ಕಾಫಿ ಬೀಜ ಉದುರದಂತೆ ಮುಂಜಾಗ್ರತೆ ವಹಿಸಿ
ಹಾಸನ: ಕಾಫಿ ಬೆಳೆಯುವ ಕರ್ನಾಟಕ ಮತ್ತು ಕೇರಳ ಪ್ರಾಂತ್ಯಗಳ ಹೆಚ್ಚಿನ ಪ್ರದೇಶಗಳಲ್ಲಿ ಕಳೆದ ವರ್ಷ ಅಕ್ಟೋಬರ್ನಲ್ಲಿ ಕೊನೆಗೊಂಡ ಹಿಂಗಾರು ಮಳೆ ಸುಮಾರು 120 ರಿಂದ 150 ದಿನಗಳಷ್ಟು ದೀರ್ಘವಾದ ಒಣ ಹವೆಯ ವಾತಾವರಣವನ್ನು ಸೃಷ್ಟಿ ಮಾಡಿದೆ.
ಇದರೊಂದಿಗೆ ಈ ವರ್ಷದಲ್ಲಿ 2ರಿಂದ 3 ಕಂತುಗಳಲ್ಲಿ ಬಿದ್ದ ಹೂ ಮಳೆಯಿಂದಾಗಿ, ಅದರಲ್ಲೂ ವಿಶೇಷವಾಗಿ ರೊಬಸ್ಟಾ ಗಿಡಗಳಲ್ಲಿ 2ರಿಂದ 3 ಸಲ ಹೂವು ಅರಳಿದ್ದು, ಬೆಳವಣಿಗೆ ಆಗುತ್ತಿರುವ ಕಾಫಿ ಕಾಯಿಗಳು ಬೇರೆ ಬೇರೆ ಗಾತ್ರಗಳನ್ನು ಹೊಂದಿರುತ್ತವೆ.
ಕಾಂಡ ಕೊರಕ ಕೀಟ: ಇದರ ನಂತರ ಏಪ್ರಿಲ್ ಮತ್ತು ಮೇ ತಿಂಗಳುಗಳಲ್ಲಿ ಒಳ್ಳೆಯ ಬೇಸಿಗೆ ಮಳೆಯಾಗಿತ್ತ್ತು. ಆದರೂ ಹಗಲಿನ ಉಷ್ಣತೆ ಹೆಚ್ಚಳವಾಗಿದ್ದರ ಪರಿಣಾಮವಾಗಿ, ಅರೇಬಿಕಾ ಗಿಡಗಳಲ್ಲಿ ಬಿಳಿ ಕಾಂಡ ಕೊರಕ ಕೀಟ ಮತ್ತು ಎಲೆ ತುಕ್ಕುರೋಗದ ಬಾಧೆ ಕಾಣಿಸಿಕೊಂಡಿದೆ ಎಂದು ಚಿಕ್ಕಮಗಳೂರು ಕೇಂದ್ರೀಯ ಕಾಫಿ ಸಂಶೋಧನಾ ಸಂಸ್ಥೆಯ ಸಂಶೋಧನಾ ನಿರ್ದೇಶಕರು ತಿಳಿಸಿದ್ದಾರೆ.
ಈ ದುರ್ಬಲ ಮುಂಗಾರಿನ ಕಾರಣ ಕರ್ನಾಟಕ ಮತ್ತು ಕೇರಳ ಪ್ರಾಂತ್ಯಗಳ ಬಹುತೇಕ ಎಲ್ಲಾ ಕಾಫಿ ಬೆಳೆಯುವ ಪ್ರದೇಶಗಳಲ್ಲಿ ಜೂನ್ ಕೊನೆಯ ಹೊತ್ತಿಗೆ ಶೇ.40 ರಿ0ದ 50ರಷ್ಟು ಮಳೆಯ ಕೊರತೆ ಉಟಾಗಿದೆ. ಹಿಂಗಾರು ಮಳೆ ಭಾವಕ್ಕೆ ಒಳಪಡುವ ತಮಿಳುನಾಡಿನಲ್ಲಿ ಇದೇ ಅವಧಿಗೆ ಶೇ.10 ರಿ0ದ 15ರಷ್ಟು ಕೊರತೆ ಕಂಡುಬಂದಿದೆ ಎಂದು ಹೇಳಿದ್ದಾರೆ.
ರೋಗ ಉಲ್ಬಣ ಸಾಧ್ಯತೆ: ದುರ್ಬಲ ಮುಂಗಾರಿನ ಪರಿಸ್ಥಿತಿಯು ಇನ್ನೂ ಕೆಲವು ವಾರಗಳವರೆಗೆ ಮುಂದುವರಿದದ್ದೇ ಆದಲ್ಲಿ, ರೊಬಸ್ಟಾ ಗಿಡಗಳಲ್ಲಿ ಇನ್ನೂ ಹೆಚ್ಚಿನ ಎಳೆಯ ಕಾಫಿ ಕಾಯಿಗಳು ಉದುರುವ ಸಭವವಿದೆ.
ಇದರೊಂದಿಗೆ ಆಗಾಗ್ಗೆ ಬರುವ ಮಳೆ, ಪ್ರಖರವಾದ ಬಿಸಿಲು, ಮುಂಜಾನೆಯಲ್ಲಿ ಬೀಳುವ ಮಂಜು ಇವುಗಳಿಂದಾಗಿ ಎಲೆ ತುಕ್ಕು ರೋಗವೂ ಉಲ್ಬಣಗೊಳ್ಳುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ. ಆದ್ದರಿಂದ ಮುನ್ನೆಚ್ಚರಿಕೆಯ ಸಲುವಾಗಿ ಬೆಳೆಗಾರರು ಕೆಲವು ಅಗತ್ಯ ಕ್ರಮ ಕೈಗೊಳ್ಳುವುದು ಸೂಕ್ತವಾಗಿದೆ.