಕಗಳು 2 ಲಕ್ಷ ರು., ನೀರು ಸರಬರಾಜು ಮತ್ತು ಒಳ ಚರಂಡಿ ಬಳಕೆ ಶುಲ್ಕಗಳು 10 ಲಕ್ಷ ರು., ಯುಜಿಡಿ ಸಂಪರ್ಕ ಶುಲ್ಕಗಳಿಂದ 8 ಲಕ್ಷ ರು., ಎಸ್ ಎಫಫ್ಸಿ ಮುಕ್ತ ನಿಧಿ ಅನುದಾನ 6 ಕೋಟಿ ರು., ಹೂಡಿಕೆಯ ಮೇಲಿನ ಬಡ್ಡಿ 15 ಲಕ್ಷ ರು., ಬ್ಯಾಂಕ್ ಬಡ್ಡಿಗಳಿಂದ 8 ಲಕ್ಷ ರು., 22.75ರ ಕಲ್ಯಾಣ ನಿಧಿಯ ವೆಚ್ಚಗಳು 2 ಕೋಟಿ ರು., ಆಸ್ತಿ ತೆರಿಗೆ 5 ಕೋಟಿ ರು., ಖಾತಾ ವರ್ಗಾವಣೆ ಶುಲ್ಕ 8 ಲಕ್ಷ ರು., ಉಪಕರಣಗಳ ಸಂಗ್ರಹಣಾ ಶುಲ್ಕ 10.31 ಲಕ್ಷ ರು., ಜಾಹಿರಾತು ಫಲಕದ ನೆಲ ಬಾಡಿಗೆಯಿಂದ 5 ಲಕ್ಷ ರು., ಖಾತಾ ನಕಲು ಶುಲ್ಕದಿಂದ 5 ಲಕ್ಷ ರು., ಬಂಡವಾಳ ಜಮೆಗಳು 52.10 ಕೋಟಿ ರು. ಮತ್ತು ಅಸಾಮಾನ್ಯ ಖಾತೆ ಜಮೆಯಿಂದ 39.47 ಕೋಟಿ ರು.ಗಳು ಸೇರಿದಂತೆ 125,86,56,000 ರು.ಗಳ ಆದಾಯವನ್ನು ನಿರೀಕ್ಷಿಸಲಾಗಿದೆ.

'ಜನಪ್ರಿಯ ಬಜೆಟ್ ಅಲ್ಲ'
ಸದಸ್ಯ ಎಚ್.ಎಂ. ಸುರೇಶ್ ಕುಮಾರ್ ಮಾತನಾಡಿ, 132 ಕೋಟಿ ರು.ಗಳ ಬಜೆಟ್ ಮಂಡಿಸುವ ಮೂಲಕ ನಗರದ ಜನತೆಯಲ್ಲಿ ನಿರೀಕ್ಷೆ ಹೆಚ್ಚಿದೆ. ಅಲ್ಲದೆ ಬಂಡವಾಳ ಜಮೆಗಳ (ಕ್ಯಾಪಿಟಲ್ ರಿಸಿಪ್ಟ್ಸ್) ಅಂದಾಜನ್ನು 52,10 ಕೋಟಿ ರು.ಗಳನ್ನು ಬಜೆಟ್ಗೆ ಸೇರಿಸಲಾಗಿದೆ. ಜೊತೆಗೆ ಮುಖ್ಯಮಂತ್ರಿ ನಿಧಿಯ ಅನುದಾನ ಹಾಗೂ ಈಗಾಗಲೇ ಚಾಲ್ತಿಯಲ್ಲಿ ಇರುವ ಕಾಮಗಾರಿಗಳ ವೆಚ್ಚವನ್ನು ಈ ಬಜೆಟ್ಗೆ ಸೇರಿಸಲಾಗಿದೆ ಎಂದು ಆರೋಪಿಸಿದರು.
ಒಟ್ಟಾರೆಯಾಗಿ ಇಷ್ಟೊಂದು ದೊಡ್ಡ ಬಜೆಟ್ ಮಂಡಿಸುವ ಅಗತ್ಯ ಇರಲಿಲ್ಲ ಎಂದ ಅವರು, ಸದಸ್ಯರ ಅಭಿಪ್ರಾಯವನ್ನು ಪಡೆಯದೆ ತಯಾರಿಸಿರುವ ಈ ಬಜೆಟ್ ಅನುಷ್ಠಾನ ಆಗುವುದಿಲ್ಲ ಎಂದು ದೂರಿದರು. ಕಾಂಗ್ರೆಸ್ ಶಾಸಕ ಯಶವಂತ್ ಮಾತನಾಡಿ, ಹೊಸ ಬಡಾವಣೆಗಳು ಹಾಗೂ ಮೂಲಭೂತ ರಚನೆಗೆ 85 ಲಕ್ಷ ರು.ಗಳನ್ನು ಮೀಸಲಿಸಿದ್ದಾರೆ. ಆದರೆ  ಕೊಳಚೆ ಪ್ರದೇಶಗಳ ಅಭಿವೃದ್ಧಿ ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ನಗರಸಭೆಯಲ್ಲಿ ಸಾಕಷ್ಟು ಮಂದಿ ಸದಸ್ಯರು ಕೊಳಚೆ ಪ್ರದೇಶ ಹೊಂದಿದ್ದಾರೆ. ಅವುಗಳ ಅಭಿವೃದ್ಧಿಗೆ ಅನುದಾನ ಮೀಸಲಿರಿಸಿಲ್ಲ ಎಂದು ಟೀಕಿಸಿದರು.
ಹೊಳೆನರಸೀಪುರ ರಸ್ತೆ ಹಾಗೂ ಐಬಿ ಮುಂಭಾಗದಲ್ಲಿ ಬಸ್ ಶೆಲ್ಟರ್ಗಳಿಲ್ಲ. ಜೊತೆಗೆ ನಗರದಲ್ಲಿ ಸಾರ್ವಜನಿಕ ಶೌಚಾಲಯಗಳ ನಿರ್ಮಾಣಕ್ಕೆ ಅನುದಾನ ಮೀಸಲಿಸಿದರೂ ಉತ್ತಮವಾದ ಶೌಚಾಲಯಗಳು ಇಲ್ಲ ಎಂದು ಅವರು ಆಡಳಿತ ವರ್ಗದ ಗಮನ ಸೆಳೆದರು. ಪಾರ್ಕಿಂಗ್ ವ್ಯವಸ್ಥೆ ಸಮಸ್ಯೆ ನಿವಾರಿಸಲು ಬಜೆಟ್ನಲ್ಲಿ ಕ್ರಮ ಕೈಗೊಂಡಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ಅಧ್ಯಕ್ಷರ ಸ್ಪಷ್ಟನೆ: ಪ್ರತಿಪಕ್ಷಗಳ ಟೀಕೆಗಳಿಗೆ ಉತ್ತರಿಸಿದ ಅಧ್ಯಕ್ಷೆ ಶ್ರೀವಿದ್ಯಾ, ಇದು ನನ್ನ ಮೊದಲ ಬಜೆಟ್. ಕೆಲಮೊಂದು ತಪ್ಪುಗಳಾಗಿದ್ದರೆ ಅದನ್ನು ಸದಸ್ಯರು ಮನ್ನಿಸಿ ಸಹಕರಿಸುವಂತೆ ಮನವಿ ಮಾಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement