ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ದೇವಾಲಯಕ್ಕೆ ಬಸ್ ಸೌಲಭ್ಯ ಕಲ್ಪಿಸಲು ಆಗ್ರಹ

Srinivasa Murthy VN
Updated On : 14 Jul 2014, 11:00 am

ನುಗ್ಗೇಹಳ್ಳಿ (ಚನ್ನರಾಯಪಟ್ಟಣ ತಾ): ಹಾಸನ ತಾಲೂಕಿನ ದುದ್ದ ಹೋಬಳಿ ಮುದಿಗೆರೆಯ ಓಂಕಾರೇಶ್ವರ ದೇವಾಲಯಕ್ಕೆ ಬರುವ ಭಕ್ತರ ಅನುಕೂಲಕ್ಕೆ ಬಸ್ ಸೌಕರ್ಯ ಒದಗಿಸುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಈ ದೇವಾಲಯಕ್ಕೆ ಬರಲು ಗಂಡಸಿಹಾಂಡ್ ಪೋಸ್ಟ್‌ನಿಂದ ಹಾಸನದ ರಸ್ತೆಯಲ್ಲಿ 7 ಕಿ.ಮೀ ಹೋಗಿ ಎಡಕ್ಕೆ 3 ಕಿ.ಮೀ ಒಳಗೆ ಹೋಗಬೇಕು ದುದ್ದದಿಂದ 10 ಕಿ.ಮೀ ಅಟ್ಟವರ ಗ್ರಾಮದಿಂದ 2 ಕಿ.ಮೀ ಆಗುತ್ತದೆ. ಈ ದೇವಾಲಯಕ್ಕೆ ಡಾಂಬರ್ ರಸ್ತೆ ಇದೆ. ಬಸ್ ಸೌಕರ್ಯ ಒದಗಿಬೇಕೆಂದು ಭಕ್ತರ ಕೋರಿಕೆಯಾಗಿದೆ.
ಮಹಿಮೆಯಿಂದ ಬರುವ ಭಕ್ತರ ಸರ್ವ ಸಂಕಷ್ಟಗಳನ್ನು ಪರಿಹರಿಸಿ ನಂಬಿದ ಎಲ್ಲಾ ಜನಾಂಗದವರು ನಿತ್ಯ ಬಂದು ಪೂಜೆ ಸಲ್ಲಿಸುತ್ತಿರುವುದು ವಿಶೇಷವಾಗಿದೆ. ಇಲ್ಲಿನ ದೇವರನ್ನು ಪ್ರಾರ್ಥಿಸಿದರೆ ಯಾವುದೇ ಕಷ್ಟದ ಕೆಲಸಗಳು ಸುಗಮವಾಗಿ ಆ ಕೆಲಸಗಳು ಶೀಘ್ರ ಆಗುತ್ತವೆ ಎಂದು ಎಪಿಎಂಸಿ ನಿರ್ದೇಶಕ ವಳಗೆರಹಳ್ಳಿ ಶಿವಸ್ವಾಮಿ, ಶಿವೇಗೌಡ ಹೇಳುತ್ತಾರೆ. ಇದೇ ಕಾರಣದಿಂದ ಇಲ್ಲಿಗೆ ಬರುವವರ ಸಂಖ್ಯೆ ಹೆಚ್ಚಾಗಿದೆ ಎನ್ನುತ್ತಾರೆ.
ಸಪ್ತಮಾತೃಕೆಯರು, ಭ್ರಮಾಣಿ, ಮಾಹೇಶ್ವರಿ, ವೈಷ್ಣವಿ, ವರಾಹಿ, ಇಂದ್ರಾಣಿ, ಕೌಮಾರಿ ಮತ್ತು ಚಾಮುಂಡ ದೇವಾಲಯಗಳು ಒಂಕಾರೇಶ್ವರ ದೇವಾಲಯದ ಹಿಂದಿವೆ ನಿತ್ಯ ಪೂಜೆ ನಡೆಯುತ್ತವೆ. ಆದ್ದರಿಂದ ಬಸ್ ಸೌಕರ್ಯ ಕಲ್ಪಿಸಬೇಕೆಂದು ಓಂಕಾರೇಶ್ವರ ಗುಡಿ ಧರ್ಮದರ್ಶಿ ಮಂಜುನಾಥ ಭಟ್ಟರು ಆಗ್ರಹಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement