ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಅತಿಸಾರ ನಿಯಂತ್ರಣ ಪಾಕ್ಷಿಕ ಆಚರಣೆ: ಮಂಚೇಗೌಡ

Srinivasa Murthy VN
Updated On : 29 Jul 2014, 10:53 am

ಮಂಡ್ಯ: ಮಕ್ಕಳ ಅತಿಸಾರ ಭೇದಿಯಿಂದ ಶೂನ್ಯ ಸಾವು ಎಂಬ ಧ್ಯೇಯದೊಂದಿಗೆ ಜಿಲ್ಲಾದ್ಯಂತ ಆಗಸ್ಟ್ 8ರವರೆಗೆ ಅತಿಸಾರ ಭೇದಿ ತೀವ್ರತರ ನಿಯಂತ್ರಣ ಪಾಕ್ಷಿಕ ಆಚರಣೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಹೆಚ್.ಪಿ.ಮಂಚೇಗೌಡ ತಿಳಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ನಡೆದ ಅತಿಸಾರ ಭೇದಿ ತೀವ್ರತರ ನಿಯಂತ್ರಣ ಪಾಕ್ಷಿಕ ಕೈಗೊಳ್ಳುವ ಕುರಿತ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಡಿಎಚ್‌ಒ 5 ವರ್ಷದ ಒಳಗಿನ ಮಕ್ಕಳ ಒಟ್ಟು ಮರಣಗಳಲ್ಲಿ ಶೇ.11 ರಷ್ಟು ಸಾವುಗಳು ಅತಿಸಾರ ಭೇದಿಯಿಂದಾಗುತ್ತಿದೆ. ಮಕ್ಕಳ ಮರಣ ಪ್ರಮಾಣವನ್ನು ಕಡಿಮೆ ಮಾಡುವ ಉದ್ಧೇಶದಿಂದ ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.
ಸಾವು ತಪ್ಪಿಸಬಹುದು: ಅತಿಸಾರ ಭೇದಿಯಾದಾಗ ಓಆರ್‌ಎಸ್ ಮತ್ತು ಜಿಂಕ್ ದ್ರಾವಣವನ್ನು ಹಾಗೂ ಸೂಕ್ತ ಆಹಾರ ಪದಾರ್ಥಗಳನ್ನು ನೀಡುವುದರಿಂದ  ಭೇದಿಯಿಂದ ಉಂಟಾಗುವ ಸಾವುಗಳನ್ನು ತಪ್ಪಿಸಬಹುದು.  ಶುದ್ಥ ಕುಡಿಯುವ ನೀರು, ಪರಿಸರ ಹಾಗೂ ವೈಯಕ್ತಿಕ ನೈರ್ಮಲ್ಯ, ಎದೆ ಹಾಲುಣಿಸುವುದು, ಸೂಕ್ತ ಆಹಾರ ಸೇವನೆ ಮತ್ತು ಊಟಕ್ಕೆ ಮುನ್ನ ಹಾಗೂ ಶೌಚಾಲಯ ಬಳಕೆ ನಂತರ ಕೈಗಳನ್ನು ಸ್ವಚ್ಛಗಿ ತೊಳೆಯವುದರಿಂದ ಭೇದಿಯನ್ನು ತಡೆಗಟ್ಟಬಹುದು ಎಂದು ತಿಳಿಸಿದರು.
ಮೊದಲ ಹಂತ ಆರಂಭ: ಪಾಕ್ಷಿಕದ ಅಂಗವಾಗಿ ಈಗಾಗಲೇ ಮೊದಲ ಹಂತ ಆರಂಭವಾಗಿದೆ. ಆಗಸ್ಟ್ 8 ರವರೆಗೆ  ಆಶಾ ಕಾರ್ಯಕರ್ತೆಯರು, 5 ವರ್ಷದೊಳಗಿನ ಮಕ್ಕಳಿರುವ ಪ್ರತಿ ಮನೆಗೂ ಭೇಟಿ ನೀಡಿ ಅತಿಸಾರ ಭೇದಿ ನಿಯಂತ್ರಣಕ್ಕೆ ಒಂದೊಂದು ಓ.ಆರ್.ಎಸ್. ಪೊಟ್ಟಣವನ್ನು ನೀಡಿ ಓ.ಆರ್.ಎಸ್. ದ್ರಾವಣ ತಯಾರಿಸಿ ಉಪಯೋಗಿಸುವ ವಿಧಾನವನ್ನು ತಿಳಿಸಿ ಕೊಡುವರು ಎಂದರು.
ಆಹಾರ ಪದ್ಧತಿ: ಅತಿಸಾರ ಭೇದಿಯಾದಾಗ ಆಶಾ ಕಾರ್ಯಕರ್ತೆಯರಿಂದ ಜಿಂಕ್ ಸಿರಪ್ ಪಡೆದು ಕೊಳ್ಳಲು ಮಾಹಿತಿ ನೀಡುವರು ಮತ್ತು ವಯಸ್ಸಿಗನುಣವಾಗಿ ಎದೆ ಹಾಲುಣಿಸುವಿಕೆ ಮತ್ತು ಎಳೆ ಮಕ್ಕಳ ಆಹಾರ ಪದ್ಧತಿ ಬಗ್ಗೆ ಸಮಾಲೋಚನೆ ನಡೆಸುವರು ಎಂದು ಹೇಳಿದರು. ತಾಯಿ- ಮಗು ರಕ್ಷಣೆ, ತಾಯಿ  ಕಾರ್ಡ್‌ನಲ್ಲಿ ಮಗು ಕೆಂಪು ಪಟ್ಟಿಯಲ್ಲಿದ್ದರೆ (ತೀವ್ರ ಅಪೌಷ್ಟಿಕತೆ) ಪೌಷ್ಟಿಕ ಪುನರ್ವಸತಿ ಕೇಂದ್ರಕ್ಕೆ ಕಳುಹಿಸುತ್ತಾರೆ. ಹಾಗೂ ಸರ್ಕಾರಿ ಆಸ್ಪತ್ರೆಗಳಲ್ಲಿ ಮತ್ತು ಮಕ್ಕಳ ತಜ್ಞರ ಸಹಭಾಗಿತ್ವದಲ್ಲಿ ಅವರ ಕ್ಲಿನಿಕ್‌ಗಳಲ್ಲಿ ಓ.ಆರ್.ಎಸ್. ಮತ್ತು ಜಿಂಕ್ ಸಿರಪ್ ನೀಡಲು ವ್ಯವಸ್ಥೆ ಮಾಡಲಾಗಿದೆ. ಶಾಲಾ ಮಕ್ಕಳಿಗೆ ನೈರ್ಮಲ್ಯ ಹಾಗೂ ಸ್ವಚ್ಛವಾಗಿ ಕೈ ತೊಳೆಯುವಿಕೆಯ ಬಗ್ಗೆ ಮಾಹಿತಿ ನೀಡಲಾಗುತ್ತಿದೆ ಎಂದರು. ಎರಡನೇ ಹಂತದಲ್ಲಿ ಆಗಸ್ಟ್ 4 ರಿಂದ 8ನೇ ತಾರೀಖಿನವರೆಗೆ  ಆಶಾ ಕಾರ್ಯಕರ್ತೆಯರು ಐದು ವರ್ಷದೊಳಗಿನ ಎಲ್ಲಾ ಮಕ್ಕಳ ಮನೆಗೆ ಭೇಟಿ ನೀಡಿ ಅಪೌಷ್ಟಿಕ ಮಕ್ಕಳನ್ನು ಗುರುತಿಸಲಾಗುವುದು ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement