ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

18ರಂದು ಜಿಲ್ಲಾ ಯುವಜನ ಮೇಳ; ವಿವಿಧ ಸ್ಪರ್ಧೆ

Srinivasa Murthy VN
Updated On : 12 Feb 2014, 12:57 pm

ಹಾಸನ: ಜಿಲ್ಲಾ ಮಟ್ಟದ ಯುವಜನ ಮೇಳವನ್ನು ಹಾಸನ ನಗರದ ಹಾಸನಾಂಬ ಕಲಾಕ್ಷೇತ್ರದಲ್ಲಿ ಫೆ.18ರಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಆಶ್ರಯದಲ್ಲಿ  ನಡೆಸಲಾಗುತ್ತಿದೆ.  ಈ ಕೆಳಕಂಡ ಸ್ಪರ್ಧೆಗಳನ್ನು ಯುವಕ ಮತ್ತು ಯುವತಿಯರಿಗಾಗಿ ಹಮ್ಮಿಕೊಳ್ಳಲಾಗಿದೆ.
ಯುವಕರಿಗೆ ಭಾವಗೀತೆ- 3 ನಿಮಿಷ (ವೈಯಕ್ತಿಕ), ಗೀಗೀಪದ - 3 ಜನಗಳು- 4 ನಿಮಿಷ, ಲಾವಣಿ - 4 ನಿಮಿಷ (ವೈಯುಕ್ತಿಕ), ಕೋಲಾಟ - 6 ನಿಮಿಷ, 12 ಮಂದಿ, ವೀರಗಾಸೆ - 12 ಜನ, 10 ನಿಮಿಷ, ರಂಗಗೀತೆ -3 ನಿಮಿಷ(ವೈಯುಕ್ತಿಕ), ಸಣ್ಣಾಟ -12 ಮಂದಿ, 30 ನಿಮಿಷಗಳು, ಯಕ್ಷಗಾನ - 15 ಮಂದಿ, 45 ನಿಮಿಷ, ಸೋಬಾನೆ ಪದ-(ಯುವತಿಯರಿಗೆ)4 ಮಂದಿ, 5ನಿಮಿಷ, ಏಕಪಾತ್ರಾಭಿನಯ-(ವೈಯುಕ್ತಿಕ) 5 ನಿಮಿಷ, ಚರ್ಮವಾದ್ಯ- 6 ಮಂದಿ, 10 ನಿಮಿಷ, ಜಾನಪದಗೀತೆ-6 ಮಂದಿ, 4 ನಿಮಿಷ, ಭಜನೆ ಗೀತೆ- 8 ಮಂದಿ 7 ನಿಮಿಷ, ಜನಪದ ನೃತ್ಯ- 10 ನಿಮಿಷ, 12 ಜನ ಭಾಗವಹಿಸುವುದು.                 
ಯುವತಿಯರಿಗೆ ಭಾವಗೀತೆ - 3 ನಿಮಿಷ (ವೈಯುಕ್ತಿಕ), ಗೀಗಿಪದ - 5 ಜನ- 4 ನಿಮಿಷ, ಲಾವಣಿ - 4 ನಿಮಿಷ (ವೈಯುಕ್ತಿಕ), ಕೋಲಾಟ - 6 ನಿಮಿಷ, 12 ಮಂದಿ, ಜಾನಪದ ಗೀತೆ -6 ಮಂದಿ, 4 ನಿಮಿಷ, ಜಾನಪದ ನೃತ್ಯ- 10 ನಿಮಿಷ, 12 ಜನ,  ದೊಡ್ಡಾಟ - 15 ಮಂದಿ, 45 ನಿಮಿಷ, ಭಜನೆ - 8 ಮಂದಿ 7 ನಿಮಿಷ, ಏಕಪಾತ್ರಾಭಿನಯ -(ವೈಯುಕ್ತಿಕ) 5 ನಿಮಿಷ, ರಾಗಿ ಜೋಳ ಬೀಸುವ ಪದ (ಯಾವುದಾದರೂ  ಒಂದು) 2 ಮಂದಿ - 3 ನಿಮಿಷ, ರಂಗಗೀತೆ - 3 ನಿಮಿಷ (ವೈಯುಕ್ತಿಕ).
ಸೂಚನೆಗಳು: ಜಿಲ್ಲಾ ಮಟ್ಟದ ಯುವಜನ ಮೇಳದಲ್ಲಿ ಭಾಗವಹಿಸುವ ಸ್ಪರ್ಧಾಳುಗಳು ಫೆ. 18ರಂದು ಬೆಳಗ್ಗೆ 9ಕ್ಕೆ ಹಾಸನಾಂಬ ಕಲಾಕ್ಷೇತ್ರದಲ್ಲಿ ಸಂಘಟಕರಲ್ಲಿ ವರದಿ ಮಾಡಿಕೊಳ್ಳತಕ್ಕದ್ದು.  
ಹೆಚ್ಚಿನ ವಿವರಗಳಿಗೆ ದೂ. 08172- 246056 ಸಂಪರ್ಕಿಸುವಂತೆ ಹಾಸನ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರು ಕೋರಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement