ವಿಕಲಚೇತನರು ಸ್ವ ಉದ್ಯೋಗಿಗಳಾಗಲಿ
ಹಾಸನ: ವಿಕಲಚೇತನ ಅಭಿವೃದ್ಧಿಗಾಗಿ ಸರ್ಕಾರವು ಉತ್ತಮ ಕಾರ್ಯಕ್ರಮ ಜಾರಿಗೆ ತಂದಿದ್ದು, ಸ್ವಾಭಿಮಾನಿಗಳಾಗಿ ಎಲ್ಲರಂತೆ ಉತ್ತಮ ಜೀವನ ಸಾಗಿಸಬೇಕೆಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಚಿದಾನಂದ್ ತಿಳಿಸಿದರು.
ಎನೇಬಲ್ ಇಂಡಿಯಾ, ಕೆನರಾ ಸ್ವ ಉದ್ಯೋಗ ತರಬೇತಿ ಸಂಸ್ಥೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಯೋಗದಲ್ಲಿ ರುಡ್ಸೆಡ್ ಹಮ್ಮಿಕೊಂಡಿದ್ದ ವಿಶೇಷ ವಿಕಲಚೇತನ ಉದ್ಯಮಶೀಲತಾ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮಾರುಕಟ್ಟೆ ವ್ಯವಸ್ಥೆ: ವಿಕಲಚೇತನರು ತಯಾರಿಸಿದ ಉತ್ಪನ್ನಗಳನ್ನು ಮಾರಾಟಕ್ಕೆ ವಾಹನದ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ. ವಿಕಲ ಚೇತನರು ಇದರ ಪ್ರಯೋಜನ ಪಡೆಯಬೇಕೆಂದರು. ಎನೇಬಲ್ ಇಂಡಿಯಾ ಸಂಸ್ಥೆ ಅಭಿವೃದ್ಧಿ ಸಲಹೆಗಾರ ಶಿವಪ್ರಸಾದ್ ಮಾತನಾಡಿ, ರಾಜ್ಯ ದಾದ್ಯಂತ ವಿಕಲಚೇತನರನ್ನು ಸ್ವ ಉದ್ಯೋಗದಲ್ಲಿ ತೊಡಗಿಸಿಕೊಳ್ಳಬೇಕೆಂದರು. ಜಿಲ್ಲಾ ಅಂಗವಿಕಲ ಕಲ್ಯಾಣಾಧಿಕಾರಿ ಎ.ಟಿ.ಮಲ್ಲೇಶ್, ರುಡ್ಸೆಡ್ನ ನಿರ್ದೇಶಕ ಶ್ರೀನಿವಾಸಮೂರ್ತಿ, ಎಚ್.ಆರ್. ರವಿ ಇದ್ದರು.