ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ವಚನಗಳನ್ನು ಸರಿಯಾಗಿ ಅರ್ಥೈಸಿಕೊಂಡಲ್ಲಿ ಬದುಕು ಹಸನು; ಸತ್ಯನಾರಾಯಣ ಬಾಪು

Srinivasa Murthy VN
Updated On : 9 Jul 2014, 10:39 am

ಕನ್ನಡಪ್ರಭ ವಾರ್ತೆ. ಹೊಳೆನರಸೀಪುರ, ಜು.9
ವಚನ ಸಾಹಿತ್ಯ ವಿಶಿಷ್ಟ ಮೌಲ್ಯಗಳ ಗಣಿ.  ವಚನಕಾರರು ರಚಿಸಿದ ವಚನಗಳನ್ನು ಸರಿಯಾಗಿ ಅರ್ಥೈಸಿಕೊಂಡಲ್ಲಿ ನಮ್ಮ ಬದುಕು ಹಸನಾಗುವುದರಲ್ಲಿ ಸಂಶಯವಿಲ್ಲ ಎಂದು ಉಪಾಧ್ಯಾಯರಾದ ಸತ್ಯನಾರಾಯಣ ಬಾಪು ಅಭಿಪ್ರಾಯ ವ್ಯಕ್ತಪಡಿಸಿದರು.
 ಪಟ್ಟಣದ ಆದರ್ಶ ವಿದ್ಯಾಶಾಲೆಯಲ್ಲಿ ತಾಲೂಕು ವಚನ ಸಾಹಿತ್ಯ ಅಕಾಡೆಮಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಶಾಲೆಗೊಂದು ವಚನಗಾಯನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಜೀವನ ಮೌಲ್ಯಗಳ ಆಕರಗಳು ವಚನಗಳು, ಕಳಬೇಡ, ಕೊಲಬೇಡ ಹುಸಿಯ ನುಡಿಯ ಬೇಡ ಎಂಬ ವಚನವು ಅಂತರಂಗ ಮತ್ತು ಬಹಿರಂಗ ಶುದ್ಧಿಯನ್ನು ಮಾಡಿಕೊಳ್ಳುವ ಬಗೆಯನ್ನು ವಿವರಿಸುತ್ತದೆ, ಅಕ್ಕ ಮಹಾದೇವಿ ಸಹ ಮನುಷ್ಯ ಲೌಖಿಕ ಜಗತ್ತಿನ ಆಕರ್ಷಣೆಗೆ ಒಳಗಾಗಿ ದೇವರನ್ನು ಮರೆತು ಅಂಧಕಾರದಲ್ಲಿ ಮುಳುಗುವವರನ್ನು ಮೇಲೆತ್ತುವ ಪ್ರಯತ್ನವನ್ನು ವಚನಗಳ ಮೂಲಕ ಮಾಡಿದ್ದಾಳೆ ಎಂದರು.
ಸಾಹಿತ್ಯ ಗಮನಿಸಿ: ತೀರ್ಪುಗಾರರಾಗಿ ಆಗಮಿಸಿದ್ದ ಶಿಕ್ಷಕರು, ಹರಿಕಥಾ ವಿದ್ವಾನ್ ಹಾಗೂ ರಾಜ್ಯ ಪ್ರಶಸ್ತಿ ಪುರಸ್ಕೃತ ಕೆ.ಶಿವಕುಮಾರಾಚಾರಿ ಮಾತನಾಡಿ, ಯಾವುದೇ ಗಾಯನವನ್ನು ಹಾಡುವಾಗ ಸಾಹಿತ್ಯದ ಕಡೆಗೆ ಸಹ ಗಮನ ಕೊಡಬೇಕು. ರಾಗ, ತಾಳಗಳ ಜೊತೆಗೆ ಸಾಹಿತ್ಯ ಸ್ಪಷ್ಟತೆಯೂ ಮುಖ್ಯ ಎಂದರು.
 ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತಾಲೂಕು ವಚನ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಎಂ.ಸಿ.ಕುಮಾರಸ್ವಾಮಿ ಮಾತನಾಡಿ, ವಚನಗಳ ಗಾಯನದಿಂದ ಮನಸ್ಸು ಹಗುರವಾಗುತ್ತದೆ. ಮೃದು ವಚನ ಹಿತವಾದ ಮನಸ್ವಾದವನ್ನು ನೀಡುತ್ತದೆ ಎಂದರು.
ಸ್ಪರ್ಧೆಯ ವಿಜೇತರು: ವಚನ ಗಾಯನ ಸ್ಪರ್ಧಯಲ್ಲಿ ಹೆಚ್.ಆರ್. ಯಶಸ್ ಗೌಡ-ಪ್ರಥಮ, ಹರ್ಷ-ದ್ವಿತೀಯ ಹಾಗೂ ಭೂಮಿಕ-ತೃತೀಯ ಬಹುಮಾನ ಪಡೆದರು.
 ಕಾರ್ಯಕ್ರಮದಲ್ಲಿ ಕಲಾವಿದವೀರಬಸಪ್ಪ, ನೀಲಮ್ಮ, ಹಿರಿಯ ಸಾಹಿತಿ ಗುಂಜೇವು ಅಣ್ಣಾಜಪ್ಪ ಹಾಗೂ ಜಾನಪದ ಪರಿಷತ್ತಿನ ಅಧ್ಯಕ್ಷ ಬಾ.ರಾ.ಸುಬ್ಬರಾಯ ಇದ್ದರು.
 ಸಂಗೀತ ಶಿಕ್ಷಕ ಭ.ರಾ.ಶ್ರೀನಿವಾಸ್ ಪ್ರಾರ್ಥಿಸಿದರು. ಗುರುಪ್ರಶಾಂತ್ ನಿರೂಪಿಸಿ, ಪ್ರಭಾರಿ ಮುಖ್ಯ ಶಿಕ್ಷಕಿ ಪ್ರತಿಮಾ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement