ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

'ಕರ್ನಾಟಕ ದರ್ಶನ ಸದುಪಯೋಗ ಆಗಬೇಕು'

Srinivasa Murthy VN
Updated On : 16 Feb 2014, 10:18 am

ಅರಸೀಕೆರೆ: ಆರ್ಥಿಕವಾಗಿ ಹಿಂದುಳಿದಿರುವ ಮಕ್ಕಳಿಗೆ ಸರ್ಕಾರ ಹಮ್ಮಿಕೊಳ್ಳುತ್ತಿರುವ ಯೋಜನೆಗಳಲ್ಲಿ ಕರ್ನಾಟಕ ದರ್ಶನ ಕಾರ್ಯಕ್ರಮವೂ, ಮಕ್ಕಳು ಸದುಪಯೋಗಪಡಿಸಿಕೊಂಡು ತಮ್ಮ ವಿದ್ಯಾರ್ಥಿ ಜೀವನದಲ್ಲಿ ಮಂದೆ ಬರಬೇಕು ಎಂದು ಜಿಲ್ಲಾ ಪಂಚಾಯ್ತಿ ಉಪಾಧ್ಯಕ್ಷ ಬಿಳಿಚೌಡಯ್ಯ ಕರೆ ನೀಡಿದರು.
ಸರ್ಕಾರೀ ಯೋಜನೆ: ತಾಲೂಕಿನ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳ ಕರ್ನಾಟಕ ದರ್ಶನ ಶೈಕ್ಷಣಿಕ ಪ್ರವಾಸಕ್ಕೆ ಪಟ್ಟಣ ಕ್ಷೇತ್ರ ಶಿಕ್ಷಣ ಇಲಾಖೆ ಕಚೇರಿ ಮುಂಭಾಗದಿಂದ ಶುಕ್ರವಾರದಂದು ಪ್ರವಾಸ ಹೊರಟ ವಿದ್ಯಾರ್ಥಿಗಳ ತಂಡಕ್ಕೆ ಶುಭ ಕೋರಿ ಮಾತನಾಡಿದ ಅವರು ಪ್ರತಿಯೊಬ್ಬರಿಗೂ ವಿದ್ಯಾರ್ಥಿ ಜೀವನವು ಮರೆಯಲಾರದ ಒಂದು ಘಟ್ಟ. ಇಂತಹ ಸಂದರ್ಭದಲ್ಲಿ ಕಲಿಯುವುದರೊಂದಿಗೆ ಹಿರಿಯರು ನುಡಿದಂತೆ ದೇಶ ಸುತ್ತಿ ನೋಡು, ಕೋಶ ಓದಿ ನೋಡು ಎನ್ನುವ ಹಾಗೆ ಇಂದು ಶಿಕ್ಷಣ ಇಲಾಖೆ ಆಯೋಜಿಸಿರುವ ಕರ್ನಾಟಕ ದರ್ಶನ ಪ್ರವಾಸ, ರಾಜ್ಯ ಸರ್ಕಾರದ ಯೋಜನೆ ಎಂದರು.
ಚಿತ್ರಣ ಅರಿಯಿರಿ: ಪುರಸಭೆ ಅಧ್ಯಕ್ಷ ಮೋಹನ್ ಕುಮಾರ್ ಮಾತನಾಡಿ, ಸರ್ಕಾರದ ಇಂತಹ ಯೋಜನೆಗಳು ಶ್ಲಾಘನೀಯವಾಗಿದ್ದು, ನಾವೆಲ್ಲ ಒಂದು ಎಂಬ ಭಾವನೆ ಈ ಪ್ರವಾಸವು ಮೂಡಿಸುತ್ತದೆ ಮತ್ತು ರಾಜ್ಯದ ನಾನಾ ಪ್ರೇಕ್ಷಣಿಯ ಸ್ಥಳಗಳನ್ನು ವೀಕ್ಷಿಸಲು ಅನುವು ಮಾಡಿಕೊಡುತ್ತದೆ.
ಇಂತಹ ಪ್ರವಾಸಿ ಕಾರ್ಯಕ್ರಮಗಳನ್ನು ಉತ್ತಮ ಜ್ಞಾನಾರ್ಜನೆಗೆ ಮತ್ತು ಕರ್ನಾಟಕದ ಇತಿಹಾಸ ಬಿಂಬಿಸುವ ಸ್ಥಳಗಳಿಗೆ ಭೇಟಿ ನೀಡಿ, ನಮ್ಮ ರಾಜ್ಯದ ಸಂಪೂರ್ಣ ಚಿತ್ರಣ ಅರಿಯಲು ಪ್ರತಿಯೊಬ್ಬ ವಿದ್ಯಾರ್ಥಿಯು ಪ್ರಯತ್ನಿಸಬೇಕು ಎಂದು ಹೇಳಿದರು.
ಐದು ದಿನಗಳ ಕಾಲದ ಈ ಪ್ರವಾಸದಲ್ಲಿ ಐತಿಹಾಸಿಕ ಸ್ಮಾರಕಗಳು ಒಳಗೊಂಡಂತೆ ಪ್ರೇಕ್ಷಣೀಯ ಸ್ಥಳಗಳನ್ನು ವೀಕ್ಷಿಸಲು ಈ ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಿಕೊಡಲಾಗಿದ್ದು, ಇದರೊಂದಿಗೆ ಊಟ ಮತ್ತು ವಸತಿ ಸೌಲಭ್ಯಗಳೊಂದಿಗೆ ಅಧ್ಯಾಪಕರ ತಂಡವು ವಿದ್ಯಾರ್ಥಿಗಳೊಂದಿಗೆ ಇರಲಿದ್ದಾರೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement