ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ನಿರುದ್ಯೋಗಿಗಳಿಗೆ ತರಬೇತಿಗಳು ಸಹಕಾರಿ

Srinivasa Murthy VN
Updated On : 9 Jul 2014, 10:37 am

ಹಾಸನ: ಗ್ರಾಮೀಣ ಪ್ರದೇಶದ ನಿರುದ್ಯೋಗಿ ಯುವಕ-ಯುವತಿಯರು ಉಚಿತವಾಗಿ ನೀಡುತ್ತಿರುವ ತರಬೇತಿಗಳನ್ನು ಸದುಪಯೋಗಪಡಿಸಿಕೊಂಡಲ್ಲಿ, ಪ್ರತಿಯೊಬ್ಬರ ಬದುಕು ಹಸನಾಗುತ್ತದೆ ಎಂದು ಕೆನರಾ ಸ್ವ ಉದ್ಯೋಗ ಕೇಂದ್ರ ತರಬೇತಿ ಸಂಸ್ಥೆ ನಿರ್ದೇಶಕ ಶ್ರೀನಿವಾಸ್ ಮೂರ್ತಿ ತಿಳಿಸಿದರು.
ತಾಲೂಕಿನ ಕುಪ್ಪಳ್ಳಿ, ಮಣಚನಹಳ್ಳಿ, ಹೂವಿನಹಳ್ಳಿ, ಹೊಸೂರು, ಕಡದರ ವಳ್ಳಿ, ಸಾಲಗಾಮೆ, ಗುಳ್ಳೇನಹಳ್ಳಿ, ಗ್ರಾಮಗಳಲ್ಲಿನ ಯುವಜನತೆ ಸ್ವಸಹಾಯ ಸಂಘದ ಸದಸ್ಯೆಯರಿಗೆ ಹಾಗೂ ರೈತರಿಗೆ ಮಾಹಿತಿ ನೀಡಲಾಯಿತು.  ಹಾಸನದಲ್ಲಿ ಸ್ಥಾಪಿತವಾಗಿರುವ ರುಡ್‌ಸೆಟ್‌ನಿಂದ 18-45ವರ್ಷದೊಳಗಿನ ಎಲ್ಲಾ ಜನತೆಗೂ ಅವರ ಆಸಕ್ತಿಗನುಗುಣವಾಗಿ ಮೋಟಾರ್ ರಿವೈಂಡಿಂಗ್, ಕಂಪ್ಯೂಟರ್ ಕಲಿಕೆ, ಸಾವಯವ ಗೊಬ್ಬರ ತಯಾರಿಸುವ ವಿಧಾನ, ಬ್ಯೂಟಿಷಿಯನ್ ಕಲಿಕೆ, ಉಪ್ಪಿನಕಾಯಿ ಮತ್ತು ಹೊಲಿಗೆ, ಕಸೂತಿ ಮುಂತಾದ ತರಬೇತಿಗಳು ನಿರಂತರವಾಗಿ ನಡೆಯುತ್ತಿರುತ್ತವೆ. ಗ್ರಾಮದ ಯುವಜನರು ತರಬೇತಿಯಲ್ಲಿ ಪಾಲ್ಗೊಂಡು ಆರ್ಥಿಕಮಟ್ಟ ಸುಧಾರಿಸಿಕೊಳ್ಳಬಹುದು ಎಂದು ಹೇಳಿದರು.
ಅಮೂಲ್ಯ ಆರ್ಥಿಕ ಸಾಕ್ಷರತಾ ಕೇಂದ್ರ ದ ಸಲಹೆಗಾರ ಬಸವರಾಜು ಮಾತನಾಡಿದರು.
ಕಾರ್ಯಕ್ರಮದಲ್ಲಿ ಗ್ರಾಮದ ಸ್ವ ಸಹಾಯ ಸಂಘದ ಸದಸ್ಯರು, ಮಹಿಳೆಯರು, ರೈತರು ಭಾಗವಹಿಸಿದ್ದರು. ರಾಷ್ಟ್ರೀಯ ಸೇವಾ ಕಾರ್ಯಕರ್ತ ಆರ್.ಜಿ. ಗಿರೀಶ್ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement