ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಗಂಜಿಗೆರೆ ಶಾಲೆಯಲ್ಲಿ ವನ ಮಹೋತ್ಸವ

Srinivasa Murthy VN
Updated On : 13 Jul 2014, 11:18 am

ಆಲೂರು: ತಾಲೂಕಿನ ಗಂಜಿಗೆರೆಯ  ಶ್ರೀ ವೆಂಕಟರಮಣಸ್ವಾಮಿ  ಪ್ರೌಢಶಾಲೆಯಲ್ಲಿ  ಇತ್ತೀಚೆಗೆ  ವನಮಹೋತ್ಸವ ಕಾರ್ಯಕ್ರಮವನ್ನು ಆಚರಿಸಲಾಯಿತು. ಕಾರ್ಯಕ್ರಮದಲ್ಲಿ  ಸಂಸ್ಥೆಯ ಕಾರ್ಯದರ್ಶಿ ಬಿ.ಸಿ. ರಾಮೇಗೌಡ ಮಾತನಾಡಿ, ಪರಿಸರದ ಬಗ್ಗೆ ಕಾಳಜಿ ವಹಿಸಬೇಕು. ಸಸಿಗಳನ್ನು  ನೆಡುವ ಜತೆಗೆ  ಪೋಷಿಸುವ ಕೆಲಸ ಮಾಡಬೇಕು ಎಂದು  ವಿದ್ಯಾರ್ಥಿಗಳಿಗೆ  ತಿಳಿಸಿದರು.  ಕಾರ್ಯಕ್ರಮದಲ್ಲಿ  ರಾಯರಕೊಪ್ಪಲು ಕೆನರಾ ಬ್ಯಾಂಕಿನ ವ್ಯವಸ್ಥಾಪಕ ಪ್ರಾಣೇಶ್, ಮಗ್ಗೆ ಬ್ಯಾಂಕ್ ವ್ಯವಸ್ಥಾಪಕ  ನಾಗರಾಜ್, ಶಾಲೆಯ ಮುಖ್ಯೋಪಾಧ್ಯಾಯಿನಿ ಭವಾನಿ, ಸಹ ಶಿಕ್ಷಕರು, ಮುಖಂಡರಾದ ಕುಮಾರ್, ಧರ್ಮಪ್ಪ ಇತರರು ಇದ್ದರು.

ಬೇಲೂರಿನಲ್ಲಿ ಬೀದಿಬದಿ ವ್ಯಾಪಾರಿಗಳ ಸಮೀಕ್ಷೆ
ಬೇಲೂರು: ಪುರಸಭೆ ವ್ಯಾಪ್ತಿಯಲ್ಲಿನ ಬೀದಿಬದಿ ವ್ಯಾಪಾರಿಗಳಿಗೆ ಸೌಲಭ್ಯಗಳ ಪಡೆಯಲು ಗುರುತು ಚೀಟಿ ನೀಡಲಾಗುತ್ತಿದೆ ಎಂದು ಪುರಸಭೆ ಮುಖ್ಯಾಧಿಕಾರಿ ಬಸವರಾಜು ತಿಳಿಸಿದರು.  ಬೇಲೂರು ಪಟ್ಟಣ ವ್ಯಾಪ್ತಿಯಲ್ಲಿ 83 ಜನ ಬೀದಿಬದಿ ವ್ಯಾಪಾರಿಗಳಿದ್ದು ಅವರನ್ನು ಗುರುತಿಸಲಾಗಿದ್ದು ಅವರಿಗೆಲ್ಲರಿಗೆ ಗುರುತುಪತ್ರ ನೀಡಲಾಗುವುದು. ಗುರುತುಪತ್ರ ಇದ್ದವರು ಐಡಿಎಸ್‌ಎಂಟಿ ವಾಣಿಜ್ಯ ಮಳಿಗೆ ಆವರಣದಲ್ಲಿ ನೀಡಿರುವ ವ್ಯಾಪಾರಿಕಟ್ಟೆಗಳಲ್ಲಿ ವ್ಯಾಪಾರ ಮಾಡಬೇಕಿದೆ.  ಇದನ್ನು ಹೊರತುಪಡಿಸಿ ರಸ್ತೆಯ ಬದಿ ವ್ಯಾಪಾರ ಮಾಡಿದರೆ ಅಂತರವರ ಮೇಲೆ ಕಾನೂನು ಕ್ರಮ ಕೈಗೊಂಡು ದಂಡ ವಿಧಿಸಲಾಗುವುದು. ಇದಕ್ಕಾಗಿ 15 ದಿನ ಕಾಲಾವಕಾಶ ನೀಡಲಾಗುವುದು ಎಂದು ಹೇಳಿದರು.  ಆರೋಗ್ಯ ನಿರೀಕ್ಷಕ  ವೆಂಕಟೇಶ್ ಇತರರು ಇದ್ದರು.

ಪ್ರತಿಭಾ ಪುರಸ್ಕಾರ
ಆಲೂರು: ತಾಲೂಕಿನ ಗಂಜಿಗೆರೆಯ ವೆಂಕಟರಮಣಸ್ವಾಮಿ ಪ್ರೌಢಶಾಲೆಯಲ್ಲಿ ಇತ್ತೀಚೆಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಕಾರ್ಯಕ್ರಮವನ್ನು ಕರ್ನಾಟಕ ಬ್ಯಾಂಕ್ ವ್ಯವಸ್ಥಾಪಕ ನಾಗರಾಜ್ ಉದ್ಘಾಟಿಸಿ ಮಾತನಾಡಿದರು. ಕಳೆದ ಸಾಲಿನಲ್ಲಿ ಎಸ್ಸೆಸ್ಸೆಲ್ಸಿಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಬಹುಮಾನ ನೀಡಿ ಪುರಸ್ಕರಿಸಲಾಯಿತು. ರಾಯರಕೊಪ್ಪಲು ಕೆನರಾ ಬ್ಯಾಂಕ್‌ವತಿಯಿಂದ ಮಕ್ಕಳಿಗೆ ಬಹುಮಾನ ನೀಡಲಾಯಿತು. ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಕಾರ್ಯದರ್ಶಿ ಬಿ.ಸಿ. ರಾಮೇಗೌಡ  ಮಾತನಾಡಿದರು. ಶಾಲೆಯ  ಮುಖ್ಯೋಪಾಧ್ಯಾಯಿನಿ  ಭವಾನಿ, ಸಹ ಶಿಕ್ಷಕರು, ಧರ್ಮಪ್ಪ,  ಕುಮಾರ್ ಇದ್ದರು.

ಮಹಿಳೆಯರು ಸ್ವಉದ್ಯೋಗಿದಲ್ಲಿ ತೊಡಗಿ
ಹಾಸನ: ಮಹಿಳೆಯರು ಹೆಚ್ಚಾಗಿ ಸ್ವ ಉದ್ಯೋಗದಲ್ಲಿ  ತೊಡಗಿದಲ್ಲಿ ಮಹಿಳೆಯರ ಸಕಾರಾತ್ಮಕ ಅಭಿವೃದ್ಧಿ ಉಂಟಾಗಲು ಸಾಧ್ಯ ಎಂದು ಸಿಎಂಎಸ್‌ಎಸ್‌ಎಸ್ ಸಂಸ್ಥೆಯ ನಿರ್ದೇಶಕ ಮಾರ್ಸೆಲ್ ಪಿಂಟೊ ಹೇಳಿದರು. ಆಲೂರು ತಾಲೂಕಿನ ಮಗ್ಗೆಯ  ಚರ್ಚಿನ ಸಮದಾಯ ಭವನದಲ್ಲಿ ಇತ್ತೀಚೆಗೆ ಬೆಂಗಳೂರಿನ ಪ್ರಾಂತೀಯ ಸಮಾಜ ಸೇವಾ ಸಂಸ್ಥೆ ಹಾಗೂ ಹಾಸನದ ಚಿಕ್ಕಮಗಳೂರು ಮಲ್ಟಿಪರ್ಪಸ್ ಸೋಷಿಯಲ್ ಸರ್ವೀಸ್ ಸೊಸೈಟಿ ಸಂಸ್ಥೆ ಏರ್ಪಡಿಸಿದ್ದ ಮಹಿಳೆಯರಿಗೆ ತರಬೇತಿ ಮತ್ತು ಉದ್ಯೋಗ ಬೆಂಬಲ ಕಾರ್ಯಕ್ರಮದಲ್ಲಿ ಮಾತನಾಡಿದರು.  ಮಗ್ಗೆ ಚರ್ಚ್‌ನ ಧರ್ಮಗುರು ಅಂತೋಣಿರಾಜ್ ಮಾತನಾಡಿದರು.
ಸಭೆಯಲ್ಲಿ ಸಹಕಾರ ಸಂಘ ಮಾಡುವ ಬಗ್ಗೆ ಚರ್ಚಿಸಿ ಒಪ್ಪಿಗೆ ಸೂಚಿಸಿ, ಪ್ರಕೃತಿ ವಿವಿಧೋದ್ದೇಶ ಸಹಕಾರ ಸಂಘ ಎಂದು ನಾಮಕರಣ ಮಾಡಲಾಗಿದೆ.  ಪ್ರವರ್ತಕರಾಗಿ, ಅನ್ಷಿಲ್ಲಾ, ರಾಧಮ್ಮ, ಪ್ರಭ, ಮಂಗಳ, ಮಂಜುಳ, ನಾಗಮ್ಮ, ಲೀನಾ ಮೇರಿ, ದಾಕ್ಷಾಯಿಣಿ, ಕೋಮಲ, ಕವಿತಾ, ಲಲಿತಾ  ಮತ್ತು ಮುಖ್ಯ ಪ್ರವರ್ತಕರಾಗಿ ಲೂಸಿ ಆಯ್ಕೆಯಾಗಿದ್ದಾರೆ.

ಗುಂಡು ತಗುಲಿ ಮಹಿಳೆಗೆ ಗಾಯ
ಹಾಸನ: ಶಿಕಾರಿಗಳು ಹೊಡೆದ ಗುಂಡು ಮಹಿಳೆಯೋರ್ವಳ ಕಾಲಿಗೆ ತಗಲಿ ಗಾಯವಾಗಿರುವ ಘಟನೆ ಭಾನುವಾರ ನಡೆದಿದೆ. ಬೇಲೂರು ತಾಲೂಕಿನ ಹಳೇಬೀಡಿನ ಗೌರಿಕೊಪ್ಪಲಿನ ವಾಸಿ ಜಯಮ್ಮ (35) ಎಂಬ ಮಹಿಳೆಯ ಜಮೀನಿನಲ್ಲಿ ಕೆಲಸ ಮಾಡುವಾಗಿ ಶಿಕಾರಿಗಳ ಗುಂಪೊಂದು ಹಂದಿಗೆ ಹೊಡೆದ ಗುಂಡು ಈಕೆಯ ಕಾಲಿಗೆ ತಾಗಿ ತೀವ್ರವಾಗಿ ಗಾಯಗೊಂಡಿದೆ. ಆಕೆಯನ್ನು ನಗರದ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ವಿಷಯ ತಿಳಿದ ಪೊಲೀಸರು ಸ್ಥಳಕ್ಕಾಗಿಮಿಸಿ ಶಿಕಾರಿಗಳ ತಂಡವನ್ನು ಸೆರೆ ಹಿಡಿಯಲು ಮುಂದಾಗಿದ್ದು, ಒಬ್ಬ ಆರೋಪಿ ಸೆರೆ ಸಿಕ್ಕಿದ್ದು ಉಳಿದವರು ಪರಾರಿಯಾಗಿದ್ದಾರೆ.

ಹಾಸ್ಯ ಮನೋವಿಕಾಸಕ್ಕೂ ಪೂರಕ: ಪ್ರೊ.ನೀ. ಗಿರಿಗೌಡ
ಮೈಸೂರು: ಹಾಸ್ಯ ಕೇವಲ ಮನರಂಜನೆಗೆ ಮಾತ್ರ ಸೀಮಿತವಾಗಿಲ್ಲ. ಅದು ಮನೋವಿಕಾಸಕ್ಕೂ ಪೂರಕವಾಗಿದೆ ಎಂದು ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಪ್ರೊ.ನೀ. ಗಿರಿಗೌಡ ಹೇಳಿದರು. ನಾಗನವ ಕಲಾ ಸಾಹಿತ್ಯ ವೇದಿಕೆಯು ಹಿರಣ್ಮಯಿ ಪ್ರತಿಷ್ಠಾನದ ಸಹಯೋಗದಲ್ಲಿ ಯರಗನಹಳ್ಳಿಯಲ್ಲಿ ಏರ್ಪಡಿಸಿದ್ದ ಹಾಸ್ಯ ಕಾರಂಜಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಮ್ಮ ಜೀವನದ ಭಾವನೆಗಳನ್ನು ಅಭಿವ್ಯಕ್ತಿಸಲು ನವರಸಗಳ ನೆರವಿದೆ. ಅದರಲ್ಲಿ ಹಾಸ್ಯ ರಸ ಪ್ರಮುಖವಾಗಿದೆ. ನಗು ಮತ್ತು ಅಳುವಿನ ಮಿಶ್ರಣವೇ ಈ ಹಾಸ್ಯ. ನಗು ಮತ್ತು ಅಳುವಿನ ನಡುವೆ ಕೂದಲೆಳೆಯ ಅಂತರವಿದೆ ಎಂದರು. ಇದೇ ವೇಳೆ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಾದ ಬಿ.ಜ್ಯೋತಿ, ಜೆ. ಗೌತಮ್, ಹೇಮಂತ್ ಪ್ರಸಾದ್, ಲಕ್ಷ್ಮೀ ಅವರನ್ನು ಸನ್ಮಾನಿಸಲಾಯಿತು. ನಾಗನವ ಕಲಾ ಸಾಹಿತ್ಯ ವೇದಿಕೆ ಅಧ್ಯಕ್ಷ ಹೊಮ್ಮ ಮಂಜುನಾಥ್, ಪ್ರಾಧ್ಯಾಪಕಿ ಡಾ.ಕೆ.ಎನ್. ಲೋಲಾಕ್ಷಿ, ಎ. ಸಂಗಪ್ಪ, ಸಿ.ಎಸ್.ರವಿ, ವರ್ಷಿಣಿ, ಎ.ಸಚಿನ್, ಪುನೀತ್, ಶಾಂತಶ್ರೀ, ಬಿ.ಕೆ. ನಾಗವೇಣಿ, ಕಾವ್ಯ, ಮುಖ್ಯ ಶಿಕ್ಷಕ ಪಿ ಮಹದೇವಸ್ವಾಮಿ, ಶಿಕ್ಷಕರಾದ ಮುನೀರ್‌ಖಾನ್, ಓಂಕಾರಪ್ಪ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement