ಮಟ್ಕಾ ಅಡ್ಡೆ ಮೇಲೆ ದಾಳಿ; 23 ಜನರ ಬಂಧನ
ಹಾಸನ: ಜಿಲ್ಲೆಯ ಪ್ರತ್ಯೇಕ ಪ್ರಕರಣಗಳಲ್ಲಿ 23 ಜನರನ್ನು ಬಂಧಿಸಿದ್ದು, ರು. 88,170ಗಳನ್ನು ವಶ ಪಡಿಸಿಕೊಂಡಿರುವ ಘಟನೆ ಇತ್ತೀಚೆಗೆ ನಡೆದಿದೆ.
ಹಾಸನ ಚನ್ನಪಟ್ಟಣದ ಅರಳೀಮರದ ಹತ್ತಿರ ಸಾರ್ವಜನಿಕರನ್ನು ವಂಚಿಸುವ ಉದ್ದೇಶದಿಂದ 1 ರು. 80 ರೂಪಾಯಿ ಕೊಡುವುದಾಗಿ ಮಟ್ಕಾ- ಜೂಜಾಟಾಡುತ್ತಿದ್ದಾಗ ಪೊಲೀಸರು ದಾಳಿ ನಡೆಸಿ ಮುಂಜುನಾಥ (37) ಎಂಬಾತನನ್ನು ಬಂಧಿಸಿದ್ದು, ಮಟ್ಕಾ- ಜೂಜಾಟದಲ್ಲಿ ಪಣಕ್ಕಿಟ್ಟಿದ್ದ ಸುಮಾರು ರು. 4,770 ನಗದನ್ನು ವಶಪಡಿಸಿಕೊಂಡಿದ್ದಾರೆ.
ಅದೇ ರೀತಿ ನಗರದ ಮಹಾರಾಜ ಪಾರ್ಕ್ ಹತ್ತಿರ ಸುಧಾ ಹೋಟೆಲ್ ಪಕ್ಕದಲ್ಲಿ ಹತ್ತಿರ ಸಾರ್ವಜನಿಕರನ್ನು ವಂಚಿಸುವ ಉದ್ದೇಶದಿಂದ 1 ರು.ಗೆ 80 ರು. ಕೊಡುವುದಾಗಿ ಮಟ್ಕಾ-ಜೂಜಾಡಲಾಗುತ್ತಿತ್ತು. ಆಗ, ಪೊಲೀಸರು ದಾಳಿ ನಡೆಸಿ ಮಹಮದ್ ಅಜ್ಗರ್ (28) ಎಂಬಾತನನ್ನು ಬಂಧಿಸಿ, ಮಟ್ಕಾ-ಜೂಜಾಟದಲ್ಲಿ ಪಣಕ್ಕಿಟ್ಟಿದ್ದ ಸುಮಾರು 1,470 ರು. ನಗದನ್ನು ವಶಪಡಿಸಿಕೊಂಡಿದ್ದು, ಹಾಸನ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆಟೋ ಸ್ಟ್ಯಾಂಡ್ ಹತ್ತಿರ: ನಗರದ ಕೆಎಸ್ಆರ್ಟಿಸಿ ವಿಭಾಗೀಯ ಹತ್ತಿರ ಆಟೋ ಸ್ಟ್ಯಾಂಡ್ ಹತ್ತಿರ ಸಾರ್ವಜನಿಕರನ್ನು ವಂಚಿಸುವ ಉದ್ದೇಶದಿಂದ 1 ರು. 80 ರು. ಕೊಡುವುದಾಗಿ ಮಟ್ಕಾ- ಜೂಜಾಟಾಡುತ್ತಿದ್ದಾಗ ಪೊಲೀಸರು ದಾಳಿ ನಡೆಸಿ ವಿ. ರಾಜು (60) ಎಂಬವನನ್ನು ಬಂಧಿಸಿದ್ದು, ಮಟ್ಕಾ-ಜೂಜಾಟದಲ್ಲಿ ಪಣಕ್ಕಿಟ್ಟಿದ್ದ ಸುಮಾರು 625 ರು. ನಗದನ್ನು ವಶಪಡಿಸಿಕೊಂಡಿದ್ದಾರೆ. ಹಾಸನ ಬಡಾವಣೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಿದ್ದಾಪುರ ಬಳಿ ಬಂಧನ: ಇನ್ನೊಂದು ಪ್ರಕರಣದಲ್ಲಿ ಅರಕಲಗೂಡು ತಾಲ್ಲೂಕಿನ ಕೊಣನೂರು ಹೋಬಳಿ ಹುಲಿಕಲ್ಲು ಸಿದ್ದಾಪುರ ರಸ್ತೆಯ ಹಲಸಿನ ಮರದ ಹತ್ತಿರ ಅಂದರ್ ಬಾಹರ್ ಜೂಜಾಟಾಡುತ್ತಿದ್ದಾಗ ಪೊಲೀಸರು ದಾಳಿ ನಡೆಸಿ ಸುರೇಶ್ (35), ಕಸ್ತೂರಿ (31), ಚಂದ್ರೇಗೌಡ, ಶ್ರೀಧರ (38), ಭೈರನಾಯಕ (50), ಮಂಜು, ರಾಜಶೇಖರ (49), ಯೋಗೇಶ್, ರಾಮು (45), ರಘು (26) ಮತ್ತು ಗುರು (28) ಎಂಬುವರನ್ನು ಬಂಧಿಸಿದ್ದು, ಜೂಜಾಟಾದಲ್ಲಿ ಪಣಕ್ಕಿಟ್ಟಿದ್ದ ಸುಮಾರು 75,180 ರು. ನಗದು ಮತ್ತು 8 ಮೊಬೈಲ್ಗಳನ್ನು ವಶಪಡಿಸಿಕೊಂಡಿದ್ದಾರೆ. ಕೊಣನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಎಪಿಎಂಸಿ ಬಳಿ ದಾಳಿ: ಮತ್ತೊಂದು ಪ್ರಕರಣದಲ್ಲಿ ಹೊಳೆನರಸೀಪುರ ಪಟ್ಟಣ ಅರಕಲಗೂಡು ರಸ್ತೆಯ ಎಪಿಎಂಸಿ ಯಾರ್ಡ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಅಂದರ್ ಬಾಹರ್ ಜೂಜಾಡುತ್ತಿದ್ದಾಗ ಪೊಲೀಸರು ದಾಳಿ ನಡೆಸಿ ರಮೇಶ (32), ನಾಗರಾಜ (26), ಚಂದ್ರು (30), ಹರೀಶ (37), ಕುಮಾರ (34), ಅಶೋಕ (30) ಮತ್ತು ತಮ್ಮೇಗೌಡ (48) ಎಂಬವರನ್ನು ಬಂಧಿಸಿದ್ದು, ಜೂಜಾಟದಲ್ಲಿ ಪಣಕ್ಕಿಟ್ಟಿದ್ದ 5025 ರು. ನಗದನ್ನು ವಶಪಡಿಸಿಕೊಂಡಿದ್ದಾರೆ. ಹೊಳೆನರಸೀಪುರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅರಸೀಕೆರೆ ಪ್ರಕರಣ: ಇನ್ನೊಂದು ಪ್ರಕರಣದಲ್ಲಿ ಅರಸೀಕೆರೆ ನಗರದ ಮಾರುತಿನಗರ ಹಿಂಭಾಗದಲ್ಲಿರುವ ಸರ್ಕಾರಿ ಖಾಲಿ ಜಾಗದಲ್ಲಿ ಅಂದರ್ ಬಾಹರ್ ಜೂಜಾಟವಾಡುತ್ತಿದ್ದಾಗ ಪೊಲೀಸರು ದಾಳಿ ನಡೆಸಿ ಜಿಲಾನಿ (30) ಮತ್ತು ನಯಾಜ್ (20) ಎಂಬರವನ್ನು ಬಂಧಿಸಿದ್ದು, ಜೂಜಾಟಾದಲ್ಲಿ ಪಣಕ್ಕಿಟಿದ್ದ ಸುಮಾರು 1,100 ರು.ನಗದನ್ನು ವಶಪಡಿಸಿಕೊಂಡಿದ್ದು, ನಗರ ಠಾಣೆಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ತಾಯಿ ಮಗು ಸೇರಿಐವರು ನಾಪತ್ತೆ
ಹಾಸನ: ಹಾಸನ ತಾಲ್ಲೂಕಿನ ಕಟ್ಟಾಯ ಹೋಬಳಿ ಕಾರ್ಲೆಕೊಪ್ಪಲು ಗ್ರಾಮದ ಗಿರೀಶ್ರ್ವರ ಪತ್ನಿ ಪವಿತ್ರ (22) ತನ್ನ ಪುತ್ರ ಯಶವಂತ್ (3)ನೊಂದಿಗೆ ಮನೆಯಿಂದ ಹೊರಗೆ ಹೋದವಳು ವಾಪಸ್ ಮನೆಗೆ ಬಾರದೆ ಕಾಣೆಯಾಗಿದ್ದಾರೆ.
ಚಹರೆ: ಪವಿತ್ರ, 5.2 ಅಡಿ ಎತ್ತರ, ಕೋಲುಮುಖ, ಎಣ್ಣೆಗೆಂಪು ಬಣ್ಣ, ಕನ್ನಡ ಬಾಷೆ ಮಾತನಾಡುತ್ತಾರೆ. ಚಹರೆ: ಯಶವಂತ, 2.5 ಅಡಿ ಎತ್ತರ, ಮನೆಯಿಂದ ಹೋಗುವಾಗ ನೀಲಿ ಬಣ್ಣದ ಟೀ ಶರ್ಟ್ ಮತ್ತು ನೀಲಿ ಬಣ್ಣದ ಜೀನ್ಸ್ ಪ್ಯಾಂಟ್ ಧರಿಸಿದೆ. ಪತಿ ಗಿರೀಶ್ ಅವರು ಗೊರೂರು ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.
ಮತ್ತೊಂದು ಪ್ರಕರಣದಲ್ಲಿ ಹಾಸನ ನಗರದ ಪಾರ್ಕ್ ರಸ್ತೆ ಬಾಲಕರ ಬಾಲಮಂದಿರದಲ್ಲಿ ಇದ್ದ ಚಂದ್ರಶೇಖರ್ (13) ಮತ್ತು ಮನೋಜ್ ಕುಮಾರ್ (15) ಎಂಬ ಬಾಲಕರು ಸಂಸ್ಥೆಯಿಂದ ಕಾಣೆಯಾಗಿದ್ದಾರೆ.
ಚಹರೆ: ಚಂದ್ರಶೇಖರ್, ಕೆಂಪು ಬಣ್ಣದ ಶರ್ಟ್, ನೀಲಿ ಬಣ್ಣದ ಪ್ಯಾಂಟ್ ಧರಿಸಿರುತ್ತಾನೆ. ಮನೋಜ್ ಕುಮಾರ್, ಬಿಳಿ ಮತ್ತು ನೀಲಿ ಬಣ್ಣದ ಶರ್ಟ್ ಮತ್ತು ಕ್ರೀಂ ಕಲರ್ ಪ್ಯಾಂಟ್ ಧರಿಸಿದ್ದಾನೆ. ಬಾಲ ಮಂದಿರದ ಅಧೀಕ್ಷಕ ಚನ್ನಭೈರೇಗೌಡ ಅವರು ಹಾಸನ ನಗರ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.
ಇನ್ನೊಂದು ಪ್ರಕರಣ, ಗವ್ವಿ ಅರಸೀಕೆರೆ ತಾಲ್ಲೂಕಿನ ಜಾವಗಲ್ ಹೋಬಳಿ ಹೊಸಕಲ್ಯಾಡಿ ಗ್ರಾಮ ವಾಸಿ ಬಸವರಾಜು ರವರ ಪುತ್ರಿ ಮಂಜುಳ (21) ದೊಡ್ಡಮ್ಮನ ಮನೆಯಾದ ತಿಪಟೂರು ತಾಲ್ಲೂಕಿನ ಸಾಸೀಹಳ್ಳಿ ಗ್ರಾಮಕ್ಕೆ ಹೋಗಿ ಬರುತ್ತೇನೆಂದು ಮನೆಯಲ್ಲಿ ಹೇಳಿ ಹೋದವರು ಇದುವರೆವಿಗೂ ವಾಪಸ್ ಮನೆಗೆ ಬಾರದೆ ಕಾಣೆಯಾಗಿದ್ದಾರೆ.
ಚಹರೆ: 5 ಅಡಿ ಎತ್ತರ, ಗೋಧಿ ಮೈಬಣ್ಣ, ಸಾಧಾರಣ ಮೈಕಟ್ಟು, ಕನ್ನಡ ಬಾಷೆ ಮಾತನಾಡುತ್ತಾರೆ. ತಂದೆ ಬಸವರಾಜು ರವರು ಜಾವಗಲ್ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.