ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಹೆಚ್ಚುತ್ತಿರುವ ಸವರ್ಣೀಯರು, ದಲಿತರ ನಡುವಿನ ಸಂಘರ್ಷ

Srinivasa Murthy VN
Updated On : 16 Feb 2014, 10:18 am

-ಪಿ. ರವಿಕುಮಾರ್
ಹಾಸನ: ಜಿಲ್ಲಾದ್ಯಂತ ದಲಿತರು ಮತ್ತು ಸವರ್ಣಿಯರ ನಡುವೆ ಸಂಘರ್ಷ ದಿನೇ ದಿನೇ ಹೆಚ್ಚಾಗುತ್ತಿದೆ.  ದೇವಾಲಯ, ಹೋಟೆಲ್‌ಗಳಿಗೆ ದಲಿತರ ಪ್ರವೇಶ ನಿಷೇಧ ಹಾಗೂ ಕ್ಷೌರ ಮಾಡದಂತಹ ಅಸ್ಪೃಶ್ಯತೆಯ ಪ್ರಕರಣಗಳು ಹೆಚ್ಚಾಗಿ ಬೆಳಕಿಗೆ ಬರುತ್ತಿವೆ.
ಸ್ವಾತಂತ್ರ್ಯ ಬಂದು ಹಲವು ವರ್ಷಗಳಾದರೂ ದಲಿತರ ಮೇಲಿನ ದೌರ್ಜನ್ಯಗಳು ಮಾತ್ರ ಕಡಿಮೆಯಾಗಿಲ್ಲ. ದಲಿತರ ಮೇಲಿನ ಸಾಮಾಜಿಕ ಬಿಹಿಷ್ಕಾರ, ದೌರ್ಜನ್ಯ, ದಬ್ಬಾಳಿಕೆ, ಅಸ್ಪೃಶ್ಯತೆ, ಶೋಷಣೆಗಳು ನಡೆಯುತ್ತಲೇ ಇವೆ. ಇದನ್ನು ತಡೆಯುವ ನಿಟ್ಟಿನಲ್ಲಿ ಜಿಲ್ಲಾಡಳಿತ ಮತ್ತು ಜಿಲ್ಲಾ ಪೊಲೀಸಸ್ವಿಫಲವಾಗಿದೆ ಎಂಬ ಟೀಕೆ ವ್ಯಕ್ತವಾಗುತ್ತಿದೆ.  ಇದೇ ಕಾಲಕ್ಕೆ ನಿರಂತರವಾಗಿ ಸಣ್ಣಪುಟ್ಟ ವಿಚಾರಗಳಿಗೂ ಸುದ್ದಿಗೋಷ್ಠಿ ನಡೆಸುವ ಕಾಂಗ್ರೆಸ್ ಮುಖಂಡರು ಈ ಬಗ್ಗೆ ದಿವ್ಯ ನಿರ್ಲಕ್ಷ್ಯ ತಳೆದಿದ್ದಾರೆ ಎಂದೂ ಹೇಳಲಾಗುತ್ತಿದೆ.
ಅನಿಷ್ಟ ಪದ್ಧತಿಯಾದ ಕುಳವಾಡಿಕೆ, ಮಲ ಹೊರುವುದು, ಸತ್ತ ದನ ಹೂಳುವುದು, ಸವರ್ಣೀಯರ ಶವ ಸಂಸ್ಕಾರ ಮಾಡುವಂತಹ ಕೆಲಸವನ್ನು ಮಾಡಿಸಲಾಗುತ್ತಿದೆ. ಈ ಕೆಲಸಗಳನ್ನು ಮಾಡದವರಿಗೆ ಗ್ರಾಮದಲ್ಲಿ ಬಹಿಷ್ಕಾರ ಹಾಕುವಂತಹ ಆಚರಣೆ ನಡೆಯುತ್ತಿದೆ. ಇಂದಿಗೂ ಸಹ ಸಹುತೇಕ ಗ್ರಾಮಗಳಲ್ಲಿ ದಲಿತರು ಸವರ್ಣೀಯರ ದೇವಸ್ಥಾನವನ್ನು ಪ್ರವೇಶ ಮಾಡುವಂತಿಲ್ಲ, ಅವರ ಕೆರೆ- ಕಟ್ಟೆಗಳನ್ನು ಬಳಸುವಂತಿಲ್ಲ, ಸವರ್ಣೀಯರ ಮನೆ ಪ್ರವೇಶ ಬಿಡಿ, ಅವರ ಕೇರಿಯ ಪ್ರವೇಶವೂ ದಲಿತರಿಗೆ ನಿಷಿದ್ಧ.
ಜಿಲ್ಲಾಡಳಿತ ವಿಫಲ: ಹಾಸನ, ಅರಕಲಗೂಡು, ಬೇಲೂರು ತಾಲೂಕುಗಳಲ್ಲಿ ದಲಿತರ ಮೇಲೆ ಸಾಮಾಜಿಕ ಬಹಿಷ್ಕಾರ ಹಾಕಿ ಜಾತಿ ನಿಂದನೆ ಹಾಗೂ ಅಂಬೇಡ್ಕರ್ ಭಾವಚಿತ್ರ ಹಾಗೂ ನಾಮ ಫಲಕವನ್ನು ಕಿತ್ತು ಹಾಕಿ ದೌರ್ಜನ್ಯ, ದಲಿತರ ಮೇಲೆ ಹಲ್ಲೆಯಂತಹ ಪ್ರಕರಣಗಳು ಹೆಚ್ಚಾಗುತ್ತಿದೆ.  ಇಂತಹ ಪ್ರಕರಣಗಳು ಜಿಲ್ಲೆಯಲ್ಲಿ ನಡೆಯುತ್ತಿದ್ದರು ಸಹ ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸಿ ಕ್ರಮಕೈಗೊಳ್ಳವುದರಲ್ಲಿ ವಿಫಲವಾಗುತ್ತಿದೆ.
ಹೆಚ್ಚುತ್ತಿರುವ ಪ್ರಕರಣಗಳು: ಇತ್ತೀಚೆಗೆ ಜಿಲ್ಲೆಯ ಅರಕಲಗೂಡು ತಾಲೂಕಿನ ಕೊಣನೂರು ಹೋಬಳಿಯ ಗಂಗೂರು ಗ್ರಾಮದಲ್ಲಿ ದಲಿತರಿಂದ ಜೀತಪದ್ಧತಿ ನಡೆಸುತ್ತಿದ್ದಂತಹ ಪದ್ಧತಿ ಮಾಸುವ ಮುನ್ನವೇ ಬೇಲೂರು ತಾಲೂಕಿನ ಗಂಗೂರಿನಲ್ಲಿ ದಲಿತರಿಗೆ ದೇವಾಲಯ, ಹೋಟೆಲ್ ಪ್ರವೇಶ ನಿಶೇಷ, ಕ್ಷೌರ ಮಾಡದಂತಹ ಆಚರಣೆ ಇನ್ನು ಜೀವಂತವಾಗಿರುವುದು ಬೆಳಕಿಗೆ ಬಂದಿದೆ.
ಇದರಿಂದ ಬೇಲೂರು ತಾಲೂಕಿನ ಗಂಗೂರಿನಲ್ಲಿ ಇತ್ತೀಚೆಗೆ ಬೆಂಗಳೂರಿನ ಅಭಿಮಾನಿ ಕ್ಷೌರಿಕ ಮುತ್ತುರಾಜಜ್ಮತ್ತವರ ಸ್ನೇಹಿತರು ಗಂಗೂರು ಗ್ರಾಮಕ್ಕೆ ಭೇಟಿ ನೀಡಿ ಸಾಮೂಹಿಕವಾಗಿ ಕ್ಷೌರ ಮಾಡಿದ್ದು ವಿವಾದಕ್ಕೆ ಕಾರಣವಾಗಿ, ಪರಿಸ್ಥಿತಿ ವಿಕೋಪಕ್ಕೆ ತಿರುಗುದೆ.  ಒಟ್ಟಿನಲ್ಲಿ ಜಿಲ್ಲೆಯಲ್ಲಿ ಅಸ್ಪೃಶ್ಯತೆ ಆಚರಣೆಯು ಒಂದೊಂದಾಗಿ ಬೆಳಕಿಗೆ ಬರುತ್ತಿರುವುದು ವಿಪರ್ಯಾಸ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement