ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ವಿಜಯನಗರ ಶಾಲೆಯಲ್ಲಿ ಒಲಂಪಿಕ್ ಕ್ರೀಡಾಕೂಟ

Srinivasa Murthy VN
Updated On : 16 Feb 2014, 10:18 am

ಹಾಸನ: ಯಾವುದೇ ಪೋಷಕರು ಓದುವ ವಿಚಾರದಲ್ಲಿ ತಮ್ಮ ಮಕ್ಕಳ ಮೇಲೆ ಒತ್ತಡ ಹೇರುವುದರಿಂದ ಭವಿಷ್ಯ ದಲ್ಲಿ ಅನುಕೂಲಕ್ಕಿಂತ ಅನಾನುಕೂಲವೇ ಹೆಚ್ಚಾಗಲಿದೆ ಎಂದು  ಹಿರಿಯ ಪತ್ರಕರ್ತ ಆರ್.ಪಿ. ವೆಂಕಟೇಶಮೂರ್ತಿ ಅಭಿಪ್ರಾಯಪಟ್ಟರು. ನಗರದ ವಿಜಯನಗರ ಬಡಾವಣೆಯಲ್ಲಿರುವ ಟೈಮ್ಸ್ ಇಂಟರ್ ನ್ಯಾಷನಲ್ ಶಾಲೆ ಯಲ್ಲಿ ಇತ್ತೀಚೆಗೆ ಏರ್ಪಡಿಸಲಾಗಿದ್ದ ಟೈಮ್ಸ್ ಒಲಂಪಿಕ್ಸ್ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದ ಅವರು, ಶಿಕ್ಷಣವೆಂಬುದು ಕೇವಲ ಕಲಿಕೆಗೆ ಮಾತ್ರ ಸೀಮಿತವಾಗದೆ ಮಕ್ಕಳ ಮುಂದಿನ ಭವಿಷ್ಯಕ್ಕೆ ವ್ಯಕ್ತಿತ್ವ ರೂಪಿಸಿಕೊಳ್ಳುವ ನಿಟ್ಟಿನಲ್ಲಿ ಸಾಗಬೇಕಾಗಿದೆ. ಆ ಹಿನ್ನೆಲೆಯಲ್ಲಿ ಪೋಷಕರು ಜವಾಬ್ದಾರಿ ವಹಿಸಬೇಕು ಎಂದು ಸಲಹೆ ನೀಡಿದರು.
ಆಲೋಚನೆ ಮಾಡಬೇಕು: ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಗಂಗಾಧರ್ ಮಾತನಾಡಿ, ಮಕ್ಕಳು ಓದುವಿನೊಂದಿಗೆ ತನ್ನ ಲ್ಲಿರುವಂತಹ ವಿಭಿನ್ನ ಪ್ರತಿಭೆಯನ್ನು ಹೊರಹಾಕಲು ಶಿಕ್ಷಕ ವರ್ಗ ಮತ್ತು ಪೋಷಕರ ಕರ್ತವ್ಯ ಹೆಚ್ಚಾಗಿರುತ್ತದೆ. ಒತ್ತಡದ ನಡುವೆ ವಿದ್ಯೆ ಕಲಿಸುವ ಅವಶ್ಯಕತೆಯನ್ನು ಬಿಟ್ಟು ಸ್ವಯಂ ಪ್ರೇರಿತವಾಗಿ ಮಕ್ಕಳೇ ಶಿಕ್ಷಣದ ಕಡೆ ಗಮನಹರಿಸುವಂತೆ ಪ್ರತಿಯೊಬ್ಬರೂ ಆಲೋಚನೆ ಮಾಡಬೇಕು ಎಂದು ತಿಳಿಸಿದರು.  ಪತ್ರಕರ್ತ ರವಿ ನಾಕಲಗೂಡು, ಶಾಲೆಯ ಮುಖ್ಯಸ್ಥ ಸುರೇಂದ್ರಕುಮಾರ್, ಪ್ರಾಂಶುಪಾಲೆ ಉಷಾ ಎಸ್. ಪಾಟೀಲ್ ಇದ್ದರು. ನಂತರ ಶಾಲಾ ಮಕ್ಕಳು ಮತ್ತು ಪೋಷಕರಿಗಾಗಿ ನಾನಾ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.

ವಿಜೃಂಭಣೆಯಿಂದ ನಡೆದ ಸಕಲೇಶ್ವರಸ್ವಾಮಿ ಭವ್ಯ ರಥೋತ್ಸವ
ಸಕಲೇಶಪುರ: ಪಟ್ಟಣದ ಶ್ರೀ ಸಕಲೇಶ್ವರಸ್ವಾಮಿ ಭವ್ಯ ರಥೋತ್ಸವ ಶನಿವಾರ ಸಾವಿರಾರು ಭಕ್ತರ ಭಕ್ತಿಭಾವದ ನಡುವೆ ವಿಜೃಂಭಣೆಯಿಂದ ನೆರವೇರಿತು. ಶುಕ್ರವಾರ ಬ್ರಹ್ಮ ರಥೋತ್ಸವ ನಡೆಸಿ ತುಸು ದೂರು ಎಳೆದು ನಿಲ್ಲಿಸಿದ್ದ ರಥವನ್ನು ಶನಿವಾರ ಬೆಳಗ್ಗೆ 11.30ರ ಸುಮಾರಿಗೆ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಪೂಜೆ ಸಲ್ಲಿಸಿ ರಾಜಬೀದಿ ಮೆರವಣಿಗೆ ಆರಂಭಿಸಲಾಯಿತು. ನಂದಿಧ್ವಜ, ಡೊಳ್ಳು ಕುಣಿತ, ಡ್ರಂ ಸೆಟ್‌ಗಳೊಂದಿಗೆ ಪಟ್ಟಣದ ಮುಖ್ಯ ರಸ್ತೆಯಲ್ಲಿ ರಥ ಸಂಚರಿಸಿ ಸಂಜೆ ಮತ್ತೆ ದೇವಸ್ಥಾನ ಆವರಣ ತಲುಪಿತು. ರಥೋತ್ಸವದುದ್ದಕ್ಕೂ ಭಕ್ತರು ಹಣ್ಣು, ಕಾಯಿ, ಕರ್ಪೂರ, ಹೂ ಮೊದಲಾದನ್ನು ಅರ್ಪಿಸಿ ಪೂಜೆ ಸಲ್ಲಿಸಿದರು. ರಥದ ಕಳಸ ದಾಟುವಂತೆ ಬಾಳೆಹಣ್ಣು ಎಸೆದರೆ ಇಷ್ಟಾರ್ಥ ಸಿದ್ಧಿಸುವುದೆಂಬ ಪ್ರತೀತಿ ಹಿನ್ನೆಲೆಯಲ್ಲಿ ಬಾಳೆಹಣ್ಣು ವ್ಯಾಪಾರಿಗಳಿಗೆ ಎಲ್ಲಿಲ್ಲದ ಬೇಡಿಕೆ ಇತ್ತು. ಜನ ನೂಕು ನುಗ್ಗಲಲ್ಲಿ ಬಾಳೆಹಣ್ಣುಗಳನ್ನು ಕೊಂಡು ರಥದತ್ತ ಬೀಸುತ್ತಿದ್ದುದು ಸಾಮಾನ್ಯವಾಗಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement