ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಕರಗಡ ಯೋಜನೆ ಪೂರ್ಣಕ್ಕೆ ಆಗ್ರಹಿಸಿ ಧರಣಿ

Srinivasa Murthy VN
Updated On : 9 Jul 2014, 10:39 am

ಕನ್ನಡಪ್ರಭ ವಾರ್ತೆ, ಜಾವಗಲ್, ಜು 9
ಜಾವಗಲ್ ಹೋಬಳಿ ನೇರ್ಲಿಗೆ ಗ್ರಾಮಪಂಚಾಯ್ತಿ ವ್ಯಾಪ್ತಿಯ ಗ್ರಾಮಸ್ಥರು ಕುಡಿಯುವ ನೀರಿನ ಕರಗಡ ಯೋಜನೆಯ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಿ ಕೊಡುವಂತೆ ಒತ್ತಾಯಿಸಿ ಚಿಕ್ಕಮಗಳೂರು ಜಿಲ್ಲಾಧಿಕಾರಿಗಳ ಕಚೇರಿಯ ಎದುರು ಅಹೋರಾತ್ರಿ ಧರಣಿ ನಡೆಸಿದರು.
 ಕುಡಿಯುವ ನೀರಿನ ಕರಗಡ ಯೋಜನೆಯಿಂದ ಅರಸೀಕೆರೆ ತಾಲೋಕಿನ ಜಾವಗಲ್ ಹೋಬಳಿಯ ನೇರ್ಲಿಗೆ, ತಿಮ್ಮನಹಳ್ಳಿ, ಗುಡ್ಡೆನಹಳ್ಳಿ, ಎಸ್. ಕಲ್ಲಹಳ್ಳಿ, ಕಾಮೆನಹಳ್ಳಿ, ಡಿಗ್ಗೆನಹಳ್ಳಿ, ಕಡೂರು ತಾಲೋಕಿನ ನಿಡಘಟ್ಟ, ತಿಪ್ಪನಹಳ್ಳಿ, ಚಟ್ಟನಹಳ್ಳಿ, ಟಿಬಿ ಕಾವಲ್ ಸೇರಿದಂತೆ 15-20 ಹಳ್ಳಿಗಳ ಅಂತರ್ಜಲ ಹೆಚ್ಚಿಸುವ ಮತ್ತು ಜನಜಾನುವಾರುಗಳಿಗೆ ಕುಡಿಯುವ ನೀರಿನ ಆಸರೆಯಾಗಿರುವ ಹಿರೇಕಟ್ಟೆ ಒಡ್ಡು ಹಾಗೂ ಬೊಮ್ಮಗಟ್ಟೆಗೆ ನೀರು ತುಂಬಿಸುವ ಕಾಮಗಾರಿಯು ಅಧಿಕಾರಿಗಳು ಮತ್ತು ಗುತ್ತಿಗೇದಾರರ ನಿರ್ಲಕ್ಷ್ಯದಿಂದಾಗಿ ಮಂದಗತಿಯಲ್ಲಿ ಸಾಗುತ್ತಿದೆ ಎಂದು ಆರೋಪಿಸಿದರು.
ಕಾಮಗಾರಿ ಪೂರ್ಣಗೊಳಿಸಿ:  ಈ ಭಾಗದ ಜನ, ಜಾನುವಾರುಗಳಿಗೆ ಅನುಕೂಲ ಕಲ್ಪಿಸುವ ಹಿರೇಕಟ್ಟೆ ಒಡ್ಡು ಹಾಗೂ ಬೊಮ್ಮಗಟ್ಟೆಗೆ ಕುಡಿಯುವ ನೀರಿನ ಕರಗಡ ಯೋಜನೆಯನ್ನು ಕೂಡಲೆ ಜಾರಿಗೊಳಿಸುವಂತೆ ನೂರಾರು ರೈತರು ಪಕ್ಷಭೇದ ಮರೆತು ಚಿಕ್ಕಮಗಳೂರು ಜಿಲ್ಲಾಧಿಕಾರಿಗಳ ಕಚೇರಿಯ ಎದುರು ಧರಣಿ ನಡೆಸಿ ಗ್ರಾಮಸ್ಥರು ಒತ್ತಾಯಿಸಿದರು.
 ಚಿಕ್ಕಮಗಳೂರು ಜಿಲ್ಲಾಧಿಕಾರಿ ಶೇಖರಪ್ಪ ಮನವಿ ಪತ್ರ ಸ್ವೀಕರಿಸಿ ಮಾತನಾಡಿ, ಇನ್ನು 21ದಿನಗಳೊಳಗೆ ಕಾಮಗಾರಿಯನ್ನು ಪೂರ್ಣಗೊಳಿಸುವುದಾಗಿ ಭರವಸೆ ನೀಡಿದರು.
 ಪ್ರತಿಭಟನೆಯಲ್ಲಿ ನಿರಂಜನ್, ಸುರೇಶ್, ಎನ್.ಆರ್.ಧನಂಜಯ, ಶಿವಾನಂದ್, ರಾಜು, ಈಶ್ವರಪ್ಪ, ಓಂಕಾರಪ್ಪ, ಎನ್.ಜಿ.ಶಂಕರಪ್ಪ, ಪ್ರಕಾಶ್ ಮತ್ತಿತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement