ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಜಾವಗಲ್ ಹೋಬಳಿಯಲ್ಲಿ ಮಳೆ ಇಲ್ಲದೆ ರೈತರ ಕಂಗಾಲು

Srinivasa Murthy VN
Updated On : 28 Jul 2014, 9:49 am

ಕ.ಪ್ರ.ವಾರ್ತೆ ಜಾವಗಲ್ ಜು. 28
ಮಲೆನಾಡಿನಲ್ಲಿ ಬಿಡುವಿಲ್ಲದ ಮಳೆ ಸುರಿಯುತ್ತಿದ್ದರೆ ಬಯಲು ಸೀಮೆಯಲ್ಲಿ ಮಳೆ ಇಲ್ಲದೆ ರೈತರು ಕಂಗಾಲಾಗಿದ್ದಾರೆ. ಬಿತ್ತಿದ ಬೆಳೆಗೆ ಮಳೆ ಇಲ್ಲದೆ  ಬತ್ತಿ ಬರಡಾಗಿ ರೈತರನ್ನು ತೀವ್ರ ಸಂಕಷ್ಟಕ್ಕೆ ಗುರಿ ಮಾಡಿದೆ.  
ಮುಂಗಾರಿನ ಆರಂಭದಲ್ಲಿ ಮಳೆ ಬಂದಿದ್ದನ್ನು ಬಿಟ್ಟರೆ ಇದುವಗೆರೆಗೂ ಹನಿ ಮಳೆ ನೆಲಕ್ಕೆ ಬಿದ್ದಿಲ್ಲ.  ಕಳೆದ 3 ತಿಂಗಳಿಂದ ವರುಣ  ಈ ಭಾಗದತ್ತ ಕೃಪೆ ತೋರಿಲ್ಲಾ ಮುಂಗಾರು ಬೆಳೆ ಸಂಪೂರ್ಣಣ ನಾಶವಾಗಿದೆ. ಕುಡಿಯುವ ನೀರಿಗು ಪರದಾಡುವ ಸ್ಥಿತಿ ಉಂಟಾಗಿದೆ.
ರೈತರ ಕಣ್ಣೀರು: ಪ್ರತಿದಿನವೂ ಕಪ್ಪು ಮೋಡಗಳು ದಟ್ಟೈಸಿಕೊಳ್ಳುತ್ತವೆ. ಮಳೆ ಬಿದ್ದೇ ಬೀಳುತ್ತದೆ ಎಂದು ಜನ ಕಾತುರದಿಂದ ಕಾಯುವರು. ಆದರೆ ಗಾಳಿಯಲ್ಲಿ ಮೋಡ ತೇಲಿ ಕೊಂಡು ಮಳೆ ಬೀಳುವುದನ್ನು ತಡೆಯುತ್ತದೆ.  ಮುಗಿಲಿನತ್ತ ಮುಖ ಮಾಡಿದ ರೈತರು ನಿರಾಸೆಯಿಂದ ಕಣ್ಣೀರಿಡುವಂತಾಗಿದೆ.  
ಜಾವಗಲ್ ಹೋಬಳಿಯಾದ್ಯಂತ ಮಳೆ ಇಲ್ಲದೆ ರೈತರ ಪರಿಸ್ಥಿತಿ ಬಿಗಡಾಯಿಸಿದೆ. ಸಾವಿರಾರು ರುಪಾಯಿ ಖರ್ಚು ಮಾಡಿ ಬಿತ್ತಿದ ಬೆಳೆ ನೆಲಸಮವಾಗಿದೆ. ಸೂರ್ಯಕಾಂತಿ, ಎಳ್ಳು, ಮೆಕ್ಕೇಜೋಳ, ಹತ್ತಿ ಬೆಳೆಗಳು  ಸಂಪೂರ್ಣ ನಾಶವಾಗಿದೆ.
ಕೊಳವೆ ಬಾವಿ ಆಧರಿಸಿದ ಹೊಲಗಳಲ್ಲಿಯೂ ಅಂತರ್ಜಲ ಕಡಿಮೆ ಆಗಿದೆ. ಬಿತ್ತಿದ ಬೆಳೆ ಕೈಗೆ ಸಿಗದಂತಾಗಿದೆ. ಹೋಬಳಿಯ ಬಹುತೇಕ ಕೆರೆಗಳಾದ ಜಾವಗಲ್, ನೇರ್ಲಿಗೆ, ಅರಕೆರೆ, ಕೋಳಗುಂದ, ಮಾವುತನಹಳ್ಳಿ, ಬಂದೂರು, ಉಂಡಿಗನಾಳು, ಹಂದ್ರಾಳು, ಕಲ್ಯಾಡಿ, ಕರಗುಂದ ಕೆರೆಗಳೆಲ್ಲಾ ಖಾಲಿಯಾಗಿ ಭಣಗುಡುತ್ತಿವೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement