ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಪರಿಶ್ರಮದಿಂದ ಯಶಸ್ಸು ಸಾಧ್ಯ

Srinivasa Murthy VN
Updated On : 29 Jul 2014, 10:58 am

ಮೈಸೂರು,: ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಪರಿಶ್ರಮದಿಂದ ಯಶಸ್ಸು ಗಳಿಸಬೇಕು ಎಂದು ಶಾಸಕ ಎಂ.ಕೆ. ಸೋಮಶೇಖರ್ ಹೇಳಿದರು.
ಅಭಿನವ ಸಾಂಸ್ಕೃತಿಕ ಸಂಸ್ಥೆಯು ಗಾನಭಾರತಿಯಲ್ಲಿ ಮಂಗಳವಾರ ಆಯೋಜಿಸಿದ್ದ ಹದಿಮೂರನೆ ವಾರ್ಷಿಕೋತ್ಸವ ಪ್ರತಿಭಾ ಪುರಸ್ಕಾರ ಮತ್ತು ಸನ್ಮಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಇಂದಿನ ಸ್ಪರ್ಧಾತ್ಮಕ ಪ್ರಪಂಚದಲ್ಲಿ ಮಕ್ಕಳನ್ನು ಸರಿದಾರಿಯಲ್ಲಿ ಕೊಂಡೊಯ್ಯಬೇಕಾದ ಜವಾಬ್ದಾರಿ ಪೋಷಕರ ಮೇಲಿದೆ. ನಿರಂತರ ಪರಿಶ್ರಮ ಮತ್ತು ಕಠಿಣ ಮಾರ್ಗದ ಮೂಲಕ ಯಶಸ್ಸು ಗಳಿಸಬೇಕು. ಅಡ್ಡದಾರಿಯ ಸಾಧನೆ ಹೆಚ್ಚು ಕಾಲ ಬಾಳಿಕೆ ಬರದು. ಸಾಧನೆ ಹಾದಿಯಲ್ಲಿ ಇರುವವರಿಗೆ ಧನಸಹಾಯಕ್ಕಿಂತ ಪ್ರೋತ್ಸಾಹ ಮುಖ್ಯ. ಒಬ್ಬರನ್ನು ಉತ್ತೇಜಿಸುವ ಮನಸ್ಸು ಅಗತ್ಯ ಇದೆ ಎಂದರು. ನಗರದಲ್ಲಿ ಮತ್ತೆ ಉದ್ಯೋಗ ಮೇಳ ಆರಂಭಿಸುತ್ತಿದ್ದೇನೆ. 2,500 ಹುದ್ದೆಗಳು ಖಾಲಿ ಇವೆ. ಆದ್ದರಿಂದ ಈಗಲೆ ಎಲ್ಲ ವರ್ಗದ ವಿದ್ಯಾರ್ಥಿಗಳಿಗೆ ಕಂಪ್ಯೂಟರ್‌ನ ಉಚಿತ ಕಲಿಕೆ ಮತ್ತು ಇಂಗ್ಲಿಷ್ ಕಲಿಕಾ ತರಗತಿಗಳನ್ನು ಆಯೋಜಿಸಿರುವುದಾಗಿ ತಿಳಿಸಿದರು. ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಎಚ್.ಕಾಂತರಾಜ್, ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಮಾನಸ, ಮಹಾರಾಜ ಕಾಲೇಜು ಪ್ರಾಂಶುಪಾಲ ಡಾ.ಬಿ. ನಾಗರಾಜ ಮೂರ್ತಿ, ಎನ್‌ಎಫ್‌ಟಿಇ- ಬಿಎಸ್‌ಎನ್‌ಎಲ್ ಮೈಸೂರು- ಚಾಮರಾಜನಗರ ಜಿಲ್ಲಾ ನಿವೃತ್ತ ಕಾರ್ಯದರ್ಶಿ ಎಂ. ಮಹಾದೇವೇಗೌಡ ಅವರನ್ನು ಸನ್ಮಾನಿಸಲಾಯಿತು.
ಡಿಡಿಪಿಐ ಎಚ್.ಆರ್.ಬಸಪ್ಪ, ಉಪ ವಿಭಾಗಾಧಿಕಾರಿ ಬಸವರಾಜು ಅತಿಥಿಯಾಗಿದ್ದರು. ಸಂಘದ ಅಧ್ಯಕ್ಷ ಎನ್. ನಾಗರಾಜು, ಕಾರ್ಯದರ್ಶಿ ಡಾ.ಜೆ. ಮಹಾದೇವ, ಉಪಾಧ್ಯಕ್ಷ ಸಿಂ. ಬಾಲಕೃಷ್ಣ ಸಂಗಾಪುರ, ಸಹ ಕಾರ್ಯದರ್ಶಿ ಸಿ.ಸುರೇಶ್, ಖಜಾಂಜಿ ಎಚ್. ಕೃಷ್ಣಯ್ಯ, ಆರ್.ಮಹದೇವು, ಡಿ.ಹೊನ್ನಾಲೇಗೌಡ, ಎಚ್. ಚನ್ನಬಸವೇಗೌಡ, ಎಂ.ಮಹದೇವೇಗೌಡ, ಸಿ. ಮಹೇಶ್, ಎಲ್. ನಾಗರಾಜು, ಎಸ್. ವೀರಭದ್ರಯ್ಯ, ಮಂಗಳಾ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement