ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಸುಕೃತ ಫೆಲೋಶಿಪ್‌ಗೆ ಅರ್ಜಿ ಆಹ್ವಾನ

Srinivasa Murthy VN
Updated On : 28 Jul 2014, 9:48 am

ಕನ್ನಡಪ್ರಭ ವಾರ್ತೆ, ಹಾಸನ, ಜು.28
ರಾಜ್ಯದ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಲ್ಲಿ ಕೃಷಿ ಶಿಕ್ಷಣದ ಸ್ಥಿತಿಗತಿ ಕುರಿತು ಮಾಧ್ಯಮ ಸಂಶೋಧನೆ ನಡೆಸಲು ಪತ್ರಕರ್ತರಿಗೆ ಸುಕೃತ ಫೆಲೋಶಿಪ್ ನೀಡಲು ಸುಕೋ ಬ್ಯಾಂಕ್ ಕೃಷಿ ಪ್ರಶಸ್ತಿ ಸಂಚಾಲನಾ ಸಮಿತಿ ನಿರ್ಧರಿಸಿದೆ.
 ಫೆಲೋಶಿಪ್ ಮೊತ್ತ ಒಂದು ಲಕ್ಷ ರೂಪಾಯಿಗಳು. ಕಾರ್ಯನಿರತ ಪತ್ರಕರ್ತರು, ಹವ್ಯಾಸಿ ಪತ್ರಕರ್ತರು, ಬರಹಗಾರರು ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಆಗಸ್ಟ್ 31 ಕಡೇ ದಿನ.
ಮಾಧ್ಯಮ ಕ್ಷೇತ್ರದ ಅನುಭವ, ಸಂಪರ್ಕ ವಿವರಗಳೊಂದಿಗೆ ಅರ್ಜಿ ಸಲ್ಲಿಸಬಹುದು.  ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಲ್ಲಿ ಕೃಷಿ ಶಿಕ್ಷಣ ವಿಷಯ ಕುರಿತ ಅಧ್ಯಯನದ ಯೋಜನೆ ಬಗೆಗೆ 1,000 ಪದಗಳ ಮಿತಿಯಲ್ಲಿ ಸಾರಾಂಶ ಲೇಖನ ಬರೆದು ಅರ್ಜಿಯ ಜೊತೆ ಕಳಿಸಬೇಕು.
 ಫೆಲೋಶಿಪ್‌ಗೆ ಆಯ್ಕೆಯಾದವರು ವಿಷಯ ತಜ್ಞರ ಮಾರ್ಗದರ್ಶನದಲ್ಲಿ ನಿಗದಿತ ಸಮಯದಲ್ಲಿ ಅಧ್ಯಯನ ನಡೆಸಿ 10,000 ಪದಗಳ ಮಿತಿಯಲ್ಲಿ ಮಾಧ್ಯಮ ಸಂಶೋಧನಾ ವರದಿ ನೀಡಬೇಕಾಗುತ್ತದೆ. ಹೆಚ್ಚಿನ ವಿವರಗಳಿಗೆ ಸಮಿತಿ ಸಂಚಾಲಕರಾದ ಶಿವಾನಂದ ಕಳವೆಯವರನ್ನು 9448023715, ಇಮೇಲ್ sukritaawardzgmail.com ಸಂಪರ್ಕಿಸಬಹುದು ಎಂದು ಪತ್ರಿಕಾ ಪ್ರಕಟಣೆ ತಿಳಿಸಿದೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement