ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಕಲೆ ಹೊರಹೊಮ್ಮಿಸಲು ವೇದಿಕೆ ಅಗತ್ಯ'

Srinivasa Murthy VN
Updated On : 12 Feb 2014, 12:56 pm

ಹೊಳೆನರಸೀಪುರ: ಪ್ರತಿಯೊಬ್ಬರಲ್ಲೂ ಒಂದು ಕಲೆ ಇದ್ದೇ ಇರುತ್ತದೆ, ಆದರೆ ಅದನ್ನು ಹೊರಹೊಮ್ಮಿಸಲು ಸೂಕ್ತವಾದ ಅವಕಾಶ ಹಾಗೂ ವೇದಿಕೆಯ ಅಗ್ಯತ್ಯತೆ ಇದೆ ಎಂದು ತಾಲೂಕು ಕಸಾಪ ಅಧ್ಯಕ್ಷ ಎಚ್.ಎಸ್. ಪುಟ್ಟಸೋಮಪ್ಪ ಇಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದರು.
ಕನ್ನಡ ಸಂಸ್ಕತಿ ಇಲಾಖೆ, ಪೂರ್ಣಶ್ರೀ ಕಲಾ ಕೇಂದ್ರ ಹಾಗೂ ಶ್ರೀ ಆಂಜನೇಯ ದೇವಾಲಯ ಸಮಿತಿಯ ವತಿಯಿಂದ ಪಟ್ಟಣದ ಕೋಟೆ ಆಂಜನೇಯ ದೇವಾಲಯದಲ್ಲಿ ಇತ್ತೀಚೆಗೆ ಹಮ್ಮಿಕೊಳ್ಳಲಾಗಿದ್ದ ಸಾಂಸ್ಕೃತಿಕ ಸೌರಭ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ನಮ್ಮ ಸಂಸ್ಕತಿ ಹಾಗೂ ನಮ್ಮತನವನ್ನು ಹೊರಹೊಮ್ಮಿಸುವ ಕಲೆ ಮತ್ತು ಕಲಾವಿದರನ್ನು ಸಮಾಜ ಗುರುತಿಸಿ ಸಾಧಕರ ಸಾಧನೆಗೆ ಪ್ರೋತ್ಸಾಹ ನೀಡಿದಲ್ಲಿ ಭವಿಷ್ಯದಲ್ಲಿಯೂ ಹೆಚ್ಚು ಹೆಚ್ಚಾಗಿ ಪ್ರತಿಭೆಗಳು ಹೊರಹೊಮ್ಮಬಲ್ಲವು ಎಂದರು.
ಶ್ಲಾಘನೀಯ: ತಾಲೂಕು ವಚನ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಕುಮಾರಸ್ವಾಮಿ ಮಾತನಾಡಿ, ಸಾಂಸ್ಕೃತಿಕ ಸೌರಭ ಕಾರ್ಯಕ್ರಮದ ಮೂಲಕ ಅನೇಕ ಸುಪ್ತ ಪ್ರತಿಭೆಗಳು ಹೊರಹೊಮ್ಮಲು ಉತ್ತಮ ವೇದಿಕೆಯನ್ನು ಸರ್ಕಾರ ರೂಪಿಸಿರುವುದು ಶ್ಲಾಘನೀಯ ಸಂಗತಿ ಎಂದರು.
ಸನ್ಮಾನ: ಈ ಸಂದರ್ಭದಲ್ಲಿ ಪಟ್ಟಣದ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಪ್ರಾಧ್ಯಾಪಕಿ ಪ್ರಭಾಮಣಿ, ಸಹ್ಯಾದ್ರಿ ಕಲಾ ಬಳಗದ ಪ್ರತಿಭಾವಂತ ಕಲಾವಿದ ದೇವರಾಜು(ಮುಡಿ) ಹಾಗೂ ನಿವೃತ್ತ ಪತ್ರಕರ್ತ ರಾಮಕೃಷ್ಣಯ್ಯ ಅವರನ್ನು ಸನ್ಮಾನಿಸಲಾಯಿತು. ಸನ್ಮಾನಿತರ ಪರವಾಗಿ ಪ್ರಾಧ್ಯಾಪಕಿ ಪ್ರಭಾಮಣಿ ಮಾತನಾಡಿದರು. ಇದಕ್ಕೂ ಮೊದಲು ಸಾಂಸ್ಕೃತಿಕ ಸೌರಭ ಕಾರ್ಯಕ್ರಮದಡಿಯಲ್ಲಿ ಕಾವ್ಯಶ್ರೀಕೃಷ್ಣ ಅವರಿಂದ ಕಥಾಕಾಲಕ್ಷೇಪ ನಡೆಯಿತು, ಇದೇ ಸಂದರ್ಭದಲ್ಲಿ ಪುಟಾಣಿ ಪೂರ್ಣಶ್ರೀ ಕೂಡ ಕಥಾ ಕಾಲಕ್ಷೇಪ ನಡೆಸಿಕೊಟ್ಟು ಎಲ್ಲರ ಗಮನ ಸೆಳೆದದ್ದು ವಿಶೇಷವಾಗಿತ್ತು. ಈ ಸಂದರ್ಭದಲ್ಲಿ ನವೋದಯ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಕುಮಾರ್, ಹಾಗೂ ನಿವೃತ್ತ ಶಿಕ್ಷಕ ಆರ್. ಸೂರ್ಯನಾರಾಯಣರಾವ್ ಮಾತನಾಡಿದರು. ತಾಲೂಕು ಜಾನಪದ ಪರಿಷತ್ತಿನ ಕಾರ್ಯದರ್ಶಿ ಎಚ್.ಎನ್. ಕೃಷ್ಣ, ಪೂರ್ಣಶ್ರೀ ಕಲಾ ಕೇಂದ್ರದ ಸದಸ್ಯರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement