15,23,224 ಮತದಾರರು
ಹಾಸನ: ಚುನಾವಣಾ ಆಯೋಗದ ನಿರ್ದೇಶನದಂತೆ, ವಿಧಾನಸಭಾ ಕ್ಷೇತ್ರಗಳ ಮತದಾರರ ಪಟ್ಟಿಗಳ ಸಂಕ್ಷಿಪ್ತ ಸ್ವರೂಪದ ವಿಶೇಷ ಪರಿಷ್ಕರಣೆಯಂತೆ ಹಾಸನ ಜಿಲ್ಲೆಯ 7 ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು 13,39,906 ಮತದಾರರು ಇದ್ದಾರೆ. ಆದರೆ, ಹಾಸನ ಲೋಕಸಭಾ ಕ್ಷೇತ್ರಕ್ಕೆ ಕಡೂರು ವಿಧಾನಸಭಾ ಕ್ಷೇತ್ರವೂ ಸೇರುವುದರಿಂದ ಒಟ್ಟು 15,23,524 ಮಂದಿ ಮತದಾರರು ಇದ್ದಾರೆ.
ಒಟ್ಟು ಮತದಾರರಲ್ಲಿ (ಕಡೂರು ಕ್ಷೇತ್ರವೂ ಸೇರಿದಂತೆ) ಪುರುಷರು- 770769, ಮಹಿಳೆಯರು - 752680, ಇತರೆ - 75 ಮಂದಿ ಇದ್ದಾರೆ. ಅರಸೀಕೆರೆ ಕ್ಷೇತ್ರದಲ್ಲಿ ಹೆಚ್ಚು ಮತದಾರರು ಇದ್ದು, ಇಲ್ಲಿಯೇ ಇತರರು ಹೆಚ್ಚಾಗಿದ್ದಾರೆ. ಹಾಸನ ಕ್ಷೇತ್ರದಲ್ಲಿ ಪುರುಷರಿಗಿಂತ ಮಹಿಳೆ ಮತದಾರರು ಹೆಚ್ಚಿದ್ದಾರೆ.
ಕ್ಷೇತ್ರವಾರು ವಿವರ ಹೀಗಿದೆ: ಶ್ರವಣಬೆಳಗೊಳ ವಿಧಾನಸಭಾ ಕ್ಷೇತ್ರ- ಪುರುಷರು - 96305, ಮಹಿಳೆಯರು - 95675, ಇತರೆ -9 ಮಂದಿ ಸೇರಿದಂತೆ ಒಟ್ಟು 1,91,989 ಮತದಾರರು ಇದ್ದಾರೆ.
ಅರಸೀಕೆರೆ ವಿಧಾನಸಭಾ ಕ್ಷೇತ್ರ: ಪುರುಷರು-1 ,00,133, ಮಹಿಳೆಯರು - 99, 893, ಇತರೆ - 19 ಮಂದಿ. ಒಟ್ಟು 2,00,045 ಮತದಾರರು.
ಬೇಲೂರು ವಿಧಾನಸಭಾ ಕ್ಷೇತ್ರ: ಪುರುಷರು - 90,296, ಮಹಿಳೆಯರು - 86,750, ಇತರೆ - 5 ಮಂದಿ. ಒಟ್ಟು 1,77,051 ಮತದಾರರು.
ಹಾಸನ ವಿಧಾನಸಭಾ ಕ್ಷೇತ್ರ: ಪುರುಷರು -94,346, ಮಹಿಳೆಯರು - 94,460, ಇತರೆ - 16 ಮಂದಿ. ಒಟ್ಟು 1,88,822 ಮತದಾರರು..
ಹೊಳೆನರಸೀಪುರ ಕ್ಷೇತ್ರ: ಪುರುಷರು - 1,00,627, ಮಹಿಳೆಯರು -98440, ಇತರೆ- 6 ಮಂದಿ. 1,99,073 ಮತದಾರರು ಇದ್ದಾರೆ.
ಅರಕಲಗೂಡು ವಿಧಾನಸಭಾ ಕ್ಷೇತ್ರ: ಪುರುಷರು -1,03,408, ಮಹಿಳೆಯರು -96, 386, ಇತರೆ -10. 1,99,804 ಮತದಾರರು..
ಸಕಲೇಶಪುರ ವಿಧಾನಸಭಾ ಕ್ಷೇತ್ರ: ಪುರುಷರು -91,805, ಮಹಿಳೆಯರು -91,313, ಇತರೆ -4 . ಒಟ್ಟು1,83,122 ಮತದಾರರು..
ಕಡೂರು ವಿಧಾನಸಭಾ ಕ್ಷೇತ್ರ: ಪುರುಷರು -93, 849, ಮಹಿಳೆಯರು -89,763, ಇತರೆ -ಣ6 ಮಂದಿ. ಒಟ್ಟು 1,83,618 ಮತದಾರರು ಇದ್ದಾರೆ.
ವಿವರ ಲಭ್ಯ: ಮತದಾರರ ಪಟ್ಟಿಗಳ ಪರಿಷ್ಕರಣೆಯು ನಿರಂತರವಾಗಿದ್ದು, ಅರ್ಹ ಮತದಾರರು ಸೇರ್ಪಡೆಗಾಗಿ ನಮೂನೆ-6, ಅನರ್ಹ ಮತ, ವಾಸವಿಲ್ಲದ, ಮತದಾರರ ನಮೂದನ್ನು ಕೈಬಿಡಲು ನಮೂನೆ-7, ತಮ್ಮ ನಮೂದುಗಳ ವಿವರಗಳ ತಿದ್ದುಪಡಿಗಾಗಿ ನಮೂನೆ-8 ಮತ್ತು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಸ್ಥಳ, ಮತಗಟ್ಟೆ ಬದಲಾವಣೆಯಾದಲ್ಲಿ ನಮೂನೆ-8ಎ ಅನ್ನು ನೀಡಬಹುದಾಗಿದೆ. ಈ ಅರ್ಜಿಗಳನ್ನು ಆನ್ಲೈನ್ನಲ್ಲಿಯೂ ಜ್ಛ್ಝ.ಟ್ಝ್ಛಿ.್ಝಟಿ ಸಲ್ಲಿಸಬಹುದಾಗಿದೆ. ಮತದಾರರ ವಿವರಗಳನ್ನು ಜ್ಛ್ಝ.ಟ್ಝ್ಛಿ.್ಝಟಿ ಛಟಿಜ ್ಛಜ್ಟ್ಞಛ್ಠಟಿಛಡಿಛ್ಞಛ.್ಞಛ್ಠ.ಟ್ಝ್ಛಿ.್ಝಟಿ ಢಿಜಛಿಡ್ಝಡಿಜ ನಲ್ಲಿ ನೋಡಬಹುದಾಗಿದೆ.
ಜಿಲ್ಲೆಯ 8 ತಾಲ್ಲೂಕು ಕಚೇರಿ, 2 ಉಪವಿಭಾಗಾಧಿಕಾರಿಗಳ ಕಚೇರಿ ಮತ್ತು ಈ ಕಚೇರಿಯ ಈ ಕೆಳಕಂಡ ದೂರವಾಣಿಗಳಿಗೆ ಕರೆ ಮಾಡಿ ವಿವರಗಳನ್ನು ಪಡೆಯಬಹುದಲ್ಲದೇ, ಲಿಖಿತ ದೂರು ಸಲ್ಲಿಸಬಹುದು ಎಂದು ಡಿಸಿ ತಿಳಿಸಿದ್ದಾರೆ.
ಸಂಪರ್ಕಿಸಬಹುದಾದ ದೂರವಾಣಿ ಸಂಖ್ಯೆಗಳು
ಜಿಲ್ಲಾಧಿಕಾರಿಗಳ ಕಚೇರಿ, ಹಾಸನ 08172-265028
ಉಪವಿಭಾಗಾಧಿಕಾರಿಗಳು, ಹಾಸನ ಉಪವಿಭಾಗ 08172-268403
ಉಪವಿಭಾಗಾಧಿಕಾರಿಗಳು, ಸಕಲೇಶಪುರ ಉಪವಿಭಾಗ 0 8173-244003
ತಾಲ್ಲೂಕು ಕಚೇರಿ, ಆಲೂರು 08170-218422
ತಾಲ್ಲೂಕು ಕಚೇರಿ, ಅರಕಲಗೂಡು 08175-221736
ತಾಲ್ಲೂಕು ಕಚೇರಿ, ಅರಸೀಕೆರೆ 08174-234879
ತಾಲ್ಲೂಕು ಕಚೇರಿ, ಬೇಲೂರು 08177-230800
ತಾಲ್ಲೂಕು ಕಚೇರಿ, ಚನ್ನರಾಯಪಟ್ಟಣ 08176-252314
ತಾಲ್ಲೂಕು ಕಚೇರಿ, ಹಾಸನ 08172-260395
ತಾಲ್ಲೂಕು ಕಚೇರಿ, ಹೊಳೆನರಸೀಪುರ 08175-272111
ತಾಲ್ಲೂಕು ಕಚೇರಿ, ಸಕಲೇಶಪುರ 08173-243012