ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಟ್ಯಾಂಕರ್- ಲಾರಿ ಮುಖಾಮುಖಿ; ಲಾರಿ ಚಾಲಕ ಸಾವು

Srinivasa Murthy VN
Updated On : 15 Feb 2014, 9:57 am

ಸಕಲೇಶಪುರ: ಟ್ಯಾಂಕರ್ ಹಾಗೂ ಲಾರಿ ನಡುವೆ ಅಪಘಾತ ಸಂಭವಿಸಿ ಲಾರಿಚಾಲಕ ಸ್ಥಳದಲ್ಲೇ ಮೃತಪಟ್ಟ ಘಟನೆ ರಾಷ್ಟ್ರೀಯ ಹೆದ್ದಾರಿ 48 ಮಾರನಹಳ್ಳಿ ಗ್ರಾಮ ಸಮೀಪ ಶನಿವಾರ ಸಂಭವಿಸಿದೆ. ಮಂಡ್ಯ ಜಿಲ್ಲೆಯ ಯಡಿಯೂರು ಗ್ರಾಮದ ಶ್ರೀನಿವಾಸ್ ಮೃತಪಟ್ಟ ಲಾರಿ ಚಾಲಕ. ಮಂಗಳೂರಿನಿಂದ ಟಾರ್ ತುಂಬಿಕೊಂಡು ಬರುತ್ತಿದ್ದ ಟ್ಯಾಂಕರ್ಗೆ ಹಾಸನದಿಂದ ದಿನಸಿ ಸಾಮಾನು ತುಂಬಿಕೊಂಡು ಹೋಗುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ಕ್ಲೀನರ್  ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಅಪಘಾತದಿಂದ ಪರಸ್ಪರ ಅಂಟಿಕೊಂಡಿದ್ದ ಲಾರಿಗಳನ್ನು ಕ್ರೇನ್ ಬಳಸಿ ಬೇರ್ಪಡಿಸಲಾಯಿತು. ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದೆ.

ವ್ಯಕ್ತಿ ಶವ ಪತ್ತೆ: ದೂರು ದಾಖಲು
ಸಕಲೇಶಪುರ: ತೋಟದಲ್ಲಿ  ಮರಗಸಿ ಕೆಲಸಕ್ಕೆ ಹೋಗಿದ್ದ ವ್ಯಕ್ತಿಯೊಬ್ಬರ ಮೃತದೇಹ ಪತ್ತೆಯಾಗಿದೆ. ತಾಲೂಕಿನ ಬಾಳ್ಳುಪೇಟೆ ಗ್ರಾಮದ ಅಂಬೇಡ್ಕರ್ ನಗರದ ಸಿದ್ದಯ್ಯ (55) ಮರಗೆಲಸಕ್ಕೆ ಹೋಗಿ ಮೃತ ಪಟ್ಟ ವ್ಯಕ್ತಿ. ಸಿದ್ದೇಗೌಡ ಎಂಬುವವರಿಗೆ ಸೇರಿದ ತೋಟದಲ್ಲಿ ಮೃತದೇಹ ಕಂಡು ಬಂದಿದೆ. ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement